Viral Video : ಮದುವೆ ಮಂಟಪದಲ್ಲಿ ವರನನ್ನು ಕಂಡ ಕೂಡಲೇ ಗಳ ಗಳನೆ ಅತ್ತ ವಧು

ತಾನಿನ್ನು ಏನಿದ್ದರೂ ಈ ಮನೆಗೆ ಅತಿಥಿ ಎಂಬ ಭಾವ ಆ ಹೆಣ್ಣು ಮಗಳನ್ನು ಕಾಡದೇ ಇರದು. ಮದುವೆಯ ದಿನ ಬಂದರೆ ವಧು ಮಾತ್ರವಲ್ಲ ಆಕೆಯ ಕುಟುಂಬ ಕೂಡಾ ಸಾಮಾನ್ಯವಾಗಿ ಭಾವುಕರಾಗಿರುತ್ತಾರೆ.  

Written by - Ranjitha R K | Last Updated : Jul 1, 2022, 03:17 PM IST
  • ಮದುವೆಯ ನಂತರ ಹೆಣ್ಣಿನ ಹೊಸ ಜೀವನ ಆರಂಭವಾಗುತ್ತದೆ.
  • ಹೊಸ ಜೀವನದ ಬಗ್ಗೆ ಹೆಣ್ಣು ಸಾವಿರಾರು ಕನಸು ಕಟ್ಟಿರುತ್ತಾಳೆ
  • ವರನನ್ನು ನೋಡಿ ಕಣ್ಣೀರಾದ ವಧು
Viral Video : ಮದುವೆ ಮಂಟಪದಲ್ಲಿ ವರನನ್ನು ಕಂಡ ಕೂಡಲೇ ಗಳ ಗಳನೆ ಅತ್ತ ವಧು  title=
Video video (photo instagram)

Bride Groom Video : ಮದುವೆಯ ನಂತರ ಹೆಣ್ಣಿನ ಹೊಸ ಜೀವನ ಆರಂಭವಾಗುತ್ತದೆ. ಮದುವೆಯ ದಿನ ತನ್ನ ಹೊಸ ಜೀವನದ ಬಗ್ಗೆ ಹೆಣ್ಣು ಸಾವಿರಾರು ಕನಸು ಹೊತ್ತು ಮನೆಯಿಂದ ಹೆಜ್ಜೆ ಇಡುತ್ತಾಳೆ. ತನ್ನ ಬಾಳ ಸಂಗಾತಿಯೊಂದಿಗೆ ಕಳೆಯುವ ಮುಂದಿನ ಜೀವನದ ಬಗ್ಗೆ ಭಯ ಕೂಡಾ ಆ ಹೆಣ್ಣು ಮಗಳನ್ನು ಆವರಿಸಿರುತ್ತದೆ. ಹುಟ್ಟಿ ಬೆಳೆದ ಮನೆ, ಮನೆ ಮಂದಿ, ಸ್ನೇಹಿತರು ಎಲ್ಲರನ್ನೂ ಬಿಟ್ಟು ತಾನು ಹೊರ ನಡೆಯುತ್ತಾಳೆ. ತಾನಿನ್ನು ಏನಿದ್ದರೂ ಈ ಮನೆಗೆ ಅತಿಥಿ ಎಂಬ ಭಾವ ಆ ಹೆಣ್ಣು ಮಗಳನ್ನು ಕಾಡದೇ ಇರದು. ಮದುವೆಯ ದಿನ ಬಂದರೆ ವಧು ಮಾತ್ರವಲ್ಲ ಆಕೆಯ ಕುಟುಂಬ ಕೂಡಾ ಸಾಮಾನ್ಯವಾಗಿ ಭಾವುಕರಾಗಿರುತ್ತಾರೆ. 

ಹಾಗೆಯೇ ಹೆಣ್ಣು ಮದುವೆ ಮನೆ ಪ್ರವೇಶಿಸುವಾಗ ತಾನು ಮುಂದಿನ ಬದುಕು ಯಾರೊಂದಿಗೆ ಕಳೆಯಬೇಕೋ ಆ ಜೀವ ಎದುರಿಗೆ ಬಂದಾಗಲೂ ಭಾವುಕವಾಗುವುದು ಸಾಮಾನ್ಯ. ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು  ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರ ಮಂಟಪದಲ್ಲಿ ಕುಳಿತಿರುವುದು ಕಂಡು ಬರುತ್ತದೆ. ತನ್ನ ಮನದನ್ನೆಯನ್ನು ನೋಡುವ ಕುತೂಹಲ ವರನ ಕಣ್ಣಿನಲ್ಲಿಯೂ ಎದ್ದು ಕಾಣುತ್ತದೆ. ವಧು ವೇದಿಕೆಗೆ ಬರುತ್ತಿದ್ದಂತೆಯೇ  ವರನನ್ನು ಕಂಡ ವಧು ಕಣ್ಣೀರಾಗುತ್ತಾಳೆ.

ಇದನ್ನೂ ಓದಿ : Viral Video: ಇಲ್ಲೊಬ್ಬ ವಿಚಿತ್ರ ಕಳ್ಳ-ಬಟ್ಟೆ, ರುಚಿ ರುಚಿಯಾದ ಆಹಾರವೇ ಇವನ ಟಾರ್ಗೆಟ್
 
ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆದ ವಿಡಿಯೋ : 
ವಧು ನಿಧಾನವಾಗಿ ತನ್ನ ಹೆಜ್ಜೆಗಳನ್ನು ಮುಂದಕ್ಕೆ ಇಡುತ್ತಾಳೆ. ವರ ಕೂಡಾ ತನ್ನ ಹುಡುಗಿ ತನ್ನತ್ತ ಬರುವುದನ್ನು ನೋಡಿ ಸಂಭ್ರಮಿಸುತ್ತಾನೆ.  ಈ ಸಮಯದಲ್ಲಿ ವರನನ್ನು ನೋಡಿ ಭಾವುಕಳಾದ ವಧುವಿನ ಕಣ್ಣಿನಲ್ಲಿ ನೀರು ಸುರಿಯುತ್ತದೆ. ಆದರೆ ಆ ಕಣ್ಣೀರಿನಲ್ಲಿ ಸಂತೋಷ, ಭಯ, ಕಾತುರ ಎಲ್ಲವೂ ಅಡಗಿದೆ.  ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವಧು ಮಾತ್ರ ಭಾವುಕಳಾಗಿಲ್ಲ. ವಧುವನ್ನು ನೋಡಿದ ವರನ ಕಣ್ಣಂಚಲ್ಲಿ ಕೂಡಾ ನೀರು ಜಿನುಗುತ್ತದೆ. 

 

ವಿಡಿಯೋದ ಕೊನೆಯಲ್ಲಿ ಕಂಡು ಬರುವ ದೃಶ್ಯ ಹೃದಯಸ್ಪರ್ಶಿಯಾಗಿದೆ. ವರ ವಧುವಿಗೆ ಮಂಗಳ ಸೂತ್ರ ತೊಡಿಸುವಾಗ ವಧು ಕೈ ಮುಗಿದು ತಲೆ ಬಾಗಿ ಕುಳಿತಿರುತ್ತಾಳೆ.  ಮದುವೆಯ ಈ ವಿಡಿಯೋ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. eternalweddingstmandragitha_m ಎಂಬ ಇನ್ಸ್ತಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. 

ಇದನ್ನೂ ಓದಿ : Viral Video: ‘ರಸಗುಲ್ಲಾ’ ತಿನ್ನದ ವಧುವಿನ ಕಪಾಳಕ್ಕೆ ಬಾರಿಸಿದ ವರ, ವೇದಿಕೆಯಲ್ಲೇ ಬಿಗ್ ಫೈಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News