Viral Video: ಮದುವೆ ಖುಷಿಯಲ್ಲಿ ಆನೆ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ವರ, ವಿಡಿಯೋ ವೈರಲ್!!‌

Groom ride on Elephant: ಬೊಟಾಡ್ ಜಿಲ್ಲೆಯ ಗಡ್ಡಾ ಎಂಬಲ್ಲಿ ನಡೆದ ವಿವಾಹದ ಮೆರವಣಿಗೆಯಲ್ಲಿ ವರ ಆನೆಯ ಮೇಲೆ ಕತ್ತಿ ಹಿಡಿದು ನೃತ್ಯ ಮಾಡಿದ್ದಾನೆ. ಅಲ್ಲದೇ ವರ ಕಾರಿನ ಮೇಲೆ ನಿಂತು ಹಣ ಎಸೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ​

Written by - Puttaraj K Alur | Last Updated : Jan 20, 2025, 07:16 PM IST
  • ಮದುವೆ ಖುಷಿಯಲ್ಲಿ ಆನೆ ಮೇಲೆ ಕತ್ತಿ ಹಿಡಿದು ಡ್ಯಾನ್ಸ್‌ ಮಾಡಿದ ವರ!
  • ಕಾರಿನ ಮೇಲೆ ನಿಂತು ಜನರತ್ತ ಹಣ ಎಸೆದು ಸಂಭ್ರಮಿಸಿದ ಮಧುಮಗ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Viral Video: ಮದುವೆ ಖುಷಿಯಲ್ಲಿ ಆನೆ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ವರ, ವಿಡಿಯೋ ವೈರಲ್!!‌ title=
ಆನೆ ಮೇಲೆ ವರನ ಕತ್ತಿ ಸವಾರಿ!!

Groom ride on Elephant: ಮದುವೆ ಅಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬಂಧು-ಮಿತ್ರರಿಂದ ತುಂಬಿ ತುಳುಕುವ ಮದುವೆ ಮನೆಯಲ್ಲಿ ಖುಷಿಗೆ ಪಾರವಿರಲ್ಲ. ತಮ್ಮ ಮದುವೆ ಸ್ಮರಣೀಯವಾಗಿರಬೇಕು ಅಂತಾ ವಧು-ವರರು ಮದುವೆ ಮಂಟಪಕ್ಕೆ ಬರುವ ವೇಳೆ ಹಳೆಯ ಸಂಪ್ರದಾಯಗಳನ್ನ ಮುರಿದು ವಿಶೇಷ ರೀತಿಯ ಸಾಹಸಗಳನ್ನ ಪ್ರದರ್ಶಿಸುತ್ತಾರೆ. ಬುಲೆಟ್‌ ಗಾಡಿ ಮತ್ತು ಟ್ರ್ಯಾಕ್ಟರ್ ಓಡಿಸಿಕೊಂಡು ಬರುವುದು, ಕುದುವೆ ಏರಿ ಬರುವುದು, ಹಳೆಯ ವಿಂಟೇಜ್‌ ಕಾರಿನಲ್ಲಿ ಅಥವಾ ಐಷಾರಾಮಿ ಕಾರಿನಲ್ಲಿ ಬರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವರ ಆನೆಯ ಮೇಲೆ ಹತ್ತಿ ಹುಡುಗಿಯ ಮನೆಗೆ ಬಂದಿದ್ದಾನೆ. 

ಹೌದು, ವರನೊಬ್ಬ ಮದುವೆಯ ಖುಷಿಯಲ್ಲಿ ಆನೆಯ ಮೇಲೆ ಹತ್ತಿ ಕತ್ತಿ ಹಿಡಿದು ಡ್ಯಾನ್ಸ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಗುಜರಾತ್‌ನ ಸೌರಾಷ್ಟ್ರದ ಗಡ್ಡಾದಲ್ಲಿ ವರನೊಬ್ಬ ಆನೆಯ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿರೋ ವಿಡಿಯೋ ಸಖತ್‌ ಸೌಂಡ್‌ ಮಾಡುತ್ತಿದೆ. 

ಇದನ್ನೂ ಓದಿ: ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ- ವಾಹನ ಸವಾರರ ಪರದಾಟ: ವಿಡಿಯೋ ವೈರಲ್

ಬೊಟಾಡ್ ಜಿಲ್ಲೆಯ ಗಡ್ಡಾ ಎಂಬಲ್ಲಿ ನಡೆದ ವಿವಾಹದ ಮೆರವಣಿಗೆಯಲ್ಲಿ ವರ ಆನೆಯ ಮೇಲೆ ಕತ್ತಿ ಹಿಡಿದು ನೃತ್ಯ ಮಾಡಿದ್ದಾನೆ. ಅಲ್ಲದೇ ವರ ಕಾರಿನ ಮೇಲೆ ನಿಂತು ಹಣ ಎಸೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಹಳೆಯದಾಗಿದ್ದರೂ ಸಹ ಈಗ ವೈರಲ್‌ ಆಗುತ್ತಿದೆ. 

ಈತನ ವಿವಾಹದ ಮೆರವಣಿಗೆಯಲ್ಲಿ ಕಾರುಗಳ ಬೆಂಗಾವಲು ಕಂಡು ಬಂದಿದೆ. ಸ್ಥಳೀಯ ನಿವಾಸಿಗಳಿಗೆ ಈ ಮೆರವಣಿಗೆ ಅವಿಸ್ಮರಣೀಯ ಕ್ಷಣದಂತಿತ್ತು. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಮದುವೆಯಾದಾಗ ಆನೆಯ ಮೇಲೆ ಕುಳಿತು ಮೆರವಣಿಗೆ ಬರುತ್ತಿದ್ದರು. ಅದರಂತೆ ಈ ವರ ಸಹ ತಮ್ಮ ಮದುವೆಯನ್ನ ಸ್ಮರಣೀಯವಾಗಿಸಲು ಈ ಹೊಸ ವಿಧಾನವನ್ನ ಪ್ರಯೋಗಿಸಿದ್ದಾನೆ. 

ಇದನ್ನೂ ಓದಿ: ಕುಂಭ ಮೇಳದ ರಾಜ ರಥ ಏರಲಿರುವ ಈ ಪರಮ ಸುಂದರಿ !ಧರ್ಮ ರಕ್ಷಣೆ ಸ್ಥಳದಲ್ಲಿ ಇದು ಬೇಕೇ ಸಾಧ್ವಿಗಳ ಪ್ರಶ್ನೆ !

ಈ ವರನ ಮದುವೆ ಯಾವುದೇ ರಾಜನ ಮದುವೆಯ ಮೆರವಣಿಗೆ ಏನೋ ಅನ್ನುವಂತೆ ಸ್ಥಳೀಯರಿಗೆ ಭಾಸವಾಗಿದೆ. ಈ ಆನೆಯ ಸವಾರಿಯ ಹಿಂದೆ ಕಾರುಗಳ ಬೆಂಗಾವಲು ಸಹ ಇತ್ತು. ಈ ಮೆರವಣಿಗೆ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು. ಗ್ರಾಮದಲ್ಲಿ ಹಿಂದೆಂದೂ ಕಾಣದ ಸಂಭ್ರಮದ ವಾತಾವರಣ ಈ ಮದುವೆಯಲ್ಲಿ ಕಂಡು ಬಂತು. ಅಂದಹಾಗೆ ಇದು ಭಾವನಗರದ ರಮೇಶ್ ಭಗವಾನ್‌ಭಾಯಿ ಹವಾಲಿಯಾ ಅವರ ಪುತ್ರ ಕುಲದೀಪ್ ಅವರ ವಿವಾಹದ ವಿಡಿಯೋ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News