ಎತ್ತ ನೋಡಿದರೂ 500 ರ ನೋಟಿನ ಸುರಿಮಳೆ, ಸಂಗ್ರಹಕ್ಕೆ ಮುಗಿ ಬಿದ್ದ ಜನ ಇಲ್ಲಿದೆ ವಿಡಿಯೋ

ಅಗತ್ಯವಿದ್ದವರಿಗೆ 10 ರೂಪಾಯಿ ದಾನ ಮಾಡಬೇಕಾದರೂ ಜನ ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇವೆಲ್ಲದ್ದಕ್ಕೂ ವಿರುದ್ಧವಾಗಿ ನಡೆದುಕೊಂಡಿದ್ದಾರೆ.   

Written by - Ranjitha R K | Last Updated : Jun 17, 2022, 08:46 AM IST
  • ಎಲ್ಲಿ ನೋಡಿದರೂ ಹಣವೇ ಹಣ
  • ೫೦೦ ರ ನೋಟಿನ ಸುರಿ ಮಳೆ
  • ವೈರಲ್ ಆಯಿತು ವಿಡಿಯೋ
ಎತ್ತ ನೋಡಿದರೂ  500 ರ ನೋಟಿನ ಸುರಿಮಳೆ,  ಸಂಗ್ರಹಕ್ಕೆ ಮುಗಿ ಬಿದ್ದ ಜನ ಇಲ್ಲಿದೆ ವಿಡಿಯೋ    title=
Man tossing money ( photo twitter)

ಹೈದರಾಬಾದ್‌ : ಹಣ ಯಾರಿಗೆ ತಾನೇ ಬೇಡ. ಈಗಂತೂ ಕುಳಿತರೂ ನಿಂತರೂ ಪ್ರತಿಯೊಂದು ಕೆಲಸಕ್ಕೆ ಹಣ ಬೇಕೇ ಬೇಕು. ಹೀಗಿರುವಾಗ ನಮ್ಮ ಒಂದು ರೂಪಾಯಿ ಕೂಡಾ ಕಳೆದುಕೊಳ್ಳುವುದು ಯಾರಿಗೂ ಇಷ್ಟವಾಗುವುದಿಲ್ಲ. ಇನ್ನು ಅಗತ್ಯವಿದ್ದವರಿಗೆ 10 ರೂಪಾಯಿ ದಾನ ಮಾಡಬೇಕಾದರೂ ಜನ ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇವೆಲ್ಲದ್ದಕ್ಕೂ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೌದು, ಕೈಯ್ಯಲ್ಲಿ 500 ರೂಪಾಯಿ ನೋಟಿನ ಬಂಡಲ್ ಹಿಡಿದುಕೊಂಡು ಮನ ಬಂದಂತೆ ಅದನ್ನು ಎಸೆಯುತ್ತಿದ್ದಾರೆ. 

30 ಸೆಕೆಂಡುಗಳ ವೀಡಿಯೊ  :
ಈ ವ್ಯಕ್ತಿ ಹೀಗೆ ಕಾರಂಜಿ ಬಳಿ ನಿಂತುಕೊಂಡು ಕಂತೆ ಕಂತೆ ನೋಟುಗಳನ್ನು ಎಸೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಚಾರ್ಮಿನಾರ್‌ನ ಗುಲ್ಜಾರ್ ಹೌಜ್ ರಸ್ತೆಯ ಮುಂದೆ ನಿಂತಿರುವ ವ್ಯಕ್ತಿ ಈ ರೀತಿ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಒಂದೆರಡು ಬಾರಿ ಅಲ್ಲ, ಪದೇ ಪದೇ ಬಂದು ಹೀಗೆ ೫೦೦ ರೂಪಾಯಿ ನೋಟುಗಳನ್ನು ಎಸೆದಿದ್ದಾರೆ. 

 ಇದನ್ನೂ ಓದಿ : Viral Video: ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದ ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್!

ಹೀಗೆ ಧರ್ಮಕ್ಕೆ ನೋಟು ಸಿಕ್ಕಿದರೆ ಜನ ಬಿಡುವುದುಂಟೆ.. ಸಿಕ್ಕಿದ್ದೇ ಚಾನ್ಸ್ ಎನ್ನುವ ಹಾಗೆ ನೆಲಕ್ಕೆ ಬೀಳುತ್ತಿದ್ದ ಹಣವನ್ನು ಬಾಚಿ ಬಾಚಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೆಲವರು ಈ ವಿಚಿತ್ರ ವರ್ತನೆಯನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆಯಾಗಿಸಿಕೊಂಡಿದ್ದಾರೆ.   

 

ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿಯ ನಿಕಟ ಪರಿಚಯಸ್ಥರ ವಿವಾಹವಿದ್ದ ಕಾರಣ,  ಆ ವ್ಯಕ್ತಿ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವ್ಯಕ್ತಿಯ ನಡವಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇಷ್ಟೊಂದು ಹಣವಿದ್ದರೆ ಬಡವರಿಗೆ ದಾನ  ಮಾಡಿ ಎಂದು ಕೆಲವರು ಸಲಹೆ ನೀಡಿದರೆ, ಇನ್ನು ಕೆಲವರು ನಮ್ಮ ದೇಶದ ಕರೆನ್ಸಿಗೆ ಅಗೌರವ ತೋರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.  ಮಾತ್ರವಲ್ಲ,  ಹಣ ಹೆಚ್ಚಿದ್ದರೆ ಅನಾಥಾಶ್ರಮ ನಡೆಸುತ್ತಿರುವ ಸಂಸ್ಥೆಗಳಿಗೆ ದೇಣಿಗೆ ನೀಡುವುದು ಉತ್ತಮ ಎಂಬ ಸಲಹೆ ಕೂಡಾ ಕೇಳಿ ಬಂದಿದೆ. 

 ಇದನ್ನೂ ಓದಿ : Viral Video: ಟ್ರಾಫಿಕ್ ಪೊಲೀಸ್ ಸಮಯ ಪ್ರಜ್ಞೆಯಿಂದ ಮಗು ಬಚಾವ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News