Funny Monkey Video : ಬೈಕ್‌ ಕನ್ನಡಿಯಲ್ಲಿ ಮುಖ ನೋಡಿಕೊಂಡ ಈ ಮಂಗನ ರಿಯಾಕ್ಷನ್‌ ನೋಡಿ!

Funny Monkey Video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅವಕಾಶ ಸಿಕ್ಕ ತಕ್ಷಣ ಚೇಷ್ಟೆ ಮಾಡಲು ಶುರು ಮಾಡುತ್ತದೆ. ಕೆಲವೊಮ್ಮೆ ಪ್ರಾಣಿಗೆ ಕಪಾಳಮೋಕ್ಷ ಮಾಡಿ ಮರ ಹತ್ತಿದರೆ, ಕೆಲವೊಮ್ಮೆ ಯಾರದೋ ವಸ್ತುಗಳನ್ನು ಕಿತ್ತುಕೊಂಡು ಓಡುತ್ತವೆ. ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ. 

Written by - Chetana Devarmani | Last Updated : Nov 24, 2022, 09:49 PM IST
  • ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ
  • ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಂಗನ ವಿಡಿಯೋ ಹರಿದಾಡುತ್ತಿದೆ
  • ಬೈಕ್‌ ಕನ್ನಡಿಯಲ್ಲಿ ಮುಖ ನೋಡಿಕೊಂಡ ಈ ಮಂಗನ ರಿಯಾಕ್ಷನ್‌ ನೋಡಿ!
Funny Monkey Video : ಬೈಕ್‌ ಕನ್ನಡಿಯಲ್ಲಿ ಮುಖ ನೋಡಿಕೊಂಡ ಈ ಮಂಗನ ರಿಯಾಕ್ಷನ್‌ ನೋಡಿ!  title=
ಕೋತಿ

Funny Monkey Video : ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅವಕಾಶ ಸಿಕ್ಕ ತಕ್ಷಣ ಚೇಷ್ಟೆ ಮಾಡಲು ಶುರು ಮಾಡುತ್ತದೆ. ಕೆಲವೊಮ್ಮೆ ಪ್ರಾಣಿಗೆ ಕಪಾಳಮೋಕ್ಷ ಮಾಡಿ ಮರ ಹತ್ತಿದರೆ, ಕೆಲವೊಮ್ಮೆ ಯಾರದೋ ವಸ್ತುಗಳನ್ನು ಕಿತ್ತುಕೊಂಡು ಓಡುತ್ತವೆ. ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ. ಇದರಲ್ಲಿ ಕೋತಿ ಬೈಕ್‌ನ ಕನ್ನಡಿಯಲ್ಲಿ ಮಿಸ್‌ ಆಗಿ ತನ್ನ ಮುಖವನ್ನೇ ನೋಡಿಕೊಂಡಿದ್ದು, ಅದರ ರಿಯಾಕ್ಷನ್‌ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. 

ಇದನ್ನೂ ಓದಿ : Trending Video : ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ.. ವಿಡಿಯೋ ವೈರಲ್‌

ವೈಲ್ಡ್ ಅನಿಮಲ್ ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಕೋತಿ ಗುಡಿಸಲಿನಲ್ಲಿ ನಿಲ್ಲಿಸಿರುವ ಬೈಕ್ ಬಳಿ ಹೇಗೆ ಹೋಗಿ ಅದರ ಮೇಲೆ ಕುಣಿದಾಡುತ್ತಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು. ಥಟ್ಟನೆ ಬೈಕ್ ನ ಕನ್ನಡಿಯಲ್ಲಿ ತನ್ನ ಮುಖವನ್ನೇ ನೋಡುತ್ತದೆ. ತನ್ನ ಮುಖವನ್ನು ತಾನೇ ನೋಡಿಕೊಂಡ ಬಳಿಕ ಈ ಮಂಗಣ್ಣನ ಪ್ರತಿಕ್ರಿಯೆ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗುತ್ತದೆ. 

 

 

ಕೋತಿಗೆ ಸಂಬಂಧಿಸಿದ ಈ ವಿಡಿಯೋ ನೋಡಿ ನೆಟಿಜನ್‌ಗಳು ಬಿದ್ದು ಬಿದ್ದು ನಗುತ್ತಿದ್ದಾರೆ. ಇದನ್ನು ram_maurya55555 ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದುವರೆಗೂ ಸಾವಿರಾರು ವೀಕ್ಷಣೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. 

ಇದನ್ನೂ ಓದಿ : Viral Video : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News