Funny Video: ಸಿಂಟೆಕ್ಸ್‌ನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಕೋತಿಗಳು..‌ ಮಂಕಿ ಗ್ಯಾಂಗ್ ಮೋಜು ಮಸ್ತಿ‌ ನೋಡಿ!

Monkey Video: ಪ್ರಾಣಿಗಳಿಗೆ ತಾಪಮಾನ ಏರಿಕೆ ಶಾಪವಿದ್ದಂತೆ. ಕೋತಿಗಳ ಗುಂಪಿನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಮಂಗಗಳ ಮೋಜು ಮಸ್ತಿ ನೆಟ್ಟಿಗರನ್ನು ರಂಜಿಸುತ್ತಿದೆ. 

Written by - Chetana Devarmani | Last Updated : Jun 16, 2023, 11:21 PM IST
  • ಸಿಂಟೆಕ್ಸ್‌ನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಕೋತಿಗಳು
  • ಕೋತಿಗಳ ಗುಂಪಿನ ವಿಡಿಯೋ ಭಾರೀ ವೈರಲ್
  • ಮಂಗಗಳ ಆಟ ಕಂಡರೆ ಹೊಟ್ಟೆ ಹುಣ್ಣಾಗುವಂತೆ ನಗ್ತೀರಾ
Funny Video: ಸಿಂಟೆಕ್ಸ್‌ನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಕೋತಿಗಳು..‌ ಮಂಕಿ ಗ್ಯಾಂಗ್ ಮೋಜು ಮಸ್ತಿ‌ ನೋಡಿ!  title=

Funny Monkey Video: ಕೆಲವೆಡೆ ಮಳೆ ಬಾರದೆ ಬಿಸಿಲ ತಾಪದಿಂದ ಜನ ಕಂಗಾಲಾಗಿದ್ದಾರೆ. ಮನೆಯಲ್ಲಿರುವ ಫ್ಯಾನ್ ಮತ್ತು ಎಸಿಗಳಲ್ಲಿ ಮನುಷ್ಯರಿಗೆ ಏನೋ ಪರಿಹಾರವಿದೆ. ಈ ಶಾಖದಲ್ಲಿ ಹೊರಗೆ ವಾಸಿಸುವ ಮೂಕ ಪ್ರಾಣಿಗಳ ಬಗ್ಗೆ ಯೋಚಿಸಿ. ಈ ಪ್ರಾಣಿಗಳಿಗೆ ತಾಪಮಾನ ಏರಿಕೆ ಶಾಪವಿದ್ದಂತೆ. ಕೋತಿಗಳ ಗುಂಪಿನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ಕೋತಿಗಳು ಕಟ್ಟಡದ ಮೇಲಿರುವ ಟ್ಯಾಂಕ್‌ನಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಇವುಗಳ ಮೋಜು ಮಸ್ತಿ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ಇದನ್ನೂ ಓದಿ: Snake Video: ಇದು ಹಠಮಾರಿ ಹಾವು.. ತನ್ನನ್ನು ತಾನೇ ಹೇಗೆ ಕಚ್ಚಿಕೊಂಡು ಸಾಯುತ್ತದೆ ನೀವೇ ನೋಡಿ..

ಈ ಕೋತಿಗಳು ಕಟ್ಟಡದ ಮೇಲ್ಛಾವಣಿಯ ಮೇಲಿಟ್ಟ ಸಿಂಟೆಕ್ಸ್‌ನಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಈ ಮಂಗಗಳು ಸಿಂಟೆಕ್ಸ್‌ನ ಕ್ಯಾಪ್ ತೆರೆದು ಸ್ವಿಮ್ಮಿಂಗ್‌ ಪೂಲ್‌ ರೀತಿ ಅದರಲ್ಲಿ ಮುಳುಗಿ ಏಳುತ್ತಿವೆ. ಒಂದರ ಹಿಂದೆ ಒಂದರಂತೆ ಟ್ಯಾಂಕ್‌ಗೆ ಜಿಗಿಯುತ್ತಿರುವ ದೃಶ್ಯ ಗಮನಸೆಳೆಯುತ್ತಿದೆ. ಸಿಂಟೆಕ್ಸ್‌ನಲ್ಲಿ ಈಜಿ ಸಿಕ್ಕಾಪಟ್ಟೆ ಎಂಜಾಯ್‌ ಮಾಡುತ್ತಿವೆ. 

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಇದರೊಂದಿಗೆ ಹಲವು ಲಕ್ಷ ವೀಕ್ಷಣೆಯನ್ನೂ ಪಡೆದುಕೊಂಡಿದೆ. ಈ ವಿಡಿಯೋಗೆ ಜನರು ಹಲವು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಕೋತಿಯೂ ಏನು ಮಾಡಬಲ್ಲದು ಎಂದು ಅನೇಕ ಜನರು ಬರೆದಿದ್ದಾರೆ.  

ಇದನ್ನೂ ಓದಿ: Viral Video: ವಧು ಕೈಯಲ್ಲಿ ಕಂಟ್ರೋಲ್‌ ಆಗಲೇ ಇಲ್ಲ.. ಮಾಡೇ ಬಿಟ್ಟಳು ಈ ಕೆಲಸ! ರೊಮ್ಯಾಂಟಿಕ್‌ ವಿಡಿಯೋ ವೈರಲ್

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News