Viral Video: ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳ ರೊಮ್ಯಾನ್ಸ್‌.. ಮೋಹದಲ್ಲಿ ಮೈಮರೆತ ಲವರ್ಸ್‌!

Viral Video: ಮೆಟ್ರೋದಲ್ಲಿ ಅಶ್ಲೀಲತೆಯನ್ನು ತಡೆಯಲು ದೆಹಲಿ ಮೆಟ್ರೋ ರೈಲು ನಿಗಮವು ಫ್ಲೈಯಿಂಗ್ ಸ್ಕ್ವಾಡ್ ಅನ್ನು ರಚಿಸಿದೆ. ಇದರ ಹೊರತಾಗಿಯೂ, ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. 

Written by - Chetana Devarmani | Last Updated : Jun 5, 2023, 02:48 PM IST
  • ಮೆಟ್ರೋದಲ್ಲಿ ಪ್ರೇಮಿಗಳ ರೊಮ್ಯಾನ್ಸ್‌
  • ಮೋಹದಲ್ಲಿ ಮೈಮರೆತ ಲವರ್ಸ್‌!
  • ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್‌
Viral Video: ಮೆಟ್ರೋದಲ್ಲಿ ಕೆಳಗೆ ಮಲಗಿ ಪ್ರೇಮಿಗಳ ರೊಮ್ಯಾನ್ಸ್‌.. ಮೋಹದಲ್ಲಿ ಮೈಮರೆತ ಲವರ್ಸ್‌!  title=

Delhi Metro Viral Video: ದೆಹಲಿ ಮೆಟ್ರೋದಲ್ಲಿ ಆಗಾಗ ವಿಚಿತ್ರ ಕೆಲಸಗಳನ್ನು ಮಾಡುವ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಇಂಥದ್ದೇ ವಿಡಿಯೋಗಳಿಂದ ಈ ಹಿಂದೆ ದೆಹಲಿ ಮೆಟ್ರೋ ಇಡೀ ದೇಶದಲ್ಲೆಲ್ಲ ಸುದ್ದಿ ಮಾಡಿತ್ತು. ಮೆಟ್ರೋದಲ್ಲಿ ಕೆಲವರು ವಿಚಿತ್ರ ಮತ್ತು ಅಶ್ಲೀಲ ಕೃತ್ಯಗಳನ್ನು ಮಾಡುತ್ತಿದ್ದು, ಅದನ್ನು ಸೆರೆ ಹಿಡಿದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋ ಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಸದ್ಯ ದೆಹಲಿ ಮೆಟ್ರೋ ರೈಲು ನಿಗಮ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೋರಿದ್ದು, ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ಸಿದ್ಧಪಡಿಸಿದೆ. ಮೆಟ್ರೋದಲ್ಲಿ ಗಸ್ತು ತಿರುಗುತ್ತಾರೆ. ಹೀಗಿದ್ದರೂ ಅಶ್ಲೀಲ ತ್ಯಗಳು ಕಡಿಮೆಯಾಗುತ್ತಿಲ್ಲ.

ಇತ್ತೀಚೆಗಷ್ಟೇ ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಲ್ಲಿ ಪ್ರೇಮಿಗಳು ತಮ್ಮ ಅಶ್ಲೀಲ ವರ್ತನೆಯಿಂದ ದೆಹಲಿ ಮೆಟ್ರೋವನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದ್ದಾರೆ. ಯುವಕ - ಯುವತಿಯ ಚುಂಬನದ ವಿಡಿಯೋ ಎಲ್ಲೆಡೆ ಸಂಚಲ ಸೃಷ್ಟಿಸಿದೆ. ಅನೇಕ ಬಳಕೆದಾರರು ದೆಹಲಿ ಮೆಟ್ರೋ ರೈಲು ನಿಗಮದ ನಿರ್ವಹಣೆಯ ಬಗ್ಗೆ ಮತ್ತೆ ಪ್ರಶ್ನಿಸಿದ್ದಾರೆ.  

ಇದನ್ನೂ ಓದಿ: ಪ್ರತಿ ಮರದ ಹಿಂದೆ ಒಂದೊಂದು ಜೋಡಿ, ಇವರ ರೋಮ್ಯಾನ್ಸ್‌ ಕಂಡು ದಂಗಾದ ಜನ.!

ವೈರಲ್ ಆಗುತ್ತಿರುವ ವಿಡಿಯೋವನ್ನು @SonOfChoudhary ಹೆಸರಿನ ಖಾತೆಯಿಂದ Twitter ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ, ಪ್ರೇಮಿಗಳು ದೆಹಲಿ ಮೆಟ್ರೋದಲ್ಲಿ ಕೆಳಗೆ ಕುಳಿತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಹುಡುಗಿ ತನ್ನ ಗೆಳೆಯನ ತೊಡೆಯ ಮೇಲೆ ಮಲಗುತ್ತಾಳೆ. ಆಕೆ ಅವನ ತೊಡೆಯ ಮೇಲೆ ತಲೆಯಿಟ್ಟು ಮಲಗಿರುವುದು ಕಂಡುಬರುತ್ತದೆ. ಈ ವೇಳೆ ಇಬ್ಬರೂ ತುಂಬಾ ಸಮಯದವರೆಗೆ ಲಿಪ್‌ಲಾಕ್‌ ಮಾಡುತ್ತಿರುವುದು ಕಂಡುಬಂದಿದೆ.  

 

 

ಆಶ್ಚರ್ಯದ ಸಂಗತಿಯೆಂದರೆ, ಹೀಗೆ ಮಾಡುವಾಗ ಮೆಟ್ರೋದಲ್ಲಿ ಅವರ ಸುತ್ತಲೂ ಅನೇಕ ಜನರಿದ್ದರು. ಆದರೂ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಅಶ್ಲೀಲ ವರ್ತನೆ ತೋರಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣ, ಅನೇಕ ಬಳಕೆದಾರರು DMRC ನಲ್ಲಿ ಪ್ರಶ್ನೆಗಳನ್ನು ಎತ್ತಿದರು. ಡಿಸಿಪಿ ದೆಹಲಿ ಮೆಟ್ರೋವನ್ನು ಟ್ಯಾಗ್ ಮಾಡಿ, ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.  

ಇದನ್ನೂ ಓದಿ: Chandan-Nivedita: ಅಂಡರ್ ವಾಟರ್‌ನಲ್ಲಿ ನಿವಿ-ಚಂದನ್ ರೋಮ್ಯಾನ್ಸ್‌ ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News