ನಂಬಿಕೆಯಿದ್ದರೆ ಬೆಟ್ಟದಂಥಹ ಕಷ್ಟವೂ ಕರಗುವುದು ! ನಿಯತ್ತಿನ ಪ್ರಾಣಿಯ ಈ ವಿಡಿಯೋ ನೋಡಲೇ ಬೇಕು

Dog Viral Video : ತಲೆ ಮೇಲೆಯೇ ರೈಲು ಹಾದು  ಹೋಗುತ್ತಿದ್ದರೂ ನಾಯಿ ಸುಮ್ಮನೆ ಕುಳಿತಿರುವುದನ್ನು ಗಮನಿಸಬಹುದು.  ಒಂದು ವೇಳೆ ನಾಯಿ ಗಾಬರಿಗೊಂಡು ಆ ಜಾಗದಿಂದ ಸ್ವಲ್ಪ ಚಲಿಸುತ್ತಿದ್ದರೂ ಅದು ಬದುಕಿ ಉಳಿಯುತ್ತಿರಲಿಲ್ಲ. 

Written by - Ranjitha R K | Last Updated : Apr 11, 2023, 11:44 AM IST
  • ಜೀವನದಲ್ಲಿ ಎಂಥ ಕಠಿಣ ಪರಿಸ್ಥಿತಿ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು.
  • ಈ ಮೂಕ ಪ್ರಾಣಿ ಕಳಿಸಿದ ಪಾಠ ಅದ್ಭುತ
  • ವೈರಲ್ ಆಯಿತು ನಾಯಿಯ ವಿಡಿಯೋ
ನಂಬಿಕೆಯಿದ್ದರೆ ಬೆಟ್ಟದಂಥಹ ಕಷ್ಟವೂ ಕರಗುವುದು ! ನಿಯತ್ತಿನ ಪ್ರಾಣಿಯ ಈ ವಿಡಿಯೋ ನೋಡಲೇ ಬೇಕು  title=

Dog Viral Video : ಜೀವನದಲ್ಲಿ ಎಂಥ ಕಠಿಣ ಪರಿಸ್ಥಿತಿ  ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು. ಮನಸ್ಸು ಶಾಂತವಾಗಿರಬೇಕು. ತಾಳ್ಮೆಯಿದ್ದರೆ ಎಂಥ ಪರಿಸ್ಥಿತಿಯನ್ನು ಬೇಕಾದರೂ ಗೆದ್ದು ಬರಬಹುದು. ಇದಕ್ಕೆ ಇದೀಗ ಟ್ವಿಟರ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿಯಾಗಿದೆ. ಕಷ್ಟದ ಸಮಯದಲ್ಲಿ ಎದೆಗುಂದಬಾರದು. ನಂಬಿಕೆ ಕಳೆದುಕೊಳ್ಳಬಾರದು ಎನ್ನುವುದನ್ನು ಈ ಮೂಕ ಪ್ರಾಣಿ ತೋರಿಸಿಕೊಡುತ್ತದೆ. 

ನಾಯಿ ಮರಿಯೊಂದು ರೈಲು ಹಳಿಗಳ ಮಧ್ಯೆ ಆಟವಾಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ರೈಲು ಬಂದು ಬಿಡುತ್ತದೆ. ರೈಲು ಬಂದ ರಭಸಕ್ಕೆ ನಾಯಿ ಹಳಿ ಬಿಟ್ಟು ಓಡಿ ಬರುವುದು ಕೂಡಾ ಸಾಧ್ಯವಾಗುವುದಿಲ್ಲ. ನಾಯಿ ಮರಿಯ ಮುಖದಲ್ಲಿ ಭಯ ಮತ್ತು ಗಾಬರಿ ಕಾಣಿಸುತ್ತದೆ. ಆದರೂ ನಾಯಿ ಜೀವನದ ಮೇಲಿನ ಭರವಸೆ ಕಳೆದುಕೊಳ್ಳಲಿಲ್ಲ.  ತಲೆ ಮೇಲೆಯೇ ರೈಲು ಹಾದು  ಹೋಗುತ್ತಿದ್ದರೂ ನಾಯಿ ಸುಮ್ಮನೆ ಕುಳಿತಿರುವುದನ್ನು ಗಮನಿಸಬಹುದು.  ಒಂದು ವೇಳೆ ನಾಯಿ ಗಾಬರಿಗೊಂಡು ಆ ಜಾಗದಿಂದ ಸ್ವಲ್ಪ ಚಲಿಸುತ್ತಿದ್ದರೂ ಅದು ಬದುಕಿ ಉಳಿಯುತ್ತಿರಲಿಲ್ಲ. 

ಇದನ್ನೂ ಓದಿ : Viral Video: ಪಿಸ್ತೂಲಿನಿಂದ ಕೇಕ್ ಕತ್ತರಿಸಿದ ವ್ಯಕ್ತಿ ಬಂಧಿಸಿದ ದೆಹಲಿ ಪೊಲೀಸರು

ತನ್ನ ಮೇಲೆಯೇ ಸಾವು ಹಾದು ಹೋಗುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದ ನಾಯಿ ಕೊನೆಯವರೆಗೂ ಆಶಾದಾಯಕವಾಗಿರುತ್ತದೆ. ರೈಲು ಹಾದು ಹೋಗುತ್ತಿದ್ದಂತೆಯೇ ಚಂಗನೆ ನೆಗೆದು ಹಳಿಯಿಂದ ಹೊರ ಬರುತ್ತದೆ. ತಾಳ್ಮೆ, ಧೈರ್ಯದ ಜೊತೆಗೆ ನಾಯಿಯ ಆಯುಷ್ಯ ಕೂಡಾ ಗಟ್ಟಿಯಾಗಿತ್ತು. 

 

ಈ ವಿಡಿಯೋವನ್ನು ಸ್ಟಾಲಿನ್ ಐಪಿಎಸ್ ಅವರು ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ತಾಳ್ಮೆ ಮತ್ತು ನಂಬಿಕೆ ಇದ್ದರೆ ಯಾವುದೇ ರೀತಿಯ ಸಂಕಟ ಮತ್ತು ಅಪಾಯವನ್ನು ಮೆಟ್ಟಿ ನಿಲ್ಲಬಹುದು ಎಂದು ಅವರು ಬರೆದಿದ್ದಾರೆ. ಅವರ ಈ ಟ್ವಿಟ್ಟರ್ ಪೋಸ್ಟ್ ಅನ್ನು ಹಲವರು ಲೈಕ್ ಮಾಡಿದ್ದಾರೆ. 

ಇದನ್ನೂ ಓದಿ : ಭೂಮಿಯೂ ಉಸಿರಾಡುತ್ತದೆ ! ಇಲ್ಲಿದೆ ನೋಡಿ ಈ ಅದ್ಭುತದ ವಿಡಿಯೋ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News