Funny Video : ಮಂಗನಿಗೆ ಶರೆ ಕುಡಿಸಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

Viral Monkey Video: ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ತಮಾಷೆಯ ವಿಡಿಯೋದಲ್ಲಿ, ಮಂಗವೊಂದು ವೈನ್ ಬಾಟಲಿಯನ್ನು ಇಟ್ಟುಕೊಂಡು ಕುಡಿಯುವುದನ್ನು ನೀವು ನೋಡುತ್ತೀರಿ. 

Written by - Chetana Devarmani | Last Updated : Oct 17, 2022, 05:04 PM IST
  • ಮಂಗನಿಗೆ ಶರೆ ಕುಡಿಸಿದ್ರೆ ಏನಾಗುತ್ತೆ?
  • ಈ ವಿಡಿಯೋ ನೋಡಿ ಗೊತ್ತಾಗುತ್ತೆ!
  • ಸಾಮಾಜಿಕ ಮಾಧ್ಯಮಗಳಲ್ಲಿ ಕೋತಿಯ ವಿಡಿಯೋ ವೈರಲ್‌
Funny Video : ಮಂಗನಿಗೆ ಶರೆ ಕುಡಿಸಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ! title=
ಕೋತಿ

Viral Monkey Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ, ಅದರಲ್ಲಿ ಕೆಲವು ಪ್ರಾಣಿಗಳ ವಿಡಿಯೋಗಳು ಸಖತ್‌ ವೈರಲ್‌ ಆಗುತ್ತವೆ. ಈ ವೈರಲ್‌ ವಿಡಿಯೋಗಳಲ್ಲಿ ಕೆಲವು ಅಪಾಯಕಾರಿಯಾಗಿದ್ದರೆ, ಮತ್ತೆ ಕೆಲವು ನಿಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ. ಈ ಪ್ರಾಣಿಗಳ ಕುಚೇಷ್ಟೆಗಳನ್ನು ಕೆಲವು ವಿಡಿಯೋಗಳಲ್ಲಿ ಸೆರೆಹಿಡಿಯಲಾಗಿದೆ. ಅವುಗಳು ಆನ್‌ಲೈನ್‌ನಲ್ಲಿ ಹೆಚ್ಚು ವೈರಲ್ ಆಗಿವೆ. ಗೊತ್ತಿಲ್ಲದೆ ಮದ್ಯದ ಬಾಟಲಿಯನ್ನು ಎತ್ತಿಕೊಂಡು ಕುಡಿಯಲು ಆರಂಭಿಸಿದ ಕೋತಿಯ ಇದೀಗ ಎಲ್ಲೆಡೆ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ : WATCH : ಒಂದೇ ಬಾರಿಗೆ ಎರಡು ನವಿಲುಗಳ ನೃತ್ಯ.. ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ತಮಾಷೆಯ ವಿಡಿಯೋದಲ್ಲಿ, ಮಂಗವೊಂದು ವೈನ್ ಬಾಟಲಿಯನ್ನು ಇಟ್ಟುಕೊಂಡು ಕುಡಿಯುವುದನ್ನು ನೀವು ನೋಡುತ್ತೀರಿ. ವಿಡಿಯೋ ನೋಡಿದರೆ ಈ ಕೋತಿಯ ಕೈಗೆ ಆಕಸ್ಮಿಕವಾಗಿ ಮದ್ಯದ ಬಾಟಲಿ ಸಿಕ್ಕಿದಂತಿದೆ. ಅದು ಏನೆಂದು ತಿಳಿಯದೇ ಈ ಮಂಗಣ್ಣ ಅದನ್ನು ಕುಡಿಯಲು ಆರಂಭಿಸಿದೆ. ಈ ಮದ್ಯವು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಈ ಕೋತಿಗೆ ಸಂಪೂರ್ಣವಾಗಿ ತಿಳಿದಿಲ್ಲ. ಈ ಶರೆ ಕುಡಿಯುವ ಮಂಗನ ವಿಡಿಯೋಗೆ ಮತ್ತೊಂದೆರಡು ವಿಡಿಯೋಗಳನ್ನು ಸೇರಸಲಾಗಿದೆ.

ಶರೆ ಕುಡಿದ ಮೇಲೆ ಕೋತಿ ಕಣ್ಣುಗಳು ತೇಲಾಡಲು ಆರಂಭವಾಗುತ್ತವೆ ಎಂಬಂತೆ ವಿಡಿಯೋ ಜೋಡಿಸಲಾಗಿದೆ. ಇದನ್ನೆಲ್ಲಾ ನೋಡಿ ಎಷ್ಟು ನಗು ಬರುತ್ತೆ ಅಲ್ವಾ. ಬಳಿಕ ಮಂಗಣ್ಣ ತಲೆ ಕೆಳಗೆ ಕಾಲು ಮೇಲೆ ಮಾಡಿ ನಡೆಯುತ್ತಾ ದಾರಿಯ ಮೇಲೆ ಹೋಗುವುದನ್ನು ನೀವು ಕಾಣಬಹುದು. ಈ ವಿಡಿಯೋ ನೋಡಿದ ಮೇಲಂತೂ ನಗು ತಡೆಯುವುದು ಕಷ್ಟ. ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಮಾಡಿದ್ದರೂ ಸಹ ಈ ವಿಡಿಯೋ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇದೇ ಕಾರಣಕ್ಕೆ ಈ ವೀಡಿಯೋ ಬಳಕೆದಾರರನ್ನು ರಂಜಿಸುತ್ತಿದೆ. ಈ ಮಂಗನ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ : White king Cobra: 20 ಅಡಿ ಉದ್ದದ ಅಪರೂಪದ ಶ್ವೇತನಾಗರ! ವಿಡಿಯೋ ನೋಡಿದ್ರೆ ಮೈನವಿರೇಳುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News