Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ

Viral Video - ವಿಡಿಯೋದಲ್ಲಿ ತನ್ನ ಸುತ್ತಲು ನೆರೆದ ಜನರನ್ನು ಕಂಡು ಚಿರತೆ ಹೆದರಿದೆ ಹಾಗೂ ಏನೂ ತೋಚದೆ ಸರೆಂಡರ್ ಆಗಿದೆ. ಪ್ರಸ್ತುತ ಜನರಿಂದ ಚಿತ್ರಹಿಂಸೆಗೆ ಒಳಗಾದ ಈ ಚಿರತೆ ಸಾವನ್ನಪ್ಪಿದೆ ಎನ್ನಲಾಗುತ್ತಿದೆ.  

Written by - Nitin Tabib | Last Updated : Aug 18, 2022, 10:21 PM IST
  • ಮಾನವತೆಯ ತಲೆಯನ್ನು ತಗ್ಗಿಸುವಂತೆ ಮಾಡುವ ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರವೀನ್ ಕಸ್ವಾನ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
  • ಈ ವಿಡಿಯೋವನ್ನು ಹಂಚಿಕೊಂಡ ಅವರು, ಈ ವಿಡಿಯೋದಲ್ಲಿ ನಿಜವಾದ ಮೃಗ ಯಾರು? ಎಂದು ಅವರು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.
Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ title=
People Torturing Leopard

Trending Video - ಇಡೀ ಮನುಕುಲವೇ ತಲೆ ತಗ್ಗಿಸುವಂತಹ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜನರು ಮನುಷ್ಯತ್ವದ ಎಲ್ಲೇಯನ್ನೇ ಮೀರುತ್ತಿರುವುದನ್ನು ನೀವು ನೋಡಬಹುದು. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಹೇಳುವುದು ಸ್ವಲ್ಪ ಕಷ್ಟ ಸಾಧ್ಯವೇ ಸರಿ. ಆದರೆ, ಆದರೆ, ವಿಡಿಯೋ ನೋಡಿದರೆ ಇಂದು ಮನುಷ್ಯ ಎಷ್ಟರಮಟ್ಟಿಗೆ ಬದಲಾಗಿದ್ದಾನೆ ಮತ್ತು ಕ್ಷಣಿಕ ಮನರಂಜನೆಯಗೋಸ್ಕರ ಯಾರ ಪ್ರಾಣವನ್ನು ಕೂಡ ತೆಗೆಯಲು ಹಿಂದೇಟು ಹಾಕುತ್ತಿಲ್ಲ ಎಂಬುದನ್ನು ಮಾತ್ರ ಖಚಿತವಾಗಿ ನೀವು ಹೇಳಬಹುದು. 

ಈ ವಿಡಿಯೋದ ಆರಂಭದಲ್ಲಿ ಓರ್ವ ವ್ಯಕ್ತಿ ಚಿರತೆಯ ಬಾಲವನ್ನು ಹಿಡಿದಿರುವುದನ್ನು ನೀವು ಗಮನಿಸಬಹುದು. ಈ ವ್ಯಕ್ತಿಯ ಸುತ್ತಮುತ್ತಲು ಸಾಕಷ್ಟು ಜನ ನೆರೆದಿದ್ದಾರೆ. ಆದರೆ, ಯಾರೊಬ್ಬರೂ ಕೂಡ ಆತನನ್ನು ತಡೆಯಲು ಅಥವಾ ಚಕಾರ ಎತ್ತದೆ ಇರುವುದನ್ನು ನೀವು ನೋಡಬಹುದು. ಉಲ್ಟಾ ಘಟನಾ ಸ್ಥಳದಲ್ಲಿಯೇ ನಿಂದು ಮೊಬೈಲ್ ಹಿಡಿದು ವೀಡಿಯೊ ಚಿತ್ರೀಕರಣ ನಡೆಸುತ್ತಿರುವುದನ್ನು ನೀವು ಗಮನಿಸಬಹುದು. ಇನ್ನೊಂದೆಡೆ ಇಷ್ಟೊಂದು ಜನರ ಮಧ್ಯೆ ಸಿಲುಕಿಕೊಂಡಿರುವ ಚಿರತೆ ಬೆದರಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದೆ. ಅದು ಸುಮ್ಮನೆ ಬೆದರಿ ತನ್ನ ಮೇಲಾಗುತ್ತಿರುವ ಹಿಂಸೆ ಸಹಿಸಿಕೊಳ್ಳುತ್ತಿದೆ. ಆದರೆ, ಜನರು ಕೊಟ್ಟ ಈ ಟಾರ್ಚರ್ ಗೆ ಪಾಪ ಬಡಪಾಯಿ ಚಿರತೆ ಅಸುನೀಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-Viral Video : ಮೊಸಳೆಯ ಮೇಲೆ ಚಿರತೆ ದಾಳಿ.. ರಣಬೇಟೆಯಲ್ಲಿ ಗೆದ್ದವರು ಯಾರು? ವಿಡಿಯೋ ನೋಡಿ

ಇಲ್ಲಿದೆ ವಿಡಿಯೋ
ಮಾನವತೆಯ ತಲೆಯನ್ನು ತಗ್ಗಿಸುವಂತೆ ಮಾಡುವ ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರವೀನ್ ಕಸ್ವಾನ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಅವರು, ಈ ವಿಡಿಯೋದಲ್ಲಿ ನಿಜವಾದ ಮೃಗ ಯಾರು? ಎಂದು ಅವರು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ. ಬಡಪಾಯಿ ಮೂಕಪ್ರಾಣಿ ದಾರಿತಪ್ಪಿ ಜನವಸತಿ ಪ್ರದೇಶಕ್ಕೆ ಬಂದಿದೆಯಾ ಅಥವಾ ಕಿರುಕುಳ ನೀಡಿ ಅದರ ಪ್ರಾಣವನ್ನೇ ಹೀರಿದ ಜನರೆ? ಎಂದು ಅವರು ಪ್ರಶ್ನಿಸಿದ್ದಾರೆ. ವಿಡಿಯೋ ಹಂಚಿಕೊಂಡ ಅಧಿಕಾರಿ, ವಿಡಿಯೋದ ಕಾಮೆಂಟ್ ಸೆಕ್ಷನ್ ನಲ್ಲಿ ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ತಮಗೆ ತಿಳಿದಿಲ್ಲ. ಕಾರಣ ಅದು ತಮ್ಮ ವಾಟ್ಸ್ ಆಪ್ ಖಾತೆಗೆ ಬಂದಿತ್ತು ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಸೀರೆಯುಟ್ಟು ಫುಟ್‌ಬಾಲ್‌ ಆಡಿದ ಸಂಸದೆ, ವಿಡಿಯೋ ವೈರಲ್‌

ಇನ್ನೊಂದೆಡೆ ವಿಡಿಯೋವನ್ನು ವೀಕ್ಷಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ವಿಡಿಯೋದಲ್ಲಿ ಕಾಣಿಸುತ್ತಿರುವವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಅವರು ಆಗ್ರಹಿಸುತ್ತಿದ್ದಾರೆ. 'ಇಂತಹ ಜನರು ಮನುಷ್ಯರು ಎಂದು ಕರೆಯಿಸಿಕೊಳ್ಳಲು ನಾಲಾಯಕರು' ಎಂದು ಬಳಕೆದಾರರೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಸಾಮಾಜಿಕ ಬಳಕೆದಾರ, ' ನಿಶ್ಚಿತವಾಗಿಯೂ ಚಿರತೆ ಗಾಯಗೊಂಡಂತೆ ಕಾಣಿಸುತ್ತಿದೆ. ಇಲ್ಲದೆ ಹೋದ್ರೆ ಕಾಡಿನ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆಯ ಹತ್ತಿರಕ್ಕೆ ಹೋಗುವ ಧೈರ್ಯ ಇವರಲ್ಲಿ ಯಾರೂ ಮಾಡುತ್ತಿರಲಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News