ಕನ್ನಡ್‌ ಗೊತ್ತಿಲ್‌.. ಎನ್ನುವವರಿಗೆ ಬೆಂಗಳೂರು ಬಂದ್... ಕನ್ನಡ ಕಲಿಯಲು ಬಾರದಿದ್ದರೆ ಬರಬೇಡಿ..! ವೈರಲ್ ಪೋಸ್ಟ್

Viral Post : ಕನ್ನಡ ಕಲಿಯಲು ಇಷ್ಟಪಡದ ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳ ಜನರಿಗೆ ಬೆಂಗಳೂರು ಮುಚ್ಚಲಾಗಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.. ಅಲ್ಲದೆ, ಇದಕ್ಕೆ ಹಲವಾರು ಪರ ಭಾಷಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jan 25, 2025, 02:58 PM IST
    • ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳ ಜನರಿಗೆ ಬೆಂಗಳೂರು ಮುಚ್ಚಲಾಗಿದೆ
    • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ ಪೋಸ್ಟ್‌
    • ಮಹಾನಗರ ಪರಿಸರದಲ್ಲಿ ತಪ್ಪು ಎಂದು ವಿಮರ್ಶಕರು ವಾದಿಸುತ್ತಾರೆ.
ಕನ್ನಡ್‌ ಗೊತ್ತಿಲ್‌.. ಎನ್ನುವವರಿಗೆ ಬೆಂಗಳೂರು ಬಂದ್... ಕನ್ನಡ ಕಲಿಯಲು ಬಾರದಿದ್ದರೆ ಬರಬೇಡಿ..! ವೈರಲ್ ಪೋಸ್ಟ್  title=

Kannada language mandatory : ಇತ್ತೀಚಿನ ದಿನಗಳಲ್ಲಿ, ಕನ್ನಡ ಭಾಷಾ ವಿವಾದವು ಕರ್ನಾಟಕದಲ್ಲಿ, ವಿಶೇಷವಾಗಿ ಬಹುಸಂಸ್ಕೃತಿಯ ಜನಸಂಖ್ಯೆಗೆ ಹೆಸರುವಾಸಿಯಾದ ಬೆಂಗಳೂರಿನಲ್ಲಿ ಪ್ರಮುಖ ಚರ್ಚೆಗಳನ್ನು ಹುಟ್ಟುಹಾಕಿದೆ. ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಪ್ರತಿಪಾದಿಸುವ ಹೊರಗಿನವರು ಅಲ್ಲಿನ ಭಾಷೆಯನ್ನು ಕಲಿಯಬೇಕೆಂದು ಕೆಲವು ಸ್ಥಳೀಯರು ಸೂಚಿಸಿದರೆ, ಅಂತಹ ಬೇಡಿಕೆಗಳು ಮಹಾನಗರ ಪರಿಸರದಲ್ಲಿ ತಪ್ಪು ಎಂದು ಕೆಲ ವಿಮರ್ಶಕರು ವಾದಿಸುತ್ತಾರೆ. 

ಇದೀಗ "ಕನ್ನಡ ಕಲಿಯಲು ಬಾರದ ಉತ್ತರ ಭಾರತ ಹಾಗೂ ನೆರೆಯ ರಾಜ್ಯಗಳಿಗೆ ಬೆಂಗಳೂರು ಬಂದ್" ಎಂಬ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ ವಿವಾದವನ್ನು ಹುಟ್ಟು ಹಾಕಿದೆ. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸದ ಜನರು ಬೆಂಗಳೂರನ್ನು ತಪ್ಪಿಸಬೇಕು ಎಂಬುವುದು ಪೋಸ್ಟ್‌ನಲ್ಲಿ ಬಳಕೆದಾರರು ಸೂಚಿಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್!!

ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ “ಕನ್ನಡ ಕಲಿಯಲು ಇಷ್ಟಪಡದ ಉತ್ತರ ಭಾರತ ಮತ್ತು ನೆರೆಯ ರಾಜ್ಯಗಳ ಜನರಿಗೆ ಬೆಂಗಳೂರು ಮುಚ್ಚಲಾಗಿದೆ. ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಲು ಸಾಧ್ಯವಾಗದಿದ್ದಾಗ ಅವರಿಗೆ ಬೆಂಗಳೂರು ಅಗತ್ಯವಿಲ್ಲ.. ಎಂದು ಬರೆಯಲಾಗಿದೆ.

ಈ ಪೋಸ್ಟ್ ಶೇರ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಸಾವಿರಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಕೆಲವು ಬಳಕೆದಾರರು ಈ ಪೋಸ್ಟರ್‌ನ ಭಾವನೆಗಳನ್ನು ಒಪ್ಪಿಕೊಂಡರೆ, ಇತರರು ಸ್ಥಳೀಯ ಭಾಷೆಯನ್ನು ಗೌರವಿಸುವುದು ಮುಖ್ಯ ಆದರೆ, ಕಲಿಯುವುದು ಅವರವರ ವೈಯಕ್ತಿಕ ಆಯ್ಕೆ, ಕಲಿಯುವಂತೆ ವ್ಯಕ್ತಿಯ ಮೇಲೆ ಬಲವಂತವಾಗಿ ಹೇರುವುದು ಸರಿಯಲ್ಲ ವಾದಿಸುತ್ತಿದ್ದಾರೆ..

ಇದನ್ನೂ ಓದಿ:ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜಟಾಪಟಿ ವಿಚಾರ: ಬಿಜೆಪಿ ನಾಯಕರು ಹೇಳಿದ್ದೇನು?

ಒಟ್ಟಿನಲ್ಲಿ ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ ಅತಿಥಿಯಾಗಿ ಈ ನಾಡಿಗೆ ಬಂದವರು ಇಲ್ಲಿನ ಭಾಷೆ ಮತ್ತು ಸಂಪ್ರದಾಯಗಳಿಗೆ ಗೌರವ ನೀಡುವುದು ಅವರ ಜವಾಬ್ದಾರಿಯಾಗಿದೆ.. ಹುಟ್ಟಿನಿಂದಲೂ ಇಲ್ಲೇ ಇರುವ ಪರಭಾಷಿಗರು ಇಂದಿಗೂ ಕನ್ನಡ ಕಲಿತಿಲ್ಲ, ವರ್ಷಗಟ್ಟಲೇ ಉದ್ಯೋಗ ಮಾಡುವವರಂತೂ ಕನ್ನಡದ ಬಗ್ಗೆ ಗೌರವ ನೀಡುತ್ತಿಲ್ಲ.. ಅಂತಹವರಿಗೆ ಈ ಪೋಸ್ಟ್‌ ಉತ್ತಮ ಎನ್ನಬಹುದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News