Viral Video : ಪ್ರವಾಹದ ಮಧ್ಯೆ ಸಿಲುಕಿದ ಕೋತಿ, ಆಂಜನೇಯನ ಬಳಿ ಹೋದಾಗ ನಡೀತು ಪವಾಡ!?

Monkey caught in the flood : ಮಧ್ಯಪ್ರದೇಶದ ಗಾಜಿಯಾಬಾದ್‌ನಲ್ಲಿ ವಿಶಿಷ್ಟವಾದ ಶೋಧ ಕಾರ್ಯಾಚರಣೆಯ ದೃಶ್ಯಗಳು ವೈರಲ್‌ ಆಗಿವೆ. ಗಾಜಿಯಾಬಾದ್‌ನ ಮುರಾದ್‌ನಗರದ ಗಂಗಾನದಿಯ ಕಾಲುವೆಯಲ್ಲಿ ಮಂಗವು ಸಿಲುಕಿಕೊಂಡಿದೆ. 

Written by - Chetana Devarmani | Last Updated : Nov 6, 2022, 05:02 PM IST
  • ಪ್ರವಾಹದ ಮಧ್ಯೆ ಸಿಲುಕಿದ ಕೋತಿ
  • ಆಂಜನೇಯನ ಬಳಿ ಹೋದಾಗ ನಡೀತು ಪವಾಡ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಪ್ರವಾಹದ ಮಧ್ಯೆ ಸಿಲುಕಿದ ಕೋತಿ, ಆಂಜನೇಯನ ಬಳಿ ಹೋದಾಗ ನಡೀತು ಪವಾಡ!? title=
ಕೋತಿ

Monkey caught in the flood : ಮಧ್ಯಪ್ರದೇಶದ ಗಾಜಿಯಾಬಾದ್‌ನಲ್ಲಿ ವಿಶಿಷ್ಟವಾದ ಶೋಧ ಕಾರ್ಯಾಚರಣೆಯ ದೃಶ್ಯಗಳು ವೈರಲ್‌ ಆಗಿವೆ. ಗಾಜಿಯಾಬಾದ್‌ನ ಮುರಾದ್‌ನಗರದ ಗಂಗಾನದಿಯ ಕಾಲುವೆಯಲ್ಲಿ ಮಂಗವು ಸಿಲುಕಿಕೊಂಡಿದೆ. ಬಲವಾದ ನೀರಿನ ಪ್ರವಾಹದಲ್ಲಿ, ಕೋತಿ ಹೇಗೋ ಕಾಲುವೆಯ ಮಧ್ಯದಲ್ಲಿರುವ ಹನುಮಂತನ ವಿಗ್ರಹವನ್ನು ತಲುಪಿದೆ. ರಾತ್ರಿಯಿಡೀ ವಿಗ್ರಹಕ್ಕೆ ಅಂಟಿಕೊಂಡೇ ಮಂಗವು ಕಾಲ ಕಳೆದಿದೆ. ಬೆಳಿಗ್ಗೆ ರಕ್ಷಣಾ ತಂಡವು ಹೋಗಿ ಮಂಗನನ್ನು ರಕ್ಷಿಸಿತು. ರಾತ್ರಿಯಿಡೀ ಕೋತಿ ವಿಗ್ರಹಕ್ಕೆ ಅಂಟಿಕೊಂಡ ರೀತಿ ಇಡೀ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : Selena Gomez : ಗಂಭೀರ ಕಾಯಿಲೆಗೆ ತುತ್ತಾದ ಪ್ರಸಿದ್ಧ ಗಾಯಕಿ! ಕಮರಿತು ತಾಯಿಯಾಗುವ ಕನಸು?

ಕೋತಿ ವಿಗ್ರಹವನ್ನು ಹಿಡಿದುಕೊಂಡು ಮೂರ್ತಿಯ ಅಂಚಿನಲ್ಲಿ ಕುಳಿತು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಆದರೆ, ಸ್ಥಳೀಯರು ಬೇರೆ ರೀತಿಯಲ್ಲಿ ಚರ್ಚೆ ನಡೆಸುತ್ತಿರುವುದು ಕಂಡು ಬಂತು. ಜನರು ಇದನ್ನು ಪವಾಡ ಎಂದು ಕರೆಯುತ್ತಿದ್ದಾರೆ. ರಾತ್ರಿಯಿಡೀ ಕೋತಿ ಹನುಮನ ಪ್ರತಿಮೆಗೆ ಅಂಟಿಕೊಂಡು ಕುಳಿತಿತ್ತು ಎಂದು ಹೇಳಲಾಗುತ್ತಿದೆ. ಬೆಳಗ್ಗೆ ನೀರಿನ ಮಧ್ಯೆ ಸಿಕ್ಕಿಬಿದ್ದಿದ್ದ ಈ ಕೋತಿಯನ್ನು ಸ್ಥಳೀಯರು ಹಾಗೂ ಅಲ್ಲಿಯೇ ಬೀಡುಬಿಟ್ಟಿದ್ದ ಕೆಲ ಪೊಲೀಸರು ನೋಡಿದ್ದಾರೆ. ನಂತರ ಅವರು ದೋಣಿಯ ಮೂಲಕ ರಕ್ಷಿಸಿದರು.

 

 

ಮಂಗನ ಜೀವವನ್ನು ಯಶಸ್ವಿಯಾಗಿ ಉಳಿಸಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಕೋತಿಯು ಆಂಜನೇಯನನಪ್ರತಿಮೆಗೆ ಅಂಟಿಕೊಂಡು ಜೀವ ಉಳಿಸಿಕೊಂಡಿದ್ದು ಪವಾಡ ಎಂದು ಜನರು ಪರಿಗಣಿಸುತ್ತಿದ್ದಾರೆ. ಹನುಮಂತ ದೇವರಿಗೆ ಪೂಜೆ ಸಲ್ಲಿಸಲು ನೀರಿನ ಒಳಕ್ಕೆ ನುಗ್ಗಿದ ಕೋತಿ ನೀರಿನ ಹರಿವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅಲ್ಲಿಯೇ ಸಿಲುಕಿಕೊಂಡಿದೆ ಎಂಬ ಚರ್ಚೆಯೂ ನಡೆದಿದೆ.

ಇದನ್ನೂ ಓದಿ : ಆಲಿಯಾ - ರಣಬೀರ್‌ಗೆ ತುಂಬಾ Lucky ಅಂತೆ ಮಗಳು! ಮುಂದೇನಾಗ್ತಾಳೆ? ಜ್ಯೋತಿಷಿಗಳು ಹೇಳಿದ್ದು ಹೀಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News