ಮದುವೆ ಮಂಟಪದಲ್ಲಿ ವರನನ್ನು ಕಂಡು ಗಳ ಗಳನೆ ಕಣ್ಣೀರಿಟ್ಟ ವಧು ! ಇಲ್ಲಿದೆ ವಿಡಿಯೋ

Wedding viral video :ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು  ವೈರಲ್ ಆಗಿದೆ.   

Written by - Ranjitha R K | Last Updated : Oct 6, 2023, 05:43 PM IST
  • ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ
  • ಕಣ್ಣೀರಿಟ್ಟ ವಧುವಿನ ವಿಡಿಯೋ
  • ಹೃದಯಸ್ಪರ್ಶಿ ದೃಶ್ಯ ವೈರಲ್
 ಮದುವೆ ಮಂಟಪದಲ್ಲಿ ವರನನ್ನು ಕಂಡು ಗಳ ಗಳನೆ ಕಣ್ಣೀರಿಟ್ಟ ವಧು ! ಇಲ್ಲಿದೆ ವಿಡಿಯೋ  title=
photo- instagram

Wedding viral video : ಮದುವೆಯವರೆಗೂ ಹೆಣ್ಣು  ಒಂದು ರೀತಿಯ ಜೀವನ ನಡೆಸುತ್ತಿದ್ದರೆ ಮದುವೆಯ ನಂತರ ಆಕೆಯ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತದೆ. ಮದುವೆಯ ದಿನ ತನ್ನ ಹೊಸ ಜೀವನದ ಬಗ್ಗೆ ಹೆಣ್ಣು ಸಾವಿರಾರು ಕನಸುಗಳನ್ನು ಹೊತ್ತುಕೊಂಡು ಹೊರಡುತ್ತಾಳೆ. ಇಲ್ಲಿಯವರೆಗೆ ಈ ಮನೆಯಲ್ಲಿ ಮುದ್ದಿನ ಮಗಳಾಗಿ ಅಕ್ಕರೆಯ ಸಹೋದರಿಯಾಗಿ, ತುಂಟ  ಮೊಮ್ಮಗಳಾಗಿ ಕಳೆದ ದಿನಗಳನ್ನೇ ನೆನೆಯುತ್ತಾ ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಾಳೆ. ಹೀಗೆ ಹೊರಟ  ಹೆಣ್ಣಿನ ಕಣ್ಣ ಮುಂದೆ ತನ್ನ ಮುಂದಿನ ಜೀವನ ಹೇಗಿರುವುದೋ ಎನ್ನುವ  ಸಣ್ಣ ಭಯ ಆವರಿಸಿರುತ್ತದೆ. ಹುಟ್ಟಿ ಬೆಳೆದ ಮನೆ, ಮನೆ ಮಂದಿ, ಸ್ನೇಹಿತರು ಎಲ್ಲರನ್ನೂ ಬಿಟ್ಟು ತಾನು ಹೊರ ನಡೆಯುತ್ತಾಳೆ. ತಾನಿನ್ನು ಏನಿದ್ದರೂ ಈ ಮನೆಗೆ ಅತಿಥಿ ಎಂಬ ಭಾವ ಆ ಹೆಣ್ಣು ಮಗಳನ್ನು ಕಾಡದೇ ಇರದು.  

ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ :
ಇನ್ನು ಮದುವೆ ಮನೆ ಪ್ರವೇಶಿಸುತ್ತಿರುವಂತೆಯೇ ವಧುವಿನ ಕಣ್ಣು ಮೊದಲು ಹುಡುಕುವುದೇ ವರನನ್ನು. ತನ್ನವರನ್ನು ಹಿಂದೆ ಬಿಟ್ಟು ಹೋಗುವ ಹೆಣ್ಣು ತಾನು ಮುಂದಿನ ಬದುಕು ಯಾರೊಂದಿಗೆ ಕಳೆಯಬೇಕೋ ಆ ಜೀವ ಎದುರಿಗೆ ಬಂದಾಗಲೂ ಭಾವುಕವಾಗುವುದು ಸಾಮಾನ್ಯ. ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು  ವೈರಲ್ ಆಗಿದೆ. 

ಇದನ್ನೂ ಓದಿ : ಏಕಕಾಲಕ್ಕೆ ಹಲವು ಶಾಲಾ ವಿದ್ಯಾರ್ಥಿನಿಯರ ಮೇಲೆ ಪಾರ್ಶ್ವವಾಯು ದಾಳಿ, ವಿಡಿಯೋ ಬೆಚ್ಚಿಬೀಳಿಸುವಂತಿದೆ!

ಕಣ್ಣೀರಿಟ್ಟ ವಧುವಿನ ವಿಡಿಯೋ : 
ಈ ವಿಡಿಯೋದಲ್ಲಿ ವರ ಮಂಟಪದಲ್ಲಿ ಕುಳಿತಿರುವುದು ಕಂಡು ಬರುತ್ತದೆ. ತನ್ನ ಮನದರಸಿಯನ್ನು ನೋಡುವ ಕುತೂಹಲ ವರನ ಕಣ್ಣಿನಲ್ಲಿಯೂ ಎದ್ದು ಕಾಣುತ್ತದೆ. ವಧು ವೇದಿಕೆಗೆ ಬರುತ್ತಿದ್ದಂತೆಯೇ ವರನನ್ನು ಕಂಡು ಕಣ್ಣೀರಾಗುತ್ತಾಳೆ.  ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವಧು ಮಾತ್ರ ಭಾವುಕಳಾಗಿಲ್ಲ. ವಧುವನ್ನು ನೋಡಿದ ವರನ ಕಣ್ಣಂಚಲ್ಲಿ ಕೂಡಾ ನೀರು ಜಿನುಗುತ್ತದೆ. 

ವಧು ನಿಧಾನವಾಗಿ ತನ್ನ ಹೆಜ್ಜೆಗಳನ್ನು ಮುಂದಕ್ಕೆ ಇಡುತ್ತಾಳೆ. ವರ ಕೂಡಾ ತನ್ನ ಹುಡುಗಿ ತನ್ನತ್ತ ಬರುವುದನ್ನು ನೋಡಿ ಸಂಭ್ರಮಿಸುತ್ತಾನೆ. ಇಬ್ಬರ ಮುಖದಲ್ಲೂ ಸಂತೋಷ ಎದ್ದು ಕಾಣಿಸುತ್ತದೆ. 

 

ಇದನ್ನೂ ಓದಿ : ಸ್ಕೂಟಿ ಮೇಲಿಂದ ಬಿದ್ದ ಯುವತಿಯರ ಸಹಾಯಕ್ಕೆ ಧಾವಿಸಿದ ವ್ಯಕ್ತಿ, ನಂತರ ನಡೆದಿದ್ದು ನೋಡಿ ನೀವು ಹೊಟ್ಟೆ ಹಿಡಿದು ನಗುವಿರಿ!

ಹೃದಯಸ್ಪರ್ಶಿ ದೃಶ್ಯ :
ವಿಡಿಯೋದ ಕೊನೆಯಲ್ಲಿ ಕಂಡು ಬರುವ ದೃಶ್ಯ ಹೃದಯಸ್ಪರ್ಶಿಯಾಗಿದೆ. ವರ ವಧುವಿಗೆ ಮಂಗಳ ಸೂತ್ರ ತೊಡಿಸುವಾಗ ವಧು ಕೈ ಮುಗಿದು ತಲೆ ಬಾಗಿ ಕುಳಿತಿರುತ್ತಾಳೆ.  ಮದುವೆಯ ಈ ವಿಡಿಯೋ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿದೆ. eternalweddingstmandragitha_m ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News