Emotional Video: ಒಬ್ಬಂಟಿಯಾಗಿಸುವ ಮುನ್ನ ಒಮ್ಮೆ ತಿರುಗಿ ನೋಡು! ತನ್ನೊಡತಿಗೆ ಮೂಕ ಪ್ರಾಣಿಯ ಮನವಿ!

Woman Abandons Dog Viral Video: ಮಹಿಳೆಯೊಬ್ಬಳು ಕಾರಿನಲ್ಲಿ ಬಂದು ತನ್ನ ನಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದಾಳೆ. ಆ ನಾಯಿಗೆ ಎರಡು ಕಾಲುಗಳಿಲ್ಲ ಎಂಬಂತೆ ಗೋಚರಿಸುತ್ತಿದೆ. ಮುದ್ದಾದ ನಾಯಿ ತನ್ನ ಒಡತಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ, ಆಕೆ ಕರುಣೆ ಇಲ್ಲದೆ, ಹಾಗೆಯೇ ಹೊರಟು ಹೋಗುತ್ತಾಳೆ.

Written by - Bhavishya Shetty | Last Updated : Apr 24, 2023, 11:28 AM IST
    • ಸಾಕುಪ್ರಾಣಿಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗದಂತೆ ಭಾವಿಸುತ್ತಾರೆ.
    • ಇನ್ನೂ ಕೆಲವರು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸುತ್ತಾರೆ.
    • ಅವುಗಳಿಗೆ ಕಿಂಚಿತ್ತು ನೋವಾದರೂ ಅವರು ಸಹಿಸಿಕೊಳ್ಳುವುದಿಲ್ಲ.
Emotional Video: ಒಬ್ಬಂಟಿಯಾಗಿಸುವ ಮುನ್ನ ಒಮ್ಮೆ ತಿರುಗಿ ನೋಡು! ತನ್ನೊಡತಿಗೆ ಮೂಕ ಪ್ರಾಣಿಯ ಮನವಿ! title=
Dog Viral Video

Woman Abandons Dog Viral Video: ಸಾಕುಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅವುಗಳ ಮುಗ್ಧತೆಗೆ ಮನಸೋಲದೆ ಇರಲಾರರು. ಅನೇಕರು ಸಾಕುಪ್ರಾಣಿಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗದಂತೆ ಭಾವಿಸುತ್ತಾರೆ. ಇನ್ನೂ ಕೆಲವರು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸುತ್ತಾರೆ. ಅವುಗಳಿಗೆ ಕಿಂಚಿತ್ತು ನೋವಾದರೂ ಅವರು ಸಹಿಸಿಕೊಳ್ಳುವುದಿಲ್ಲ. ಆದರೆ ನಾವಿಂದು ವಿಡಿಯೋವನ್ನು ತೋರಿಸಲಿದ್ದೇವೆ. ಇದು ನಿಮ್ಮ ಮನ ಮುಟ್ಟದೆ ಇರದು.

ಇದನ್ನೂ ಓದಿ: IMD Akert : ಈ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ !

ಈ ವೀಡಿಯೊದಲ್ಲಿ ನಾವು ನೋಡುತ್ತಿರುವಂತೆ, ಮಹಿಳೆಯೊಬ್ಬಳು ಕಾರಿನಲ್ಲಿ ಬಂದು ತನ್ನ ನಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದಾಳೆ. ಆ ನಾಯಿಗೆ ಎರಡು ಕಾಲುಗಳಿಲ್ಲ ಎಂಬಂತೆ ಗೋಚರಿಸುತ್ತಿದೆ. ಮುದ್ದಾದ ನಾಯಿ ತನ್ನ ಒಡತಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ, ಆಕೆ ಕರುಣೆ ಇಲ್ಲದೆ, ಹಾಗೆಯೇ ಹೊರಟು ಹೋಗುತ್ತಾಳೆ.

 

ಈ ವೀಡಿಯೊವನ್ನು ಟ್ವಿಟ್ಟರ್‌’ನಲ್ಲಿ @ChannelInteres ಪೇಜ್ ಹಂಚಿಕೊಂಡಿದೆ, "ವಿಶ್ವದ ಅತ್ಯಂತ ದುಃಖದ ವೀಡಿಯೊ ಇದು.  ವಿಶ್ವದಲ್ಲಿ ಬದುಕುತ್ತಿರುವ ಕೆಲ ಜನರೇ ಅತ್ಯಂತ ಅಸಹ್ಯಕರ ವಿಷಯಗಳು" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಕಂಡ ನೆಟ್ಟಿಗರು ಮರುಗಿದ್ದಾರೆ, ಅಷ್ಟೇ ಅಲ್ಲದೆ, ಈ ದೃಶ್ಯ ಅನೇಕ ಪ್ರಶ್ನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.  ಗಾಯಗೊಂಡ ಅಥವಾ ಅಂಗವಿಕಲವಾಗಿರುವ ಕಾರಣ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವುಗಳನ್ನು ನಡುರಸ್ತೆಯಲ್ಲಿ ಕೈಬಿಡುವ ಬದಲು ಸಾಕು ಪ್ರಾಣಿಗಳಿಗೆಂದೇ ಇರುವ ಏಜೆನ್ಸಿಗಳು ಮತ್ತು ಪ್ರಾಣಿ ಕೇಂದ್ರಕ್ಕೆ ಬಿಡಬಹುದು. ಈ ರೀತಿ ಬೀದಿಯಲ್ಲಿ ಅನಾಥವಾಗಿಸುವುದು ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ ಹಾಗೂ ಕಾಳಜಿ.

ಇದನ್ನೂ ಓದಿ: Electricity bill: ಮನೆಯಲ್ಲಿ ಜಸ್ಟ್ 299 ರೂ.ನ ಈ ಸಾಧನ ಅಳವಡಿಸಿದ್ರೆ ಜೀವಮಾನಪೂರ್ತಿ ಕರೆಂಟ್ ಉಚಿತ! ಬಿಲ್ ಬರೋದೇ ಇಲ್ಲ

ಇನ್ನು ಈ ವಿಡಿಯೋ ಕಂಡ ಅನೇಕರು ರಿಪೋಸ್ಟ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಮೆಂಟ್’ಗಳನ್ನು ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಮೈಕೆಲ್ ಲೋಹ್ ಎಂಬವರು, “ನೀತಿವಂತನು ತನ್ನ ಪ್ರಾಣಿಯ ಜೀವನವನ್ನು ಲೆಕ್ಕದಲ್ಲಿಟ್ಟುಕೊಳ್ಳುತ್ತಾರೆ. ಆದರೆ ದುಷ್ಟ ಕ್ರೂರತೆ ಹೀಗೆ ಕಾಣಿಸುತ್ತದೆ” ಎಂದು ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News