ಪಾರ್ಕ್‌ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್‌ ಬರ್ಡ್ಸ್‌..! ವಿಡಿಯೋ ವೈರಲ್..

Delhi metro lover viral video : ಹೆಚ್ಚಾಗಿ ಪಾರ್ಕ್‌ಗಳಲ್ಲಿ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರೇಮಿಗಳು ಇದೀಗ ಎಲ್ಲೆ ಮೀರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ತುಂಟಾಟ ಶುರುಮಾಡಿಕೊಂಡಿದ್ದಾರೆ. ಇನ್ನು ದಿನದಿಂದ ದಿನಕ್ಕೆ ದೆಹಲಿ ಮೆಟ್ರೋಗೆ ಸಂಬಂಧಿಸಿದ ಅನೇಕ ವೀಡಿಯೊಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ.

Written by - Krishna N K | Last Updated : Jul 26, 2023, 08:19 PM IST
  • ಪಾರ್ಕ್‌ಗಳಲ್ಲಿ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರೇಮಿಗಳು ಇದೀಗ ಎಲ್ಲೆ ಮೀರಿದ್ದಾರೆ.
  • ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಹದ್ದು ಮೀರಿ ಅಸಭ್ಯವಾಗಿ ವರ್ತನೆ ತೋರುತ್ತಿದ್ದಾರೆ.
  • ಇದೀಗೆ ದೆಹಲಿ ಮೆಟ್ರೋದಲ್ಲಿ ಇತರೆ ಪ್ರಯಾಣಿಕರ ಎದುರೇ ಕಮಲ್ಸ್‌ ಅಪ್ಪಿ ಮುದ್ದಾಡಿದ್ದಾರೆ.
ಪಾರ್ಕ್‌ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್‌ ಬರ್ಡ್ಸ್‌..! ವಿಡಿಯೋ ವೈರಲ್.. title=

Delhi metro viral videos : ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಮೆಟ್ರೋಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಮೆಟ್ರೋದಲ್ಲಿ ಪ್ರಯಾಣಿಸುವವರೆಲ್ಲರಿಗೂ ಛೀ ಛೀ ಅನ್ನಿಸುವಂತೆ ಕೆಲ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇವುಗಳಿಗೆ ಸಂಬಂಧಿಸಿದ ವಿಡಿಯೊಗಳು ನೆಟ್‌ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ಪ್ರೇಮಿಗಳ ಅಶ್ಲೀಲ ಕೃತ್ಯ ದೆಹಲಿ ಮೆಟ್ರೋಗೆ ಮತ್ತೊಮ್ಮೆ ಕಳಂಕ ತಂದಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.

ಮೊನ್ನೆಯಷ್ಟೇ ವೈರಲ್ ಆಗಿದ್ದ ವೀಡಿಯೋ ರೀತಿಯಲ್ಲಿಯೇ ಇದೀಗ ನೆಟ್‌ನಲ್ಲಿ ಪ್ರೇಮಿಗಳು ಮೈಮರೆತು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೋ ವಿವರಕ್ಕೆ ಹೋಗುವುದಾದರೆ.. ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ಇದೇ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಮೆಟ್ರೋದಲ್ಲಿ ಸಹ ಪ್ರಯಾಣಿಕರಿದ್ದರೂ ಸಹ ಅದನ್ನು ಗಮನಿಸದೆ ದಂಪತಿಗಳು ಪ್ರಣಯದಲ್ಲಿ ತೊಡಗಿದ್ದರು. ಆದರೆ ಸಹ ಪ್ರಯಾಣಿಕರು ಈ ಅಸಭ್ಯ ಕೃತ್ಯಗಳನ್ನು ನೋಡಲಾಗದೆ ಆ ಸ್ಥಳದಿಂದ ಬೆರೆಡೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಂಸದ ಸಿದ್ದೇಶ್ವರ ಅವರಿಗೆ ವಿಡಿಯೋ ಕಾಲ್ ಮಾಡಿ ಮಹಿಳೆಯಿಂದ ಅಶ್ಲೀಲ ವರ್ತನೆ, ದೂರು ದಾಖಲು

ಇನ್ನು ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋಗಳಿಗೆ ದೆಹಲಿ ಮೆಟ್ರೋ ರೈಲು ನಿಗಮ ಪ್ರತಿಕ್ರಿಯಿಸುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದವರು ಡಿಎಂಆರ್‌ಸಿಯನ್ನು ಟ್ಯಾಗ್ ಮಾಡಿದ್ದರಿಂದ ಅಧಿಕಾರಿಗಳು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೆಟ್ರೋದಲ್ಲಿ ರೋಮ್ಯಾನ್ಸ್ ಮಾಡುವಂತಹ ಅಸಭ್ಯ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇನ್ನು ಮುಂದೆ ದೆಹಲಿ ಮೆಟ್ರೋಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಧ್ಯ ಸಾಮಾಜಿಕ ಕಾರ್ಯಕರ್ತ ಬರ್ಖಾ ಟ್ರೆಹಾನ್ ಅವರು ಡಿಎಂಆರ್‌ಸಿಯನ್ನು ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಶ್ಲೀಲ ಕೃತ್ಯಗಳಿಂದ ಇತರ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.. ಇದಕ್ಕೆ ಅಧಿಕಾರಿಗಳು ಖಂಡಿತ ಸ್ಪಂದಿಸಬೇಕು ಎಂದು ಶೀರ್ಷಿಕೆ ಬರೆದುಕೊಂಡು ಒತ್ತಾಯಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News