ಮದುವೆಯಾದ 2 ತಿಂಗಳಲ್ಲೇ ಅಂಬಾನಿ ಸೊಸೆ ರಾಧಿಕಾ ಗರ್ಭಿಣಿ..!? ವಿಡಿಯೋ ವೈರಲ್‌

Radhika Merchant pregnant : ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಸೊಸೆ.. ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಒಂದು ವಿಡಿಯೋ ಸಹ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..

Written by - Krishna N K | Last Updated : Sep 12, 2024, 10:19 PM IST
    • ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌
    • ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
    • ಸದ್ಯ ಈ ಕುರಿತ ವಿಡಿಯೋ ಒಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ..
ಮದುವೆಯಾದ 2 ತಿಂಗಳಲ್ಲೇ ಅಂಬಾನಿ ಸೊಸೆ ರಾಧಿಕಾ ಗರ್ಭಿಣಿ..!? ವಿಡಿಯೋ ವೈರಲ್‌ title=

Anant Ambani's wife Radhika : ಬಿಲಿಯನೇರ್, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅನಂತ್ ಅವರ ವಿವಾಹವನ್ನು ಅದ್ಧೂರಿಯಾಗಿ ನಡೆಸಿಕೊಟ್ಟರು. ಜುಲೈ 12 ರಂದು ಮುಂಬೈನ ಜಿಯೋ ಕನ್ವೇನ್ಷನ್‌ ಹಾಲ್‌ನಲ್ಲಿ ಅನಂತ್ ರಾಧಿಕಾ ಮರ್ಚೆಂಟ್ ವಿವಾಹ ನೆರವೇರಿತು. ಈ ಮದುವೆಗೆ ಸಮಾಜದ ಬಹುತೇಕ ಗಣ್ಯರು, ನಟ-ನಟಿಯರು, ನಮ್ಮ ದೇಶವಷ್ಟೇ ಅಲ್ಲ, ವಿದೇಶಗಳಿಂದಲೂ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. 

ಇದೇ ವೇಳೆ ಮುಖೇಶ್ ಅಂಬಾನಿ ಕುಟುಂಬ ಅಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ಗಣೇಶ್ ಆಚರಣೆ ನಡೆಸಿತು. ವಿನಾಯಕ ಚತುರ್ಥಿಗೆ ಬಾಲಿವುಡ್‌ನ ಹಲವು ಮಂದಿ ಆಗಮಿಸಿದ್ದರು. ಈ ಮಧ್ಯ ಅನಂತ್ ಪತ್ನಿ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಈ ಒಂದು ಘಟನೆ ಸಾಕು ಅನುಷ್ಕಾ ಕೊಹ್ಲಿ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಅನ್ನೋದಕ್ಕೆ..! ಗ್ರೇಟ್‌ ಅತ್ತಿಗೆ..

ಅನಂತ್ ಅಂಬಾನಿಯನ್ನು ಮದುವೆಯಾದ ನಂತರ ರಾಧಿಕಾ ಮರ್ಚೆಂಟ್‌ಗೆ ಇದು ಮೊದಲ ವಿನಾಯಕ ಚತುರ್ಥಿ. ಇಡೀ ಕುಟುಂಬ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಈ ವೇಳೆ ತೆಗೆದ ವಿಡಿಯೋ ಒಂದರಲ್ಲಿ ರಾಧಿಕಾ ಮರ್ಚಂಟ್ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟು ಹೀಲ್ಸ್ ಬದಲಿಗೆ ದಪ್ಪನೆಯ ಶೂ ಧರಿಸಿದ್ದು ಕಂಡು ಬಂತು.. 

 
 
 
 

 
 
 
 
 
 
 
 
 
 
 

A post shared by Voompla (@voompla)

ಮೇಲಾಗಿ.. ಈ ವಿಡಿಯೋದಲ್ಲಿ ನೀತಾ ಅಂಬಾನಿ ತನ್ನ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಬೀಳದಂತೆ ಕೈ ಹಿಡಿದಿದ್ದಾರೆ... ಇದನ್ನು ನೋಡಿದವರೆಲ್ಲಾ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂದು ಫಿಕ್ಸ್ ಆಗಿದ್ದಾರೆ. ಇನ್ನೇನು.. ಎಲ್ಲರೂ ಅಂಬಾನಿ ಕುಟುಂಬಕ್ಕೆ ಶುಭ ಹಾರೈಕೆ ಮಾಡುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News