Parrot Tea Video: ನೋಡಲು ಅತಿ ಸುಂದರವಾದ ಹಾಗೂ ಬುದ್ಧಿಯಲ್ಲಿ ಅತಿ ಚುರುಕಾದ ಪಕ್ಷಿಗಳಲ್ಲಿ ಗಿಳಿ ಕೂಡ ಒಂದು. ಗಿಳಿಗಳು ಮನುಷ್ಯರನ್ನು ನಕಲು ಮಾಡುವುದನ್ನು ನೀವು ಹಲವು ಬಾರಿ ನೋಡಿರಬಹುದು. ಭಾರತದಲ್ಲಿ ಜನರು ಗಿಳಿಯನ್ನು ತಮ್ಮ ಮನೆಯಲ್ಲಿ ಸಾಕುತ್ತಾರೆ ಹಾಗೂ ಸ್ವಂತ ಮಗುವಿನಂತೆ ಅದರ ಆರೈಕೆಯನ್ನು ಮಾಡುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ ಜನರು ಹಸಿರು ಬಣ್ಣದ ಗಿಳಿಯನ್ನು ಸಾಕುತ್ತಾರೆ. ಆದರೆ, ಕೆಲವರು ವಿದೇಶಿ ಗಿಳಿಗಳನ್ನು ಕೂಡ ಸಾಕುವುದನ್ನು ನೀವು ನೋಡಿರಬಹುದು. ಇತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ ಮತ್ತು ಈ ವಿಡಿಯೋ ಮನಸೋಲುವಂತಿದೆ.
ಹಿಂದಿಯಲ್ಲಿ 'ಅಮ್ಮಾ' ಎಂದು ಕರೆದ ವಿದೇಶಿ ಗಿಳಿ
ಇಂಡೋನೇಷ್ಯಾದ ಮಾಲುಕು ಅರಣ್ಯ ಪ್ರದೇಶದಲ್ಲಿ ಕಂಡುಬರುವ ಗಿಳಿಯೊಂದನ್ನು ನೀವು ವೀಡಿಯೋದಲ್ಲಿ ವೀಕ್ಷಿಸಬಹುದು. ವಿದೇಶಿ ತಳಿಯದ್ದಾದರು ಕೂಡ ಈ ಗಿಳಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತದೆ. ಈ ವಿಡಿಯೋದಲ್ಲಿ ಗಿಳಿ ತನ್ನ ಮನೆಯೊಡತಿಯನ್ನು ಅಮ್ಮಾ ಎಂದು ಕರೆದು ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅಷ್ಟೇ ಅಲ್ಲ ಈ ವಿಡಿಯೋದಲ್ಲಿ ಗಿಳಿ ತನ್ನ ಮನೆಯೊಡತಿಗೆ ಚಹಾ ತರಲು ಆದೇಶ ಕೂಡ ಮಾಡುವುದನ್ನು ನೀವು ನೋಡಬಹುದು. ಇದಾದ ಬಳಿಕ ಗಿಳಿಯ ಒಡತಿ ನೀಡಿರುವ ಉತ್ತರವನ್ನು ಕೇಳಿ ನೀವೂ ಕೂಡ ಆಶ್ಚರ್ಯಕ್ಕೆ ಒಳಗಾಗುವಿರಿ.
ಇದನ್ನೂ ಓದಿ-OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ?
ಕೆಂಪು ಬಣ್ಣದ ಗಿಳಿಯೊಂದು ಲಿವಿಂಗ್ ರೂಮ್ ನಲ್ಲಿ ಕುಳಿತಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಅದು ತನ್ನ ಒಡತಿಯನ್ನು 'ಅಮ್ಮಾ' ಎಂದು ಕರೆದು ಟೀ ತರಲು ಹೇಳುತ್ತದೆ. ಇನ್ನೊಂದೆಡೆ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾದ ಅದರ ಒಡತಿ ಕೂಡ ಅಡುಗೆ ಮನೆಯಿಂದಲೇ 'ಬಂದೆ ಮಗಾ' ಎನ್ನುತ್ತಾಳೆ. ಗಿಳಿ ಸಿಳ್ಳೆಹೊಡೆಯುತ್ತ ತನ್ನೊಡತಿಯೊಂದಿಗೆ ಹಿಂದಿಯಲ್ಲಿ ಮಾತನಾಡುವುದನ್ನು ನೀವು ಕೇಳಬಹುದು. ಇದಾದ ಬಳಿಕ ಮನೆಯೋಡತಿ ಕೂಡ 'ಬಂದೆ ಮಗಾ... ಟೀ ತರುತ್ತಿದ್ದೇನೆ' ಎನ್ನುತ್ತಾಳೆ. ನಂತರ ಗಿಳಿ ಮುದ್ದಾಗಿ ಟೀ, ಟೀ.. ಟೀ... ಎಂದು ಸಂತಸಪಡುತ್ತಿದೆ. ವಿಡಿಯೋ ನೋಡಿ..
बात करने का अलग ही मज़ा होता है,
जब कोई इतनी आत्मीयता से संवाद करता है.यह खूबसूरत और मासूम वार्तालाप सुनकर लगता है काश हम सभी जीवों से ऐसे ही बात कर सकते... pic.twitter.com/uX80K59OPT
— Dipanshu Kabra (@ipskabra) May 26, 2022
ಕ್ಯೂಟ್ ವಿಡಿಯೋ ಹಂಚಿಕೊಂಡ ಐಪಿಎಸ್ ಅಧಿಕಾರಿ
ದೀಪಾಂಶು ಕಾಬ್ರಾ ಹೆಸರಿನ ಐಪಿಎಸ್ ಅಧಿಕಾರಿಯೊಬ್ಬರು ಈ ವೈರಲ್ ಆಗುತ್ತಿರುವ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಶನ್ ನೀಡಿರುವ ಅವರು, 'ಇಷ್ಟೊಂದು ಆತ್ಮೀಯತೆಯಿಂದ ಯಾರಾದರು ಮಾತನಾಡಿಸಿದರೆ, ಮಾತನಾಡುವ ಮಜವೇ ವಿಭಿನ್ನವಾಗಿರುತ್ತದೆ. ಈ ಸುಂದರ ಸಂಭಾಷಣೆಯನ್ನು ಕೇಳಿದರೆ, ನಾವೂಗಳು ಕೂಡ ಜೀವಿಗಳ ಜೊತೆಗೆ ಇದೆ ರೀತಿ ಮಾತನಾಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದೆನೆಸುತ್ತದೆ...' ಎಂದಿದ್ದಾರೆ. ಈ ವಿಡಿಯೋ ಇಂಟರ್ನೆಟ್ ಬಳಕೆದಾರರಿಗೆ ಭಾರಿ ಇಷ್ಟವಾಗುತ್ತಿದೆ. ಇದುವರೆಗೆ ಸುಮಾರು 35 ಸಾವಿರಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು ಹಲವರು ಲೈಕ್ ಕೂಡ ಮಾಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.