Shocking Viral Video: ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ಸ್ಫೋಟಗೊಂಡು ಅನಾಹುತಗಳು ಸಂಭವಿಸುತ್ತಿರುವ ಬಗ್ಗೆ ನೀವು ಕೇಳಿಯೇ ಇರ್ತಿರಿ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದಂತೆ ಆಗಾಗ ಅವುಗಳ ಬ್ಯಾಟರಿ ಸ್ಫೋಟ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಮತ್ತೊಂದು ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
28 ವರ್ಷದ ಯುವಕನೊಬ್ಬ ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಅದು ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡಿದೆ. ಪರಿಣಾಮ ಆತ ಕ್ಷಣಾರ್ಥದಲ್ಲಿ ಸುಟ್ಟು ಕರಕಲಾಗಿದ್ದಾನೆ. ಈ ಭಯಾನಕ ದೃಶ್ಯವು ಲಿಫ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
The lithium battery suddenly caught fire in the elevator and the man was reduced to ashes.
Electric scooters have also lithium batteries. One has to be very careful using them in closed spaces. pic.twitter.com/2SrMJqohpX— Vuslat Bayoglu (@VuslatBayoglu) July 25, 2024
ಇದನ್ನೂ ಓದಿ: ವಿಶ್ವದ 5 ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಯುವಕನೊಬ್ಬ ಲಿಫ್ಟಿನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗಲೇ ಅದು ಸ್ಪೋಟಗೊಂಡಿದೆ. ಇದರ ಪರಿಣಾಮ ಆತ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಈ ದೃಶ್ಯಾವಳಿ ಲಿಫ್ಟ್ ನಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಂದಹಾಗೆ ಈ ಘಟನೆ ಚೀನಾದ ಬಂದರು ನಗರ ಗುವಾಂಗ್‌ಝೌನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಕೈಯಲ್ಲಿ ಲಿಥಿಯಂ ಬ್ಯಾಟರಿ ಹಿಡಿದು ಲಿಫ್ಟ್‌ನೊಳಗೆ ಪ್ರವೇಶಿಸಿದ್ದಾನೆ. ಬಳಿಕ ಲಿಫ್ಟ್ ಕ್ಲೋಸ್ ಮಾಡಲು ಆತ ಬಟನ್ ಒತ್ತುತ್ತಿದ್ದಂತೆಯೇ ಬ್ಯಾಟರಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಗಾಳಿಯ ಸಂಚಾರ ಬಂದ್ ಆದ ಕಾರಣ ಒತ್ತಡದಿಂದ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಸ್ಫೋಟದ ದೃಶ್ಯವು ನೋಡುಗರಿಗೆ ಆಘಾತ ಮೂಡಿಸಿದೆ.
ಇದನ್ನೂ ಓದಿ: ಈ 5 ದೇಶಗಳ ಜನರು ಮಾತ್ರ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ..!
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಲಿಥಿಯಂ ಬ್ಯಾಟರಿ ಬಳಕೆ ಮಾಡುತ್ತಿದ್ದು, ಅದರ ಸುರಕ್ಷತೆ ಕುರಿತು ಈಗ ಬಹುದೊಡ್ಡ ಆತಂಕವನ್ನುಂಟು ಮಾಡಿದೆ. @VuslatBayoglu ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಶಾಕ್ ಆಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.