Video: ಭಾರಿ ವೈರಲ್ ಆಗುತ್ತಿದೆ ಬೆಂಗ್ಳೂರ್ ಕಾಲೇಜು ಹುಡ್ಗಿಯರ ಈ ಫೈಟ್ ವಿಡಿಯೋ

Girls Fight In College: ಸಾಮಾಜಿಕ ಮಾಧ್ಯಮದಳಲ್ಲಿ ವಿಡಿಯೋವೊಂದು ಭಾರಿ ಹಂಚಿಕೆಯಾಗುತ್ತಿದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಫೈಟ್ ಇದಾಗಿದೆ. ಈ ಘಟನೆ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕ್ಯಾಂಟೀನ್ ನಲ್ಲಿ ನಡೆದಿದೆ ಎನ್ನಲಾಗಿದೆ.  

Written by - Nitin Tabib | Last Updated : Oct 11, 2022, 04:11 PM IST
  • ಮೊದಲಿಗೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ನಂತರ ಅದು ಜಗಳಕ್ಕೆ ತಿರುಗುತ್ತದೆ
  • ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಈ ವಾದದ ಸಮಯದಲ್ಲಿ ಹುಡುಗಿಯರು
  • ಪರಸ್ಪರ ತಳ್ಳುವುದು, ಕಪಾಳಮೋಕ್ಷ ಮಾಡಿ ಪರಸ್ಪರರಿಗೆ ಚುಕ್ಕೆ ಕಾಣಿಸುತ್ತಿರುವುದನ್ನು ನೀವು ಗಮನಿಸಬಹುದು.
Video: ಭಾರಿ ವೈರಲ್ ಆಗುತ್ತಿದೆ ಬೆಂಗ್ಳೂರ್ ಕಾಲೇಜು ಹುಡ್ಗಿಯರ ಈ ಫೈಟ್ ವಿಡಿಯೋ title=
Crazy Catfight

Crazy Cat Fight Video: ಮನರಂಜನೆಯ, ವಿಚಿತ್ರ ಮತ್ತು ತಮಾಷೆಯ ವೀಡಿಯೊಗಳು ಆಗಾಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ, ಇದು ಬಳಕೆದಾರರ ಗಮನವನ್ನು ಸೆಳೆಯುತ್ತದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಜಗಳದ ವಿಡಿಯೋವೊಂದನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕ್ಯಾಂಟೀನ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ-Viral Video : ಮಾವುತನ ಪಿಸು ಮಾತು ಕೇಳಲು ಮಂಡಿಯೂರಿದ ಗಜರಾಜ

ಇಬ್ಬರು ಹುಡುಗಿಯರ ನಡುವೆ ಹಠಾತ್ ಜಗಳ
ಮೊದಲಿಗೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ನಂತರ ಅದು ಜಗಳಕ್ಕೆ ತಿರುಗುತ್ತದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಈ ವಾದದ ಸಮಯದಲ್ಲಿ ಹುಡುಗಿಯರು ಪರಸ್ಪರ ತಳ್ಳುವುದು, ಕಪಾಳಮೋಕ್ಷ ಮಾಡಿ ಪರಸ್ಪರರಿಗೆ ಚುಕ್ಕೆ ಕಾಣಿಸುತ್ತಿರುವುದನ್ನು ನೀವು ಗಮನಿಸಬಹುದು. ಆದರೆ ಈ ಜಗಳದ ಹಿಂದಿನ ಕಾರಣ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ. ಇದೇ ವೇಳೆ ಇತರ ವಿದ್ಯಾರ್ಥಿಗಳು ವಿದ್ಯಾರ್ಥಿನೀಯರ ನಡುವೆ ನಡೆಯುತ್ತಿರುವ ಈ ಹೊಡೆದಾಟ ತಡೆಯುವ ಬದಲು  ಕೇಕೆ ಹಾಕಿ ಸಂಭ್ರಮಿಸುತ್ತಿರುವುದು ಕಂಡು ಬಂದಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತೂಕದ ಯಂತ್ರಕ್ಕಾಗಿ ಇಬ್ಬರು ಮಹಿಳೆಯರು ತೀವ್ರ ಜಗಳವಾಡುತ್ತಿರುವುದು ಕಂಡು ಬಂದಿತ್ತು.

ಇದನ್ನೂ ಓದಿ-Viral Video: ಜಿಮ್ ನಲ್ಲಿ ಜುಟ್ಟು ಹಿಡಿದು ಜಗಳವಾಡಿದ ನಾರಿಮಣಿಯರು: ವಿಡಿಯೋ ನೋಡಿ

ಈ ಮೊದಲು ಕೂಡ ಇಂತಹ ಘಟನೆ ನಡೆದಿವೆ
ಇದಕ್ಕೂ ಮೊದಲು ವೈರಲ್ ಆಗಿದ್ದ ಇಂತಹುದೇ ಒಂದು ವಿಡಿಯೋದಲ್ಲಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ ಮಹಿಳೆ ವೇಟ್ ಮಶೀನ್ ಬಳಸುವುದಕ್ಕಾಗಿ ತನ್ನ ಸರದಿಗಾಗಿ ಕಾಯುತ್ತಿದ್ದಾಳೆ. ಅಷ್ಟರಲ್ಲಿಯೇ ಹಸಿರು ಬಣ್ಣದ ಟೀಶರ್ಟ್ ಧರಿಸಿರುವ ಮಹಿಳೆ ಓಡಿ ಬಂದು ಆಕೆಯನ್ನು ಮಶೀನ್ ಮೇಲೆ ತಳ್ಳುತ್ತಾಳೆ ಮತ್ತು ಇಬ್ಬರ ಮಧ್ಯೆ ಜಗಳ ಆರಂಭವಾಗುತ್ತದೆ. ಇಬ್ಬರು ಜಗಳದ ವೇಳೆ ಪರಸ್ಪರರ ಜುಟ್ಟು ಹಿಡಿದು ಎಳೆದಾಡುತ್ತಾರೆ ಮತ್ತು ಕಪಾಳಮೋಕ್ಷ ಮಾಡುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News