ಸಿಂಹದ ಹೊಲಿಕೆಯ ಕರು ಜನನ..! ಶಾಕಿಂಗ್‌ ವಿಡಿಯೋ ವೈರಲ್‌

Calf born like Lion : ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸಿಂಹವನ್ನು ಹೊಲುವ ಕರುವಿಗೆ ಹಸುವೊಂದು ಜನ್ಮ ನೀಡಿದೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಸಿಂಹ ರೂಪದ ಕರು ನೋಡಿ ಜನರು ಪವಾಡ ಎಂದು ಕರೆಯುತ್ತಿದ್ದಾರೆ. ಈ ಕೆಳಗೆ ವಿಡಿಯೋ ಇದೆ ನೀವು ಒಮ್ಮೆ ನೋಡಿ.

Written by - Krishna N K | Last Updated : Apr 28, 2023, 08:15 PM IST
  • ಸಿಂಹದ ಹೊಲಿಕೆಯ ಕರು ಜನನ
  • ಮಧ್ಯಪ್ರದೇಶದಲ್ಲಿ ನಡೆದ ಘಟನೆ.
  • ಘಟನೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌
ಸಿಂಹದ ಹೊಲಿಕೆಯ ಕರು ಜನನ..! ಶಾಕಿಂಗ್‌ ವಿಡಿಯೋ ವೈರಲ್‌ title=

Viral video : ಇತ್ತೀಚಿಗೆ ಚಿತ್ರ ವಿಚಿತ್ರ ಘಟನೆಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಲ್ಲದೆ, ಪ್ರಕೃತಿಯಲ್ಲಿ ಜರುಗುವ ವಿಸ್ಮಯಗಳು ಜನರನ್ನು ನಿಬ್ಬೆರಗಾಗಿಸುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದ್ದು, ನೋಡುಗರಿಗೆ ಅಚ್ಚರಿ ಮೂಡಿಸುತ್ತಿದೆ.

ಹೌದು.. ಹಸುವೊಂದು ಸಿಂಹದಂತೆ ಹೊಲುವ ಕರುವಿಗೆ ಜನ್ಮ ನೀಡಿದೆ. ಈ ಕುರಿತು ಚಿತ್ರಗಳು ಮತ್ತು ವೀಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಇದನ್ನು ನೀವು ನಂಬಲು ಸಾಧ್ಯವಿಲ್ಲ, ಆದ್ರೆ, ವಿಚಿತ್ರ ಅಂದ್ರೆ ಇದು ನಿಜ. ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಗೋರ್ಖಾ ಗ್ರಾಮದಲ್ಲಿ ತೆಹ್ಸಿಲ್ ಬೇಗಂಗಂಜ್‌ನಲ್ಲಿ ಈ ಘಟನೆ ನಡೆದಿದೆ. ಈ ಅದ್ಭುತ ಸಂಗತಿಯ ಸುದ್ದಿ ತಿಳಿದ ಜನರು ಇದನ್ನು ನೈಸರ್ಗಿಕ ಪವಾಡ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Kissing Viral Video: ಚಲಿಸುತ್ತಿರುವ ಸ್ಕೂಟಿ ಮೇಲೆ ಹುಡುಗ-ಹುಡುಗಿ ರೋಮ್ಯಾನ್ಸ್, ಬಾಯ್ ಫ್ರೆಂಡ್ ನನ್ನು ತಬ್ಬಿ ಮುತ್ತು ಕೊಡುತ್ತಿದ್ದಾಳೆ ಹುಡುಗಿ

ಪಶುವೈದ್ಯಕೀಯ ಇಲಾಖೆಯು ವಿಭಿನ್ನ ವಿಧಾನವನ್ನು ಬಳಸಿದೆ ಮತ್ತು ಇದು ಗರ್ಭಾಶಯದ ದೋಷ ಎಂದು ತಿಳಿದು ಬಂದಿದೆ. ಕರು ಆರಂಭದಲ್ಲಿ ಆರೋಗ್ಯವಾಗಿದ್ದರೂ, ಹುಟ್ಟಿದ ಮೂವತ್ತು ನಿಮಿಷಗಳ ನಂತರ ದುರಂತವಾಗಿ ಸಾವನ್ನಪ್ಪಿತು. ಸಿಂಹದ ಆಕಾರದಲ್ಲಿರವ ಸತ್ತ ಕರುವನ್ನು ನೋಡಲು ಜನರು ತಂಡೋಪ ತಂಡವಾಗಿ ಗೋರ್ಖಾ ಗ್ರಾಮಕ್ಕೆ ಬರುತ್ತಿದ್ದಾರೆ. ಅಲ್ಲದೆ, ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾತುತ್ತಿದೆ.

ಈ ರೀತಿಯ ಘಟನೆಗಳು ನಡೆಯುವು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದೆ. ಕೆಲವು ದಿನಗಳ ಹಿಂದೆ ಮೇಕೆ ಮರಿಯ ವಿಡಿಯೋ ಒಂದು ವೈರಲ್ ಆಗಿತ್ತು. ಈ ಮೇಕೆ ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿತ್ತು. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ವೈದ್ಯಕೀಯ ಪ್ರಕಾರ ಇಂತಹ ಘಟನೆಗೆ ʼಹೈಡ್ರೋಸೆಫಾಲಸ್ʼ ಎಂದು ಕರೆಯಲಾಗುತ್ತದೆ. ತಾಯಿಗೆ ವಿಟಮಿನ್ ಎ ಕೊರತೆಯಿರುವಾಗ ಅಥವಾ ಗರ್ಭಾವಸ್ಥೆಯಲ್ಲಿ ಅಸಮರ್ಪಕ ಔಷಧವನ್ನು ನೀಡಿದಾಗ ಅನಾರೋಗ್ಯದಿಂದ ಹುಟ್ಟುವ ಮಗು ಈ ರೀತಿಯ ವಿಚಿತ್ರ ಆಕಾರ ಪಡೆದುಕೊಳ್ಳುತ್ತವೆಯಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News