Viral Video: ವ್ಯಕ್ತಿಯ ಹೇರ್ ಸ್ಟೈಲ್ ಕಂಡು ತಲೆತಿರುಗಿ ಬಿದ್ದೇ ಬಿಡ್ತು ಕೋತಿ: ವಿಡಿಯೋ ನೋಡಿ

Viral Video: ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗೋದು ಸಾಮಾನ್ಯವಾಗಿದೆ. ಮನುಷ್ಯರ ಜೊತೆ ಸೇರಿಕೊಂಡು ಪ್ರಾಣಿಗಳೂ ಸಹ ನಟಿಸುತ್ತವೆ ಎನ್ನಬಹುದು. ಆದರೆ ಅವುಗಳ ನಟನೆ ಮುದ್ದಾಗಿದ್ದು, ಎಂಥವರ ಮನಸ್ಸೂ ಗೆಲ್ಲುತ್ತವೆ.

Written by - Bhavishya Shetty | Last Updated : Nov 8, 2022, 01:37 PM IST
    • ಮನುಷ್ಯನ ವಿಲಕ್ಷಣ ಕೇಶವಿನ್ಯಾಸವನ್ನು ಕಂಡ ಕೋತಿಯ ಪ್ರತಿಕ್ರಿಯೆ ನೋಡಿ
    • ಈ ವಿಡಿಯೋವನ್ನು ಟ್ವಿಟರ್ ಖಾತೆ ಬ್ಯುಟೆಂಜ್ಬೀಡೆನ್‌ನಲ್ಲಿ ಹಂಚಿಕೊಳ್ಳಲಾಗಿದೆ
    • ಮಂಗವೊಂದು ಬೀನಿ ತೊಟ್ಟಿರುವ ವ್ಯಕ್ತಿಯೊಂದಿಗೆ ಕುಳಿತಿರುವುದನ್ನು ನೋಡಬಹುದು
Viral Video: ವ್ಯಕ್ತಿಯ ಹೇರ್ ಸ್ಟೈಲ್ ಕಂಡು ತಲೆತಿರುಗಿ ಬಿದ್ದೇ ಬಿಡ್ತು ಕೋತಿ: ವಿಡಿಯೋ ನೋಡಿ title=
Today's Viral Video

Today Viral Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವು ಮನುಷ್ಯನ ವಿಲಕ್ಷಣ ಕೇಶವಿನ್ಯಾಸವನ್ನು ನೋಡಿದ ನಂತರ ಕೋತಿಯ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ಟ್ವಿಟರ್ ಖಾತೆ ಬ್ಯುಟೆಂಜ್ಬೀಡೆನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು 3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ: Viral Video: ಪತ್ರಿಕೆ ಓದುತ್ತಿದ್ದಂತೆ ಪ್ರಾಣಬಿಟ್ಟ ಉದ್ಯಮಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಪ್ರಾಣಪಕ್ಷಿ ಹಾರಿಹೋಗುವ ದೃಶ್ಯ

ವೀಡಿಯೋದಲ್ಲಿ ಮಂಗವೊಂದು ಬೀನಿ ತೊಟ್ಟಿರುವ ವ್ಯಕ್ತಿಯೊಂದಿಗೆ ಕುಳಿತಿರುವುದನ್ನು ನೋಡಬಹುದು. ಆ ಸಂದರ್ಭದಲ್ಲಿ ಆತ ತನ್ನ ಕ್ಯಾಪ್ ಅನ್ನು ತಲೆಯಿಂದ ತೆಗೆಯುತ್ತಾನೆ. ಆಗ ವ್ಯಕ್ತಿಯ ವಿಲಕ್ಷಣವಾದ ಕೇಶವಿನ್ಯಾಸವನ್ನು ಕಂಡ ಕೋತಿ ತಲೆ ತಿರುಗಿ ಬಿದ್ದಂತೆ ಮಾಡುತ್ತದೆ. ಈ ವಿಡಿಯೋ ಕಂಡರೆ ನಗು ಬರೋದು ಖಂಡಿತ. ವೀಡಿಯೊ ಸಂಪೂರ್ಣವಾಗಿ ಹಾಸ್ಯಮಯವಾಗಿದ್ದು, ಇಲ್ಲಿ ವಿಡಿಯೋವನ್ನು ನೋಡಬಹುದು.

 

 

ಈ ವಿಡಿಯೋ ಕಂಡ ಅನೇಕ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬರು, "ನಾನು ಒಂದು ವರ್ಷ ನನ್ನ ಕೂದಲನ್ನು ಕತ್ತರಿಸದಿದ್ದಾಗ ನನ್ನ ತಾಯಿಯ ಪ್ರತಿಕ್ರಿಯೆ ಹೀಗೆ ಇರಬಹುದು" ಎಂದು ಬರೆದಿದ್ದಾರೆ. ಮತ್ತೊಬ್ಬ ನೆಟ್ಟಿಗರು, “ಬೆಳಗ್ಗೆ ಎದ್ದಾಗ ನನ್ನ ಕೂದಲು ಹೀಗೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, “ಈ ವಿಡಿಯೋ ನನಗೆ ಖುಷಿ ನೀಡಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video : ಪ್ರವಾಹದ ಮಧ್ಯೆ ಸಿಲುಕಿದ ಕೋತಿ, ಆಂಜನೇಯನ ಬಳಿ ಹೋದಾಗ ನಡೀತು ಪವಾಡ!?

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗೋದು ಸಾಮಾನ್ಯವಾಗಿದೆ. ಮನುಷ್ಯರ ಜೊತೆ ಸೇರಿಕೊಂಡು ಪ್ರಾಣಿಗಳೂ ಸಹ ನಟಿಸುತ್ತವೆ ಎನ್ನಬಹುದು. ಆದರೆ ಅವುಗಳ ನಟನೆ ಮುದ್ದಾಗಿದ್ದು, ಎಂಥವರ ಮನಸ್ಸೂ ಗೆಲ್ಲುತ್ತವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News