Puffed Rice/Kadle Puri/Murmure :ಮಂಡಕ್ಕಿ, ಚುರ್ ಮುರಿಯನ್ನು ಇಷ್ಟಪಟ್ಟು ತಿನ್ನುವಿರಾ ? ಈ ವಿಡಿಯೋವನ್ನು ಒಮ್ಮೆ ನೋಡಿ

Puffed Rice/Kadle Puri/Murmure : ಮಂಡಕ್ಕಿ, ಚುರ್ ಮುರಿಯನ್ನು  ಇಷ್ಟಪಟ್ಟು ತಿನ್ನುವಿರಾ ?  ಈ ವಿಡಿಯೋವನ್ನು ಒಮ್ಮೆ ನೋಡಿ ಹೊರಗಿನಿಂದ ತಂದ ತಿನಿಸುಗಳನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಪ್ಯಾಕೆಟ್ ನಲ್ಲಿ ಸಿಗುವ ಅನೇಕ ವಸ್ತುಗಳನ್ನು ತಂದು ಸೇವಿಸುತ್ತೇವೆ. 

Written by - Ranjitha R K | Last Updated : Jan 3, 2024, 06:02 PM IST
  • ಆಹಾರ ಉತ್ಪನ್ನಗಳು ಮಾನವನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
  • ಯಾವುದೇ ಆಹಾರವನ್ನು ತಯಾರಿಸುವಾಗ ಸ್ವಚ್ಚತೆ ಕಾಪಾಡುವುದು ಬಹಳ ಮುಖ್ಯ.
  • ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ.
Puffed Rice/Kadle Puri/Murmure :ಮಂಡಕ್ಕಿ, ಚುರ್ ಮುರಿಯನ್ನು ಇಷ್ಟಪಟ್ಟು ತಿನ್ನುವಿರಾ ? ಈ ವಿಡಿಯೋವನ್ನು ಒಮ್ಮೆ ನೋಡಿ  title=

ಬೆಂಗಳೂರು : Puffed Rice/Kadle Puri/Murmure : ಮಂಡಕ್ಕಿ, ಚುರ್ ಮುರಿಯನ್ನು  ಇಷ್ಟಪಟ್ಟು ತಿನ್ನುವಿರಾ ?  ಈ ವಿಡಿಯೋವನ್ನು ಒಮ್ಮೆ ನೋಡಿ  ಆಹಾರ ಉತ್ಪನ್ನಗಳು ಮಾನವನ ಆರೋಗ್ಯದ ಮೇಲೆ ನೇರವಾಗಿ  ಪರಿಣಾಮ ಬೀರುತ್ತದೆ. ಯಾವುದೇ ಆಹಾರವನ್ನು ತಯಾರಿಸುವಾಗ ಸ್ವಚ್ಚತೆ ಕಾಪಾಡುವುದು ಬಹಳ ಮುಖ್ಯ. ಇಲ್ಲವಾದರೆ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ಮನೆಯಲ್ಲಿ ಅಡುಗೆ ಮಾಡುವಾಗ ಶುಚಿತ್ವದ ಬಗ್ಗೆ ನಾವು ಅತಿಯಾದ ಕಾಳಜಿ ವಹಿಸುತ್ತೇವೆ. ಆದರೆ, ಹೊರಗಿನಿಂದ ತಂದ ತಿನಿಸುಗಳನ್ನು ಯಾವ ರೀತಿ ತಯಾರಿಸಲಾಗುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಪ್ಯಾಕೆಟ್ ನಲ್ಲಿ ಸಿಗುವ ಅನೇಕ ವಸ್ತುಗಳನ್ನು ತಂದು ಸೇವಿಸುತ್ತೇವೆ. 

ಅಂತಹ ಒಂದು ಪದಾರ್ಥ ಪಫ್ಡ್ ರೈಸ್ ಅಂದರೆ ಮಂಡಕ್ಕಿ, ಅಥವಾ ಕಡಲೆಪುರಿ. ಮಂಡಕ್ಕಿಯಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಚುರುಮುರಿ, ಬೆಲ್ ಪೂರಿ, ಹೀಗೆ ಸಂಜೆಯ ಸ್ನಾಕ್ ಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ದೋಸೆ, ಇಡ್ಲಿಗಳು ಮೆದುವಾಗುವ ಸಲುವಾಗಿಯೂ ಬಳಸಲಾಗುತ್ತದೆ. ಇನ್ನು ಕೆಲವರು ಮಂಡಕ್ಕಿ ಉಂಡೆಗಳನ್ನು ಕೂಡಾ ತಯಾರಿಸುತ್ತಾರೆ. ಮಂಡಕ್ಕಿ ಸುಲಭವಾಗಿ ಜೀರ್ಣವಾಗುತ್ತವೆ. ಹಾಗಾಗಿ ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ತಯಾರಿಸುವ ಬಗೆಬಗೆಯ ಖಾದ್ಯಗಳನ್ನೂ ಜನರು ಇಷ್ಟಪಡುತ್ತಾರೆ. ಆದರೆ ರುಚಿ ಎಂದು ಬಾಯಿ ಚಪ್ಪರಿಸಿ ತಿನ್ನುವ ಈ ಮಂಡಕ್ಕಿಯನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದು ತಿಳಿದಿದೆಯೇ? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : ವರ ಹಣ, ಸಿಗರೇಟ್‌ ಕೊಟ್ರಷ್ಟೇ ವಧು ಜೊತೆ ಮದುವೆ..! ಹಿಗೋಂದು ವಿಚಿತ್ರ ಸಂಪ್ರದಾಯ

ಕಡಲೆಪುರಿ ತಯಾರಿಸುವ ಸ್ಥಳವನ್ನು ಒಮ್ಮೆ ನೋಡಿಕೊಳ್ಳಿ :  
ಕಡಲೆಪುರಿ ಅಥವಾ ಮಂಡಕ್ಕಿ ತಯಾರಿಸುವ ಕಾರ್ಖಾನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಕಡಲೆಪುರಿ  ಮಾಡುವ ವಿಧಾನವನ್ನು ತೋರಿಸಲಾಗಿದೆ. ನಾವು ತುಂಬಾ ಇಷ್ಟಪಡುವ ಕಡಲೆಪುರಿ ಯನ್ನು ಕಾಲುಗಳಿಂದ ತುಳಿಯುವ ಮೂಲಕ ತಯಾರಿಸಲಾಗುತ್ತದೆ. ಇದಕ್ಕಾಗಿ ಅಕ್ಕಿಯನ್ನು ಮೊದಲು ಕಾಲುಗಳಿಂದ ಸ್ವಚ್ಛಗೊಳಿಸಲಾಗುತ್ತದೆ. ಇದರ ನಂತರ, ಅವುಗಳನ್ನು ಒಣಗಿಸಿ ಕಡಲೆಪುರಿ ತಯಾರಿಸಲಾಗುತ್ತದೆ. 

ಕಾರ್ಖಾನೆಯಲ್ಲಿ ತಯಾರಿಸಿದ ಕಡಲೆಪುರಿ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

ಇದನ್ನೂ ಓದಿ : ಚಿಕ್ಕಿನಾ ಇಷ್ಟ ಪಟ್ಟು ತಿಂತಿರಾ ! ತಿನ್ನುವ ಮೊದಲು ಒಮ್ಮೆ ಈ ವಿಡಿಯೋ ನೋಡಿ

ಉಪ್ಪು ಹೇಗೆ ಸೇರಿಸಲಾಗುತ್ತದೆ:
ಕಾರ್ಖಾನೆಗಳಲ್ಲಿ ತಯಾರಿಸಿದ ಕಡಲೆಪುರಿಗೆ ಉಪ್ಪನ್ನು ಸೇರಿಸಲಾಗುತ್ತದೆ. ಇದಕ್ಕಾಗಿ, ಉಪ್ಪು ಚೀಲಗಳಿಂದ ಉಪ್ಪನ್ನು ಕಡಲೆಪುರಿ  ಮೇಲೆ ಸುರಿಯಲಾಗುತ್ತದೆ. ಉಪ್ಪು ಮತ್ತು ಕಡಲೆಪುರಿಯನ್ನು ಪಾದಗಳ ಸಹಾಯದಿಂದ ಮತ್ತೆ ಬೆರೆಸಲಾಗುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದಂತೆಯೇ ವೈರಲ್ ಆಗಿದೆ.

ನೀವು ಮನೆಯಲ್ಲಿ ಗುಣಮಟ್ಟದ ಕಡಲೆಪುರಿ  ತಯಾರಿಸಬಹುದು : 
ಕಡಿಮೆ-ಗುಣಮಟ್ಟದ ಕಡಲೆಪುರಿ ಪ್ಯಾಕೆಟ್ ಗಳನ್ನು ಖರೀದಿಸುವ ಬದಲು, ಮನೆಯಲ್ಲಿ ಅವುಗಳನ್ನು ತಯಾರಿಸಲು ಪ್ರಯತ್ನಿಸಬಹುದು. ಈಗ ಮನೆಯಲ್ಲಿ ಕಡಲೆಪುರಿ ಹೇಗೆ ತಯಾರಿಸಬಹುದು ನೋಡೋಣ.

ಮೊದಲು ಅಕ್ಕಿಯಲ್ಲಿನ ಕಲ್ಲುಗಳು ಮತ್ತು ಕಪ್ಪು ಅಕ್ಕಿಯನ್ನು ತೆಗೆದು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಅದರ ನಂತರ, 4 ಟೇಬಲ್ಸ್ಪೂನ್ ನೀರನ್ನು ತೆಗೆದುಕೊಂಡು ಅದಕ್ಕೆ 3 ಚಿಟಿಕೆ ಉಪ್ಪು ಸೇರಿಸಿ ಮತ್ತು ಉಪ್ಪನ್ನು ಚೆನ್ನಾಗಿ ಕರಗಿಸಿ.

ಇದನ್ನೂ ಓದಿ : Snake Video : ಹಾವು ಪೊರೆಬಿಡುವ ವಿಚಿತ್ರ ದೃಶ್ಯ ವೈರಲ್‌

ಅಗಲವಾದ ಬಟ್ಟಲಿನಲ್ಲಿ ಅಕ್ಕಿಯನ್ನು ತೆಗೆದುಕೊಂಡು, ಸಿದ್ಧಪಡಿಸಿದ ಉಪ್ಪುನೀರನ್ನು ಅದರ ಮೇಲೆ ಸಿಂಪಡಿಸಿ ನಿಮ್ಮ ಕೈಗಳಿಂದ ಚೆನ್ನಾಗಿ ಮಿಕ್ಸ್ ಮಾಡಿ. ಅಂದರೆ ಅಕ್ಕಿ ಮೇಲೆ ಉಪ್ಪು ನೀರು ಹರಡಬೇಕು.  ಒಮ್ಮೆಲೇ ಎಲ್ಲಾ ಉಪ್ಪು ನೀರನ್ನು ಸುರಿಯುವ ಅಗತ್ಯವಿಲ್ಲ. ನಿಮಗೆ ಬೇಕಾದಷ್ಟು ಉಪ್ಪು ನೀರನ್ನು ಬಳಸಿದರೆ ಸಾಕು. ನಂತರ ಉಪ್ಪು ನೀರಿನಲ್ಲಿ ಬೆರೆಸಿದ ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಬಹುದು. ಉತ್ತಮವಾದ ಮರಳನ್ನು ಚೆನ್ನಾಗಿ ಶೋಧಿಸಿ ಮತ್ತು ಸಣ್ಣ ಪ್ರಮಾಣದ ಮರಳು ತೆಗೆದುಕೊಳ್ಳಿ. ಇದನ್ನು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಬಿಸಿ ಮಾಡಿ. ಆ ನಂತರ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹುರಿಯಿರಿ.

 ( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News