Viral Video : ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ನವಿಲಿನ ಸೌಂದರ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ. ಭಾರತವನ್ನು ಹೊರತುಪಡಿಸಿದರೆ ಆಗ್ನೇಯ ಏಷ್ಯಾ ಮತ್ತು ಆಫ್ರಿಕಾ ಖಂಡದ ಕಾಂಗೋ ಜಲಾನಯನ ಪ್ರದೇಶದಲ್ಲಿ ಕಂಡುಬರುವ ಈ ಮಯೂರ ಸೌಂದರ್ಯದ ಗಣಿಯೆ ಸರಿ. ನವಿಲನ್ನು ಪಕ್ಷಿಗಳ ರಾಜ ಎಂದೂ ಕರೆಯಲಾಗುತ್ತದೆ. ಆಕಾಶದಲ್ಲಿ ಕರಿ ಮೋಡ ತುಂಬಿ ಮಳೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನವಿಲು ಸಂತೋಷದಿಂದ ಕುಣಿದಾಡುತ್ತದೆ. ಈ ಸಂದರ್ಭದಲ್ಲಿಯೇ ನವಿಲುಗಳು ತಮ್ಮ ಗರಿ ಬಿಚ್ಚಿ ಹೆಜ್ಜೆ ಹಾಕುತ್ತದೆ. ನವಿಲಿನ ಈ ನಾಟ್ಯವನ್ನು ನೋಡಲು ಕಣ್ಣುಗಳೆರಡು ಸಾಲುವುದಿಲ್ಲ. ನವಿಲುಗಳು ಎಲ್ಲಾ ಹಕ್ಕಿಗಳಂತೆ ಹಾರುವುದಿಲ್ಲ ಎನ್ನುವುದು ಎಲ್ಲರೂ ನಂಬಲೇಬೇಕಾದ ಸತ್ಯ. ಆದರೆ ಕೆಲವೊಮ್ಮೆ ಈ ಪ್ರಕೃತಿಯಲ್ಲಿ ಕೆಲ ವಿಚಿತ್ರಗಳು ಸಂಭವಿಸಿ ಬಿಡುತ್ತವೆ. ಅದರಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋ ಕೂಡಾ ಒಂದು.
ಹೌದು, ಇಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎರಡು ನವಿಲು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವುಗಳ ಪೈಕಿ ಒಂದು ನವಿಲು ಇದ್ದಕ್ಕಿದ್ದಂತೆ ಮುಗಿಲೆತ್ತರಕ್ಕೆ ಹಾರಿ ಬಿಡುತ್ತದೆ. ನವಿಲಿನ ಸೌಂದರ್ಯವನ್ನು ನೋಡುವುದೇ ಚೆಂದ. ಅದರಲ್ಲೂ ಬಾನೆತ್ತರಕ್ಕೆ ಹಾರುವ ಹಾರುವ ನವಿಲಿನ ದೃಶ್ಯವನ್ನು ಬಣ್ಣಿಸುವುದು ಸಾಧ್ಯವೇ ಇಲ್ಲ.
ಇದನ್ನೂ ಓದಿ: Video : ಮದುವೆ ಮಂಟಪದಲ್ಲಿ ಎಲ್ಲರೆದುರು ವರನಿಗೆ ಮುತ್ತಿಕ್ಕಿದ ನಾದಿನಿ, ವಧು ವಿನ ಶಾಕಿಂಗ್ ಪ್ರತಿಕ್ರಿಯೆ
Majestic Flight. 🌳🦚😍pic.twitter.com/7dAHcV19P1
— Cosmic Gaia (@CosmicGaiaX) September 22, 2022
ನವಿಲಿನ ಈ ಅದ್ಭುತ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ @CosmicGaiaX ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದೆ. 'ಮೆಜೆಸ್ಟಿಕ್ ಫ್ಲೈಟ್' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೇವಲ 10 ಸೆಕೆಂಡ್ಗಳ ವೀಡಿಯೋವನ್ನು ಇದುವರೆಗೆ 2.5 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ಗಳು ಕೂಡ ಬಂದಿವೆ.
ಇದನ್ನೂ ಓದಿ: Viral Video : ಹಾವಿನ ಹೆಡೆಗೆ ಮುತ್ತಿಡಲು ಹೋದ ಯುವಕ.! ಆಗಿದ್ದೇನು ನೋಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.