Viral video : ಚಿಟ್ಟೆಯನ್ನು ಕಂಡು ಮಕ್ಕಳಂತೆ ಕುಣಿದು ಕುಣಿದು ಹಿಂಬಾಲಿಸುತ್ತಿರುವ ಪೆಂಗ್ವಿನ್ ಗುಂಪು

ಚಿಟ್ಟೆಯ ಹಿಂದೆ ಬಿದ್ದಿರುವ ಪೆಂಗ್ವಿನ್ ಗಳ ಗುಂಪು ಪುಟ್ಟ ಮಕ್ಕಳಂತೆ ಕುಪ್ಪಳಿಸಿಕೊಂಡು ಸಾಗುತ್ತಿದೆ. ಹೀಗೆ ಮುಂದೆ ಸಾಗಿ ಆ ಚಿಟ್ಟೆಯನ್ನು ಹಿಡಿದೇ ಬಿಡುತ್ತೇವೆ ಎಂಬ ಭಾವನೆಯಲ್ಲಿದ್ದಂತಿದೆ ಆ ಗುಂಪು .

Written by - Ranjitha R K | Last Updated : Jun 6, 2022, 05:37 PM IST
  • ಗುಂಪಿನಲ್ಲಿ ಹೊರಟಿವೆ ಪೆಂಗ್ವಿನ್ ಗಳು
  • ಚಿಟ್ಟೆ ಹಿಡಿಯಲು ಹೊರಟ ತಂಡ
  • ವೈರಲ್ ಆಯ್ತು ಈ ವಿಡಿಯೋ
Viral video : ಚಿಟ್ಟೆಯನ್ನು ಕಂಡು ಮಕ್ಕಳಂತೆ  ಕುಣಿದು ಕುಣಿದು ಹಿಂಬಾಲಿಸುತ್ತಿರುವ ಪೆಂಗ್ವಿನ್ ಗುಂಪು title=
Penguin Viral Video (photo twitter)

ಬೆಂಗಳೂರು : ಮುದ್ದು ಮುದ್ದಾಗಿರುವ  ಪೆಂಗ್ವಿನ್ ಗಳನ್ನು ನೋಡುವುದೇ ಚೆಂದ. ನೀರಿ ನಲ್ಲಿರುವ ಪೆಂಗ್ವಿನ್‌ಗಳ ಗುಂಪನ್ನು ರಾಫ್ಟ್ ಎಂದು ಕರೆಯಲಾಗುತ್ತದೆ. ಅದೇ ನೆಲದ ಮೇಲೆ  ಪೆಂಗ್ವಿನ್‌ಗಳ ಗುಂಪು ಓಡಾಡುತ್ತಿದ್ದರೆ ವಾಡೆಲ್ ಎಂದು ಕರೆಯಲಾಗುತ್ತದೆ.  ಪೆಂಗ್ವಿನ್ ಗಳು ಗುಂಪು ಗುಂಪಾಗಿ ಓಡಾಡುತ್ತಿದ್ದರೆ ಕಣ್ಣಿಗೆ ಹಬ್ಬ. ಇಂಥಹ ಪೆಂಗ್ವಿನ್ ಗಳ ಗುಂಪಿನ ವಿಡಿಯೋವೊಂದು ವೈರಲ್ ಆಗುತ್ತಿದೆ. 

ಇಲ್ಲಿ ಪೆಂಗ್ವಿನ್‌ಗಳು ಮಗುವಿನಂತೆ ಚಿಟ್ಟೆಯ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಒಂದು ಪುಟ್ಟ ಚಿಟ್ಟೆ ತನ್ನ ಪಾಡಿಗೆ ಹಾರುತ್ತಿದ್ದರೆ, ಪೆಂಗ್ವಿನ್‌ಗಳ ಗುಂಪು ಅದರ ಹಿಂದೆ ಹಿಂದೆ ಕುಪ್ಪಳಿಸುತ್ತಾ ಸಾಗುತ್ತಿದೆ. ಇನ್ನೇನು ಆ ಚಿಟ್ಟೆಯನ್ನು ಹಿಡಿದೇ ಬಿಡುತ್ತೇವೆ ಎನ್ನುವ ಖುಷಿ ಆ ಪೆಂಗ್ವಿನ್‌ಗಳಿಗೆ ಇದ್ದಂತಿದೆ. ಈ ವಿಡಿಯೋ ನೋಡುತ್ತಿದ್ದರೆ ಚಿಟ್ಟೆ ಹಿಡಿಯಲು ಮಕ್ಕಳು ಅದರ ಹಿಂದೆ ಓದುತ್ತಿರುವಂತೆ ಭಾಸವಾಗುತ್ತದೆ. ಪೆಂಗ್ವಿನ್‌ಗಳು ಈ ರೀತಿ ಚಿಟ್ಟೆಯ ಹಿಂದೆ ಬಿದ್ದು ಓಡುತ್ತಿರುವ ವಿಡಿಯೋ ನಿಜಕ್ಕೂ ಅದ್ಬುತವಾಗಿದೆ. 

ಇದನ್ನೂ ಓದಿ : Lions Fight Video: ಸಿಂಹಿಣಿಗಾಗಿ ಎರಡು ಸಿಂಹಗಳ ಕಾದಾಟ..! ಕೊನೆಗೂ ಗೆದ್ದವರ್ಯಾರು ?

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್  : 
ಕೆಲವು ಸೆಕೆಂಡುಗಳ ಈ ವೀಡಿಯೊ ಲಕ್ಷಾಂತರ ಜನರ ಮನ ಗೆದ್ದಿದೆ. ನೆಟ್ಟಿಗರು ಈ ವಿಡಿಯೋವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡ ಈ ವೀಡಿಯೊವನ್ನು ಇಲ್ಲಿಯವರೆಗೆ 3.2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲದೆ ವಿಡಿಯೋ ವೀಕ್ಷಿಸಿದವರು ತಮ್ಮ್ಮ ಮನಸ್ಸಿನ ಭಾವನೆಗಕ್ಲನ್ನು ಕೂಡಾ ಹಂಚಿಕೊಂಡಿದ್ದಾರೆ. 

 

ಕೆಲವರು ಈ ವಿಡಿಯೋ ಇನ್ನು ಹೆಚ್ಚು ಇರಬೇಕಿತ್ತು ಎಂದು ಬರೆದಿದ್ದರೆ, ಇನ್ನು ಕೆಲವರು ಚಿಟ್ಟೆಯ ಹಿಂದೆ ಬಿದ್ದು ಹಾರುತ್ತಿರುವ ಪೆಂಗ್ವಿನ್ ಗಳನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Viral News: ಸರ್ಕಾರಿ ಅಧಿಕಾರಿಯಾಗುವ ಕನಸು, ಒಂದೇ ಕಾಲಿನಲ್ಲಿ ಶಾಲೆಗೆ ಬರುವ ವಿದ್ಯಾರ್ಥಿ!

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News