ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣವನ್ನು ಒಂದು ಕ್ಷಣ ನಿಲ್ಲಿಸಿದರು. ಏಕೆಂದರೆ ಹತ್ತಿರದ ಮಸೀದಿಯಿಂದ 'ಆಜಾನ್' (ಮುಸ್ಲಿಂ ಪ್ರಾರ್ಥನೆಯ ಕರೆ) ನಡೆಯುತ್ತಿತ್ತು. ಸುಮಾರು ಅರ್ಧಗಂಟೆಯ ತಮ್ಮ ಭಾಷಣದಲ್ಲಿ ಐದು ನಿಮಿಷಗಳ ಕಾಲ ಬಿಜೆಪಿಯ ಹಿರಿಯ ನಾಯಕ ವಿರಾಮ ನೀಡಿ ವೇದಿಕೆಯಲ್ಲಿದ್ದವರಿಗೆ "ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ" ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ “ಆಜಾನ್” ನಡೆಯುತ್ತಿದೆ ಎಂದು ವೇದಿಕೆಯ ಮೇಲಿದ್ದ ಯಾರೋ ಹೇಳಿದಾಗ, ಶಾ ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ
ಆಜಾನ್ ಸಮಯದಲ್ಲಿ ಅಮಿತ್ ಶಾ ಅವರು ತಮ್ಮ ಭಾಷಣವನ್ನು ನಿಲ್ಲಿಸಿದ ವೀಡಿಯೊವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನೆಟಿಜನ್‌ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ.
Halting the Speech Midway by Hnbl Home Minister due to #Azaan is Great Gesture and has Won the Hearts of Kashmiris, this Clearly Indicates the Respect for the Religion and Sentiments of Kashmiris. @AmitShah @AshokKoul59 #NayaKashmir pic.twitter.com/853g8IXXgq
— Sheikh Iqbal (@ListenIqbal) October 5, 2022
ಸ್ವಲ್ಪ ಸಮಯದ ನಂತರ ಪ್ರಾರ್ಥನೆ ನಿಂತಾಗ, ತಮ್ಮ ಭಾಷಣವನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ಸುರಿಮಳೆಗೈದರು.
ಇದನ್ನೂ ಓದಿ: Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .!
ಇನ್ನು ಈ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾರೆ. “ಆಜಾನ್ ಕಾರಣದಿಂದ ಮಾನ್ಯ ಗೃಹ ಸಚಿವರು ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಇದು ಗೌರವ ಸೂಚಕ ಮತ್ತು ಅವರ ಈ ನಡತೆ ಕಾಶ್ಮೀರಿಗಳ ಹೃದಯಗಳನ್ನು ಗೆದ್ದಿದೆ. ಇದು ಕಾಶ್ಮೀರಿಗಳ ಧರ್ಮ ಮತ್ತು ಭಾವನೆಗಳಿಗೆ ಗೌರವವನ್ನು ನೀಡಿದ್ದಾರೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.