Trending Video : ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ.. ವಿಡಿಯೋ ವೈರಲ್‌

Trending Video : ಆನೆಗಳು ಕೆಲವೊಮ್ಮೆ ನೋಡುಗರನ್ನು ಸಾಕಷ್ಟು ರಂಜಿಸುತ್ತವೆ. ಆನೆ - ಮಾನವನ ಸಂಘರ್ಷ ಎಷ್ಟು ಕೆಟ್ಟದಾಗಿರುತ್ತದೋ, ಇಬ್ಬರ ನಡುವಿನ ಸ್ನೇಹವೂ ಅಷ್ಟೇ ಗಾಢವಾಗಿರುತ್ತದೆ. ಇಂದು ನಾವು ನಿಮಗೊಂದು ಅತ್ಯಂತ ಪ್ರತಿಭಾವಂತ ಆನೆಯ ವಿಡಿಯೋವನ್ನು ತೋರಿಸಲಿದ್ದೇವೆ. 

Written by - Chetana Devarmani | Last Updated : Nov 24, 2022, 01:32 PM IST
  • ಅತ್ಯಂತ ಪ್ರತಿಭಾವಂತ ಆನೆಯ ವಿಡಿಯೋ
  • ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
Trending Video : ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ.. ವಿಡಿಯೋ ವೈರಲ್‌  title=
ಡ್ರಮ್‌ ನುಡಿಸುವ ಆನೆ

Trending Video : ಆನೆಗಳು ಕೆಲವೊಮ್ಮೆ ನೋಡುಗರನ್ನು ಸಾಕಷ್ಟು ರಂಜಿಸುತ್ತವೆ. ಆನೆ - ಮಾನವನ ಸಂಘರ್ಷ ಎಷ್ಟು ಕೆಟ್ಟದಾಗಿರುತ್ತದೋ, ಇಬ್ಬರ ನಡುವಿನ ಸ್ನೇಹವೂ ಅಷ್ಟೇ ಗಾಢವಾಗಿರುತ್ತದೆ. ಇಂದು ನಾವು ನಿಮಗೊಂದು ಅತ್ಯಂತ ಪ್ರತಿಭಾವಂತ ಆನೆಯ ವಿಡಿಯೋವನ್ನು ತೋರಿಸಲಿದ್ದೇವೆ. ಇದು ನಿಮ್ಮನ್ನು ಹುರಿದುಂಬಿಸುತ್ತದೆ. ಕೇವಲ 39 ಸೆಕೆಂಡ್‌ಗಳ ಈ ವಿಡಿಯೋ ಇದುವರೆಗೆ ಟ್ವಿಟ್ಟರ್‌ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದ್ದು, ಆನೆಯು ಮನುಷ್ಯನಿಂದ ಡ್ರಮ್ ನುಡಿಸುವುದನ್ನು ಕಲಿತು ನಂತರ ತನ್ನ ಸೊಂಡಿಲಿನಿಂದ ಸಂಗೀತ ವಾದ್ಯವನ್ನು ನುಡಿಸುತ್ತಿರುವ ದೃಶ್ಯ ಎಲ್ಲರ ಹೃದಯ ಗೆಲ್ಲುತ್ತಿದೆ.

ಇದನ್ನೂ ಓದಿ : ಅನುಮಾನಾಸ್ಪದ ರೀತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಶವ ಪತ್ತೆ

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗೆ "ನಮ್ಮೆಲ್ಲರಲ್ಲೂ ಒಬ್ಬ ಡ್ರಮ್ಮರ್ ಇದ್ದಾನೆ" ಎಂದು ಶೀರ್ಷಿಕೆ ನೀಡಲಾಗಿದೆ. ಆನೆ ಮುಂದೆ ಒಬ್ಬ ವ್ಯಕ್ತಿ ಡ್ರಮ್‌ ನುಡಿಸುತ್ತಿರುತ್ತಾನೆ. ಆನೆಯು ಅವನ್ನು ತುಂಬಾ ತಾಲ್ಮೆಯಿಂದ ಗಮನಿಸುತ್ತಿರುತ್ತದೆ. ಸ್ವಲ್ಪ ಸಮಯದ ನಂತರ, ಆತ ಡ್ರಮ್‌ ಬಾರಿಸುವುದನ್ನು ನಿಲ್ಲಿಸುತ್ತಾನೆ. ಆಗ ಆನೆಯು ತನ್ನ ಸೊಂಡಿಲನ್ನು ಬಳಸಿ ಡ್ರಮ್ ಅನ್ನು ಹತ್ತಿರ ತರುವಂತೆ ಕೇಳುತ್ತದೆ. ಬಳಿಕ ಆ ವ್ಯಕ್ತಿ ಅದರ ಬಳಿ ಡ್ರಮ್‌ ಇಟ್ಟ ತಕ್ಷಣ ಸೊಂಡಿಲಿನಿಂದ ನುಡಿಸಲು ಆರಂಭಿಸುತ್ತದೆ.

 

 

ನವೆಂಬರ್ 10 ರಂದು ಹಂಚಿಕೊಂಡ ನಂತರ, ಈ ವಿಡಿಯೋ ಇದುವರೆಗೆ 4.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು 7,700 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದಿದೆ. "ಸೋ ಕೂಲ್. ಲವ್ ಇಟ್" ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಹೀಗೆ ಈ ಆನೆಯ ಡ್ರಮ್‌ ನುಡಿಸುವ ವಿಡಿಯೋ ಎಲ್ಲರ ಮನಗೆಲ್ಲುತ್ತಿದೆ. 

ಇದನ್ನೂ ಓದಿ : Smriti Irani Pickle Recipe: ರಾಜಕೀಯದ ಜೊತೆಗೆ, ಅಡುಗೆಮನೆಯಲ್ಲೂ ಸ್ಮೃತಿ ಇರಾನಿ ಕೈ ಚಳಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News