Viral Video : ತನ್ನ ಮಾಲಿಕನ ಮಾತಿಗೆ ವಿಚಿತ್ರ ಸದ್ದು ಮಾಡುತ್ತಾ ಸ್ಪಂದಿಸುವ ಆನೆ

Elephant Viral video :  ಆನೆಗಳು ತಮ್ಮ ವಾತ್ಸಲ್ಯವನ್ನು ತೋರಿಸುವಾಗ ತಮ್ಮ ಸೊಂಡಿಲುಗಳನ್ನು ಬಡಿಯುತ್ತವೆ ಮಾತ್ರವಲ್ಲ ಕೆಲವು ಅಸ್ಪಷ್ಟ ಶಬ್ದಗಳನ್ನು ಕೂಡಾ ಮಾಡುತ್ತವೆ.  ತಮ್ಮ ಈ ರೀತಿಯ ವರ್ತನೆಯನ್ನು ಆನೆ  ಸಾಮಾನ್ಯವಾಗಿ ತನ್ನ ಮಾಲೀಕನ ಬಳಿಯಲ್ಲಿ ತೋರಿಸುತ್ತದೆ.

Written by - Ranjitha R K | Last Updated : Aug 18, 2022, 02:48 PM IST
  • ಮಾವುತನ ಬಳಿ ಮಾತಿಗಿಳಿದ ಆನೆ
  • ತನ್ನ ಭಾವನೆ ವ್ಯಕ್ತಪಡಿಸುತ್ತಿರುವ ಗಜರಾಣಿ
  • ಇದು ಮೋಟಾರ್ ಸದ್ದಲ್ಲ ಆನೆಯ ಮಾತು
Viral Video : ತನ್ನ ಮಾಲಿಕನ ಮಾತಿಗೆ ವಿಚಿತ್ರ ಸದ್ದು ಮಾಡುತ್ತಾ ಸ್ಪಂದಿಸುವ  ಆನೆ title=
elephant viral video (photo instagram)

 Elephant Viral video : ಆನೆ ಮಾತನಾಡುವುದನ್ನು ಎಂದಾದರೂ ನೋಡಿದ್ದೀರಾ ?  ಇನ್ದೆಥಾ ಪ್ರಶ್ನೆ ಎಂದು ನಿಮಗೆ ಅನ್ನಿಸಬಹುದು. ಹೌದು ಆನೆಗೆ ಮನುಷ್ಯರಂತೆ ಬಾಯಿ ಬಿಟ್ಟು ಮಾತನಾಡುವುದು ಸಾಧ್ಯವಿಲ್ಲ. ಆದರೆ ತಾನು ಯಾವ ರೀತಿ ಸ್ಪಂದಿಸಬೇಕು, ಯಾವ ರೀತಿ ತನ್ನ ಭಾವನೆಯನ್ನು ವ್ಯಕ್ತಪಡಿಸಬೇಕು ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಇತರ ಸಾಕು ಪ್ರಾಣಿಗಳಂತೆಯೇ ಆನೇ ಕೂಡಾ ತನ್ನ ಮಾಲೀಕನ ಬಗ್ಗೆ ಅತಿಯಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತದೆ. ತನ್ನ ಮಾಲೀಕನ ಮಾತನ್ನು ಚಾಚು ತಪ್ಪದೆ ಕೇಳುತ್ತದೆ. ಆತ ಹೊಡೆದರೂ ಬಡಿದರೂ ತಲೆ ಬಾಗಿ ನಿಲ್ಲುತ್ತದೆ.  ತನ್ನ ಭಾವನೆಗಳನ್ನು ವ್ಯಕ್ತಪಡಿಸುವಾಗ ಆನೆಗಳು ಕೆಲವು ವಿಚಿತ್ರ ಸದ್ದುಗಳನ್ನು ಮಾಡುತ್ತವೆ. 

ಆನೆಗಳು ವಾತ್ಸಲ್ಯವನ್ನು ತೋರಿಸುವಾಗ ತಮ್ಮ ಸೊಂಡಿಲುಗಳನ್ನು ಬಡಿಯುತ್ತವೆ ಮಾತ್ರವಲ್ಲ ಕೆಲವು ಅಸ್ಪಷ್ಟ ಶಬ್ದಗಳನ್ನು ಕೂಡಾ ಮಾಡುತ್ತವೆ.  ತಮ್ಮ ಈ ರೀತಿಯ ವರ್ತನೆಯನ್ನು ಆನೆ  ಸಾಮಾನ್ಯವಾಗಿ ತನ್ನ ಮಾಲೀಕನ ಬಳಿಯಲ್ಲಿ ತೋರಿಸುತ್ತದೆ.  ಇನ್ನು ತನ್ನ ಬಾಲವನ್ನು ಬಡಿಯುವ ಮೂಲಕವೂ ಈ ಆನೆಗಳು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತವೆ. 

ಇದನ್ನೂ ಓದಿ : Viral Video : ಹಕ್ಕಿಯನ್ನು ಹಿಡಿದು ತಿನ್ನಲು ಮುಂದಾಗಿತ್ತು ಬೆಕ್ಕು.! ಆದರೆ ಬಂದೇ ಬಿಟ್ಟಿತು ಹಕ್ಕಿಯ ಜೊತೆಗಾರ

ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಂದಿರಾ ಎಂಬ ಆನೆ ತನ್ನ ಮಾವುತನ ಮೇಲೆ ಯಾವ ರೀತಿ ಪ್ರೀತಿ ಹರಿಸುತ್ತಿದ್ದಾಳೆ ಎನ್ನುವುದನ್ನು ನೋಡಬಹುದು.  ಮಾವುತನ ಪ್ರತೀ ಮಾತಿಗೂ ಪ್ರತಿಕ್ರಿಯಿಸುತ್ತಾ ಜೋರಾಗಿ ಸದ್ದು ಮಾಡುವುದನ್ನು ಕೇಳಬಹುದು. ಈ ಸದ್ದು ಕೇಳಿದರೆ ಯಾವುದೋ ಮೋಟಾರ್ ಓಡುವ   ಸದ್ದಿನ ತರಹ ಕೇಳಿಸುತ್ತದೆ. ಆದರೆ ಇದು ಮೋಟಾರು, ಸ್ಕೂಟರ್ ಯಾವುದೂ ಅಲ್ಲ. ಆನೆ ಇಂದಿರಾ ತನ ಭಾವನೆ ವ್ಯಕ್ತಪಡಿಸುವ ರೀತಿ. 

 

 

ಸೂರ್ಯ ಪುತ್ರನ್ ಕರ್ಣನ್ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೋವನ್ನು ಬಹಳಷ್ಟು ಮಂದಿ ಲೈಕ್ ಮಾಡಿದ್ದಾರೆ. 

ಇದನ್ನೂ ಓದಿ : Viral Video: ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿ!

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News