Pini village tradition : ಭಾರತದ ದೂರದ ಹಳ್ಳಿಯಲ್ಲಿ, ಕೆಲವು ಮಹಿಳೆಯರು ಇನ್ನೂ ಬಟ್ಟೆಗಳನ್ನು ಧರಿಸುವುದಿಲ್ಲ. ಪೂರ್ವಜರಿಂದ ಇಲ್ಲಿಯವರೆಗೂ ಈ ಪದ್ಧತಿ ಮುಂದುವರಿದಿದೆ. ಇದಲ್ಲದೆ, ಈ ಊರಿನಲ್ಲಿ ಪುರುಷರಿಗೆ ತುಂಬಾ ಕಠಿಣ ನಿಯಮಗಳಿವೆ. ಈ ವಿಚಿತ್ರ ಸಂಪ್ರದಾಯ ಕಂಡು ಬರುವುದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿದೆ. ಈ ಗ್ರಾಮದಲ್ಲಿ ಮಹಿಳೆಯರು ಪ್ರತಿ ವರ್ಷ 5 ದಿನಗಳ ಕಾಲ ಬೆತ್ತಲೆಯಾಗಿರುತ್ತಾರೆ.
ಹೌದು.. ಪ್ರತಿ ವರ್ಷ ಶ್ರಾವಣ ಮಾಸದ 5 ದಿನಗಳ ಕಾಲ ಈ ಪ್ರದೇಶದ ಎಲ್ಲಾ ಮಹಿಳೆಯರು ಬಟ್ಟೆ ಇಲ್ಲದೆ ಮತ್ತು ಚಿಕ್ಕ ಚುನ್ನಿಗಳನ್ನು ಮಾತ್ರ ಧರಿಸುತ್ತಾರೆ. ಮೇಲಾಗಿ ಈ 5 ದಿನ ಮನೆಯಿಂದ ಅವರು ಹೊರ ಬರುವುದಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಸಮಯದಲ್ಲಿ ಗಂಡ-ಹೆಂಡತಿ ಪರಸ್ಪರ ಮಾತನಾಡುವುದಿಲ್ಲವಂತೆ, ಅಲ್ಲದೆ, ಮುಟ್ಟುವಂತಿಲ್ಲ...
ಇದನ್ನೂ ಓದಿ:ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ವಿಧಿವಶ
ಆದ್ರೆ ಈಗಿನ ಯುವಕರು ಈ ವಿಚಿತ್ರ ಸಂಪ್ರದಾಯದತ್ತ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೆಲವು ಮಹಿಳೆಯರು ಇದನ್ನು ಇಂದಿಗೂ ಅನುಸರಿಸುತ್ತಾರಂತೆ. ಆದರೆ ಕೆಲ ಯುವತಿಯರು ಸಂಪೂರ್ಣ ಬೆತ್ತಲೆಯಾಗಿದರೆ ತೆಳುವಾದ ಬಟ್ಟೆಗಳನ್ನು ಧರಿಸುತ್ತಾರೆ. ಕೆಲವು ವಯಸ್ಕರು ಸಂಪೂರ್ಣವಾಗಿ ಬೆತ್ತಲಾಗುತ್ತಾರೆ ಎಂದು ವರದಿಯಾಗಿದೆ.
ಇನ್ನು ಈ ಸಮಯದಲ್ಲಿ ಪುರುಷರಿಗೆ ಹೆಚ್ಚು ಕಟ್ಟುನಿಟ್ಟಾದ ನಿಯಮಗಳು ಅನ್ವಯವಾಗುತ್ತವೆ. ಈ ಶ್ರಮಮಾಸದ 5 ದಿನಗಳ ಕಾಲ ಮದ್ಯ ಮತ್ತು ಮಾಂಸವನ್ನು ಮುಟ್ಟಬಾರದು ಎಂದು ಅಲ್ಲಿನ ಜನರು ನಂಬುತ್ತಾರೆ. ಈ ವಿಚಿತ್ರ ಸಂಪ್ರದಾಯದ ಹಿಂದೆ ದೊಡ್ಡ ಕಥೆಗಳಿವೆ.
ಇದನ್ನೂ ಓದಿ:ನೀರಿನ ಬಾಟಲಿಯ ಮುಚ್ಚಳಗಳು ಏಕೆ ನೀಲಿ, ಬಿಳಿ, ಕಪ್ಪು ಬಣ್ಣದ್ದಾಗಿರುತ್ತವೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ
ಹಿಂದೆ ಪಿಣಿ ಗ್ರಾಮದಲ್ಲಿ ದೆವ್ವಗಳು ನರರಗಳ ರೂಪದಲ್ಲಿ ಓಡಾಡುತ್ತಿದ್ದು, ಗ್ರಾಮದಲ್ಲಿನ ಮಹಿಳೆಯರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದವಂತೆ. 'ಲಹುವಾ ಘೋಂಡ್' ದೇವತೆಯು ತಮ್ಮ ರಕ್ಷಣೆಗಾಗಿ ಗ್ರಾಮಕ್ಕೆ ಬಂದು ಆ ರಾಕ್ಷಸರನ್ನು ಕೊಂದಳು ಎಂದು ಅಲ್ಲಿನ ಜನರು ನಂಬುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.