ಇದು ಪ್ರೀತಿಯ ವಿಷ್ಯ : ಪ್ರೇಮಿಗಳ ವಿಡಿಯೋ ವೈರಲ್

ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ಬಾಯಿಯಲ್ಲೂ ಪ್ರೀತಿ ಪ್ರೇಮ ಇಂಥ ಮಾತುಗಳು ಕೇಳಲು ಸಿಗುತ್ತವೆ. ಕೆಲ ಮಕ್ಕಳಂತೂ ಪ್ರೀತಿ ಎಂದರೆ ಸಿನಿಮಾಗಳಲ್ಲಿ ತೋರಿಸುವಂತೆ ಕಲರ್ ಕಲರ್ ಆಗಿರುತ್ತದೆ ಎಂದೇ ಭಾವಿಸುತ್ತಾರೆ. ಹದಿ ಹರೆಯದ ಹುಚ್ಚು ಮನಸ್ಸಿಗೆ ಎಲ್ಲವೂ ಹೀಗೆ ಕಾಣುವುದು.  

Written by - Ranjitha R K | Last Updated : Aug 2, 2022, 12:25 PM IST
  • ಪ್ರೀತಿ ಅನ್ನೋದನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡುತ್ತಾರೆ.
  • ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವವರೂ ಇದ್ದಾರೆ.
  • ಕೆಲವರಿಗೆ ಪ್ರೀತಿ ಉಸಿರು, ಇನ್ನು ಕೆಲವರಿಗೆ ಬರೀ ಟೈಮ್ ಪಾಸ್ .
ಇದು ಪ್ರೀತಿಯ ವಿಷ್ಯ  : ಪ್ರೇಮಿಗಳ ವಿಡಿಯೋ ವೈರಲ್  title=
Viral video (photo instagram)

Lovers video viral: ಪ್ರೀತಿ ಅನ್ನೋದನ್ನ ಒಬ್ಬೊಬ್ಬರು ಒಂದೊಂದು  ರೀತಿಯಲ್ಲಿ   ನೋಡುತ್ತಾರೆ. ಕೆಲವರಿಗೆ ಪ್ರೀತಿ ಜೀವನವಾದರೆ , ಇನ್ನು ಕೆಲವರಿಗೆ ಪ್ರೀತಿ ಅನ್ನುವುದು ಬರೀ ಮಾಯೆ. ಇನ್ನು ಕೆಲವರ ಪಾಲಿಗೆ ಇವತ್ತಿದ್ದ ಪ್ರೀತಿ ನಾಳೆ ಇಲ್ಲ. ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವವರೂ ಇದ್ದಾರೆ. ಇತ್ತೀಚೆಗಂತೂ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ ಪ್ರೇಮಿಗಳ ದರ್ಶನವಾಗಿ ಬಿಡುತ್ತದೆ. 

ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ಬಾಯಿಯಲ್ಲೂ ಪ್ರೀತಿ ಪ್ರೇಮ ಇಂಥ ಮಾತುಗಳು ಕೇಳಲು ಸಿಗುತ್ತವೆ. ಹದಿ ಹರೆಯದ ಪ್ರೀತಿಯ ಬಗ್ಗೆ ಅದೆಷ್ಟೋ ಸಿನಿಮಾಗಳನ್ನು ಕೂಡಾ ನಾವು ನೋಡಿದ್ದೇವೆ. ಕೆಲ ಮಕ್ಕಳಂತೂ ಪ್ರೀತಿ ಎಂದರೆ ಸಿನಿಮಾಗಳಲ್ಲಿ ತೋರಿಸುವಂತೆ ಕಲರ್ ಕಲರ್ ಆಗಿರುತ್ತದೆ ಎಂದೇ ಭಾವಿಸುತ್ತಾರೆ. ಹದಿ ಹರೆಯದ ಹುಚ್ಚು ಮನಸ್ಸಿಗೆ ಎಲ್ಲವೂ ಹೀಗೆ ಕಾಣುವುದು. 

ಇದನ್ನೂ ಓದಿ :  Viral Video - 66 ವರ್ಷಗಳ ಹಿಂದೆ ಫ್ರಿಡ್ಜ್ ಹೇಗಿತ್ತು ಗೊತ್ತಾ...? ಭಾರಿ ವೈರಲ್ ಆಗುತ್ತಿದೆ 1956ನೇ ಸಾಲಿನ ಈ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಹದಿ ಹರೆಯದ ಪ್ರೇಮಿಗಳ ವಿಡಿಯೋವೊಂದು ವೈರಲ್ ಆಗುತ್ತಿದೆ.  ಇಲ್ಲಿ ತನ್ನ ಪ್ರಿಯತಮೆಗಾಗಿ ಕಾಯುತ್ತಾ ನಿಂತಿರುವ ಹುಡುಗನನ್ನು ಕಾಣಬಹುದು. ತನ್ನ ಹುಡುಗಿಗಾಗಿ ಅದೆಷ್ಟು ಹೊತ್ತಿನಿಂದ ಕಾಯುತ್ತಿದ್ದನೋ ಗೊತ್ತಿಲ್ಲ. ಬೆವರಿಳಿದು ಹೋಗಿದ್ದಾನೆ ಎನ್ನುವುದು ಮಾತ್ರ ಕಾಣಿಸುತ್ತದೆ. ಹುಡುಗಿ ಬರುತ್ತಿದ್ದಂತೆ ತನ್ನ ಹುಡುಗನ ಮುಖದಲ್ಲಿ ಬೆವರು ಹರಿಯುತ್ತಿರುವುದನ್ನು ಗಮನಿಸುತ್ತಾಳೆ. ತಕ್ಷಣ  ಕರ್ಚೀಫ್  ತೆಗೆದುಕೊಂಡು ತನ್ನ ಪ್ರೇಮಿಯ ಹಣೆಯ ಬೆವರನ್ನು ಒರೆಸಲು ಪ್ರಾರಂಭಿಸುತ್ತಾಳೆ. 

 

ತನ್ನ ಗೆಳತಿ ತಡವಾಗಿ ಬಂದಿದ್ದಾಳೆ ಅನ್ನುವ ಕೋಪಕ್ಕೋ ಏನೋ ಮೊದಲು ಹುಡುಗ ಕೂಡಾ ಹುಡುಗಿಯನ್ನು ತಡೆಯುತ್ತಾನೆ. ಆದರೆ ಹುಡುಗಿ ಕೇಳಬೇಕಲ್ಲ. ಮತ್ತೆ ಮತ್ತೆ ತನ್ನ ಪ್ರೇಮಿಯ ಮುಖದ ಬೆವರು ಒರೆಸುತ್ತಾಳೆ. ದಾರಿಹೋಕರೊಬ್ಬರು ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. 

ಇದನ್ನೂ ಓದಿ :  Viral Video: ಮೃಗಾಲಯಕ್ಕೆ ಬಂದ ಜನರಿಗೆ ತನ್ನ ಮಗು ತೋರಿಸಿದ ಗೊರಿಲ್ಲಾ!

ಈ ವೀಡಿಯೊ ನೋಡಿದವರು ಕೂಡಾ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಬೇರೆಯವರ ವೈಯಕ್ತಿಕ ಬದುಕದು ನಮಗ್ಯಾಕೆ ಎಂದು ಪ್ರಶ್ನಿಸಿದರೆ ಇನ್ನು ಕೆಲವರು ಮುದ್ದಾದ ಜೋಡಿಗೆ ಹರಸಿದ್ದಾರೆ.  ಇನ್ನು ಕೆಲವು ಪಡ್ಡೆಗಳಂತೂ ನಮಗೆ ಇಂಥ ಗೆಳತಿ ಯಾಕಿಲ್ಲ ಎಂದು ಹೊಟ್ಟೆ ಉರಿದುಕೊಂಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News