ವೈರಲ್‌ ಆಗಲು ಹೆಂಡತಿ, ತಾಯಿಯ ಮುಂದೆಯೇ ಜೀವಂತ ಸಮಾಧಿಯಾದ ರೀಲ್ಸ್‌ ಹುಚ್ಚ..! ವಿಡಿಯೋ ವೈರಲ್‌

Viral video : ನಗರವಾಗಲಿ.. ಹಳ್ಳಿಗಳಾಗಲಿ.. ಯಾವುದೇ ವ್ಯತ್ಯಾಸವಿಲ್ಲದೆ ರಾತ್ರೋರಾತ್ರಿ ಫುಲ್‌ ಸೆಲೆಬ್ರಿಟಿ ಆಗ್ಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್‌ ಮಾಡುತ್ತಿದ್ದಾರೆ.. ಎಷ್ಟೋ ಜನರು ತಮ್ಮ ಅವಿವೇಕತನದಿಂದ ಜೀವವನ್ನೂ ಕಳೆದುಕೊಂಡಿದ್ದಾರೆ.. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. 

Written by - Krishna N K | Last Updated : Aug 16, 2024, 05:58 PM IST
    • ರಾತ್ರೋರಾತ್ರಿ ಫುಲ್‌ ಸೆಲೆಬ್ರಿಟಿ ಆಗ್ಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್‌ ಮಾಡುತ್ತಿದ್ದಾರೆ..
    • ಕೇವಲ ಲೈಕ್ಸ್‌ ಮತ್ತು ವೀವ್ಸ್‌ಗಾಗಿ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ.
    • ಇದು ಸಾಲದು ಎಂಬಂತೆ ಜೀವವನ್ನೇ ಪಣಕ್ಕೀಟ್ಟು ರೀಲ್ಸ್‌ ಬೇರೆ ಮಾಡುತ್ತಿದ್ದಾರೆ ಕೆಲ ಹುಚ್ಚರು..
ವೈರಲ್‌ ಆಗಲು ಹೆಂಡತಿ, ತಾಯಿಯ ಮುಂದೆಯೇ ಜೀವಂತ ಸಮಾಧಿಯಾದ ರೀಲ್ಸ್‌ ಹುಚ್ಚ..! ವಿಡಿಯೋ ವೈರಲ್‌ title=

Viral Reels : ಸೋಷಿಯಲ್‌ ಮೀಡಿಯಾದಲ್ಲಿ ಏನಾಗಬಾರದೋ ಅದೇ ನಡೆಯುತ್ತಿದೆ. ರೀಲ್ಸ್‌ ಹುಚ್ಚಿಗೆ ಬಿದ್ದು.. ಯುವಜನತೆ ಚಿತ್ರ ವಿಚಿತ್ರ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಕೇವಲ ಲೈಕ್ಸ್‌ ಮತ್ತು ವೀವ್ಸ್‌ಗಾಗಿ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ. ಈಗಾಗಲೇ ರೀಲ್‌ಗಳಲ್ಲಿ ಅಶ್ಲೀಲತೆ ಹೆಚ್ಚಾಗಿದೆ. ಇದು ಸಾಲದು ಎಂಬಂತೆ ಜೀವವನ್ನೇ ಪಣಕ್ಕೀಟ್ಟು ರೀಲ್ಸ್‌ ಬೇರೆ ಮಾಡುತ್ತಿದ್ದಾರೆ ಕೆಲ ಹುಚ್ಚರು..

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ರೀಲ್ಸ್‌ ಮಾಡಲು ಹೋಗಿ ಅಪ್ರಾಪ್ತ ಬಾಲಕಿಯೊಬ್ಬಳು ಆರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದೀಗ ಇಂತಹುದೇ ಆಘಾತಕಾರಿ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ... ಒಬ್ಬ ಮನುಷ್ಯನು ತನ್ನ ಕುತ್ತಿಗೆಯವರೆಗೂ ಸಮಾಧಿಯಾಗಿದ್ದನ್ನು ಕಾಣಬಹುದು..

ಇದನ್ನೂ ಓದಿ:ಹಗಲಿಗಿಂತ ರಾತ್ರಿ ಹೆಚ್ಚು ಕೆಮ್ಮುತ್ತಿದ್ದೀರಾ.? ಹಾಗಿದ್ರೆ ಈ ಮನೆಮದ್ದನ್ನ ಸೇವಿಸಿ, ತ್ವರಿತ ಪರಿಹಾರ ಸಿಗುತ್ತದೆ

ಅಲ್ಲದೆ, ತಲೆಯಷ್ಟೇ ಕಾಣುವ ಆ ವ್ಯಕ್ತಿ ಪಕ್ಕದಲ್ಲಿ ತಾಯಿ ಎಂದು ಹೇಳಿಕೊಳ್ಳುವ ಮಹಿಳೆ ಪುರುಷನಿಗೆ ಆಹಾರ ನೀಡುತ್ತಿದ್ದರೆ, ಅವನ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಮಹಿಳೆ ಅವನ ಹೆಂಡತಿ ಎಂದು ಹೇಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೈಯಲು ಪ್ರಾರಂಭಿಸಿದ್ದಾರೆ.. ಫೇಮಸ್ ಆಗಬೇಕು ಅಂತ ಜೀವ ಕಳೆದುಕೊಳ್ಳಬೇಡಿ ಅಂತ ಕೆಲವರು ಸಲಹೆ ನೀಡುತ್ತಿದ್ದಾರೆ..

23 ಸೆಕೆಂಡುಗಳ ಈ ವೀಡಿಯೊ ಕ್ಲಿಪ್ ಅನ್ನು @ChapraZila ಹ್ಯಾಂಡಲ್ ಮೂಲಕ Twitter (X) ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 5.5 ಲಕ್ಷ ವೀಕ್ಷಣೆ ಪಡೆದಿದೆ. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಕಾಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ರೀತಿ ಹುಚ್ಚು ಹುಚ್ಚಾಗಿ ರೀಲ್ಸ್‌ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅಂತ ನೆಟ್ಟಿಗರು ಒತ್ತಾಯಿಸಿದ್ದಾರೆ.. ಸಧ್ಯ ವಿಡಿಯೋ ವೈರಲ್‌ ಆಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News