Viral Video : ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಸ್ಮಾರ್ಟ್‌ ಆನೆ.. ವಿಡಿಯೋ ನೋಡಿ ಅಚ್ಚರಿ ಪಡ್ತೀರಾ

Elephant Video : ಸೋಷಿಯಲ್‌ ಮೀಡಿಯಾದಲ್ಲಿ ಸ್ಮಾರ್ಟ್‌ ಆನೆಯ ವಿಡಿಯೋವೊಂದು ವೈರಲ್‌ ಆಗಿದೆ. ಬಾಳೆಹಣ್ಣನ್ನು ಈ ಆನೆ ಸೇವಿಸುವ ಪರಿ ಎಲ್ಲರ ಗಮನ ಸೆಳೆಯುತ್ತಿದೆ. ಲಕ್ಷಾಂತರ ಜನರು ಈ ವಿಡಯೋವನ್ನು ವೀಕ್ಷಿಸಿದ್ದು, ಲೈಕ್ಸ್‌ - ಕಾಮೆಂಟ್ಸ್‌ ಕೂಡ ಬಂದಿವೆ.   

Written by - Chetana Devarmani | Last Updated : Apr 14, 2023, 12:24 PM IST
  • ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಸ್ಮಾರ್ಟ್‌ ಆನೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
  • ವಿಡಿಯೋ ನೋಡಿ ಅಚ್ಚರಿ ಪಡ್ತೀರಾ
Viral Video : ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಸ್ಮಾರ್ಟ್‌ ಆನೆ.. ವಿಡಿಯೋ ನೋಡಿ ಅಚ್ಚರಿ ಪಡ್ತೀರಾ title=
Elephant

Elephant Viral Video : ಸಾಮಾಜಿಕ ಮಾಧ್ಯಮ ಒಂದು ಮೋಜಿನ ಜಗತ್ತು. ಇಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್‌ ಆಗುತ್ತವೆ. ಪ್ರತಿದಿನ ಕೋಟ್ಯಾಂತರ ಜನರು ಸೋಷಿಯಲ್‌ ಮೀಡಿಯಾ ಬಳಸುತ್ತಾರೆ. ಪ್ರಾಣಿಗಳು, ಹಾವು, ಕುಡುಕರು, ಮದುವೆ ಮನೆಯ ವಿಡಿಯೋ, ಮಂಗಗಳ ತುಂಟಾಟ ಹೀಗೆ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಇದೀಗ ಆನೆಯ ವಿಡಿಯೋ ವೈರಲ್‌ ಆಗಿದೆ. ಆನೆಗಳು ಹೆಚ್ಚು ಬುದ್ಧಿವಂತ ಜೀವಿಗಳು. ಆನೆಯನ್ನು ದೇವಸ್ಥಾನ, ಉತ್ಸವಗಳಲ್ಲಿ ನಾವು ಸಾಮಾನ್ಯವಾಗಿ ಕಾಣುತ್ತೇವೆ. ಇತ್ತೀಚೆಗೆ ತುಂಬಾ ಸ್ಮಾರ್ಟ್‌ ಆನೆಯ ವಿಡಿಯೋ ವೈರಲ್‌ ಆಗಿದೆ. ಇಂತಹ ಜಾಣ ಆನೆಯನ್ನು ನೀವು ಎಂದೂ ನೋಡಿರಲು ಸಾಧ್ಯವಿಲ್ಲ. 

ಇದನ್ನೂ ಓದಿ :Viral News: ಆತ 22 ಕಿಮೀ ನಡೆದು ಬಂದರೆ, ಆಕೆ 10 ಕಿ,ಮೀ ನಡೆದು ಬಂದಳು: ಮುಖಾಮುಖಿಯಾದಾಗ ಆಯ್ತು..! 

ಪಾಂಗ್ ಫಾ ಎಂಬ ಹೆಸರಿನ ಅತ್ಯಂತ ವಿಶಿಷ್ಟವಾದ ಏಷ್ಯನ್ ಆನೆ ಬರ್ಲಿನ್ ಮೃಗಾಲಯದಲ್ಲಿದೆ. ಈ ಆನೆಗೆ ಮಹಿಳೆಯೊಬ್ಬಳು ಬಾಳೆಹಣ್ಣನ್ನು ನೀಡುತ್ತಾಳೆ. ಸಿಪ್ಪೆಯನ್ನು ಸುಲಿದು, ಬರೀ ಬಾಳೆ ಹಣ್ಣನ್ನು ಮಾತ್ರ ಆನೆ ತಿನ್ನುತ್ತದೆ. ತಿರುಳನ್ನು ಅಲ್ಲಾಡಿಸುತ್ತ ಸಿಪ್ಪೆಯನ್ನು ತೆಗೆಯುತ್ತದೆ. ಬಳಿಕ ಹಣ್ಣನ್ನು ಮಾತ್ರ ತಿನ್ನುತ್ತದೆ. 

ಏಷ್ಯನ್ ಆನೆ ಪಾಂಗ್ ಫಾ ಸೊಂಡಿಲಿನ ತುದಿಯಿಂದ ಸಿಪ್ಪೆಯನ್ನು ಸುಲಿಯುವ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ನೆಟ್ಟಿಗರು ಆನೆಯ ಜಾಣತನವನ್ನು ಮೆಚ್ಚಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಪ್ಯಾಂಗ್ ಫಾ ಆನೆ ಕೇವಲ ಹಳದಿ ಬಾಳೆಹಣ್ಣುಗಳನ್ನು ಮಾತ್ರ ಸೇವಿಸುತ್ತದೆ. ಕಂದು ಬಣ್ಣ ಬಂದಿದ್ದರೆ ಆ ಬಾಳೆಹಣ್ಣನ್ನು ಅದು ಸೇವಿಸುವುದಿಲ್ಲ. ಇದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದು. 

ಇದನ್ನೂ ಓದಿ : White Crow Video: ನೀವು ಎಂದಾದ್ರೂ ಬಿಳಿ ಕಾಗೆ ನೋಡಿದ್ದೀರಾ? ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿತು ಈ ಅಪರೂಪದ ಪಕ್ಷಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News