ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ- ಇಲ್ಲಿದೆ ಅದ್ಭುತ ವಿಡಿಯೋ

ಆನೆ ವೈರಲ್ ವಿಡಿಯೋ:  ಮನುಷ್ಯರು ಕಷ್ಟದಲ್ಲಿದ್ದಾಗ ಸಾಕು ಪ್ರಾಣಿಗಳು ಅವರ ಜೀವ ಉಳಿಸಿರುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ಕಾಡು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಯನ್ನು ಬಚಾವ್ ಮಾಡಿರುವುದನ್ನು ನೋಡಿದ್ದೀರಾ... 

Written by - Yashaswini V | Last Updated : Jul 8, 2022, 10:47 AM IST
  • ಕಾಡು ಪ್ರಾಣಿಗಳು ಬಾವಿಗೆ ಬಿದ್ದ ಅಥವಾ ದೊಡ್ಡ ಹೊಂಡಕ್ಕೆ ಬಿದ್ದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗಿರುವುದನ್ನು ನೀವು ನೋಡಿರಬಹುದು
  • ಆದರೆ, ಮನುಷ್ಯನ ಜೀವಕ್ಕೆ ಅಪಾಯ ಎದುರಾದಾಗ ಪ್ರಾಣಿಯೊಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿರುವುದನ್ನು ನೋಡಿದ್ದೀರಾ...
  • ಇಲ್ಲಿದೆ ಅಂತಹ ಒಂದು ಅದ್ಭುತ ವಿಡಿಯೋ...
ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ- ಇಲ್ಲಿದೆ ಅದ್ಭುತ ವಿಡಿಯೋ  title=
Elephant saves man life

ಮನುಷ್ಯನ ಜೀವ ಉಳಿಸಿದ ಆನೆ ವಿಡಿಯೋ:  ಯಾರಾದರೂ ಕಷ್ಟದಲ್ಲಿದ್ದಾಗ ದೇವರು ಯಾವುದಾದರೂ ಒಂದು ರೂಪದಲ್ಲಿ ಬಂದು ಕಾಪಾಡುತ್ತಾನೆ ಎಂಬುದು ನಂಬಿಕೆ. ಸಂಕಷ್ಟದಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಸಹ ಸಹಾಯಕ್ಕೆ ಬರುತ್ತವೆ. ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಬಟ್ಟೆ ಸದ್ದು ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಪುಟ್ಟ ಆನೆಯೊಂದು ರಕ್ಷಿಸಿದೆ. 

ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಕಾಪಾಡಲು ಪುಟ್ಟ ಆನೆಯೊಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಆನೆಗಳ ಹಿಂಡು ನದಿ ದಡದಲ್ಲಿ ಇರುವುದನ್ನು ಕಾಣಬಹುದು.

ಇದನ್ನೂ ಓದಿ- Viral News: ಮೊಸಳೆಯನ್ನೇ ವಿವಾಹವಾದ ಮೆಕ್ಸಿಕನ್ ಮೇಯರ್..!

ವೈರಲ್ ವಿಡಿಯೋದಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿರುವುದನ್ನೂ ಕಾಣಬಹುದು. ಇದನ್ನು ಗಮನಿಸಿದ ಪುಟ್ಟ ಆನೆಯೊಂದು ತನ್ನ ಪ್ರಾಣವನ್ನೂ ಲೆಕ್ಕಿಸದ ಆ ವ್ಯಕ್ತಿಯನ್ನು ರಕ್ಷಿಸಲು ನದಿಗೆ ಇಳಿದಿರುವ ದೃಶ್ಯ ಎಂತಹವರಿಗೂ ಮನ ಮುಟ್ಟುತ್ತದೆ. ಈ ಪುಟ್ಟ ಆನೆಯು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ತನ್ನ ಸೊಂಡಿಲಿನಿಂದ ಹಿಡಿದು ದಡಕ್ಕೆ ಎಳೆಯುತ್ತದೆ.

ಈ ಅಚ್ಚರಿಯ ವಿಡಿಯೋವನ್ನು ಇಲ್ಲಿ ನೋಡಿ...

ಇದನ್ನೂ ಓದಿ- Trending: ರಭಸವಾಗಿ ಹರಿಯುತ್ತಿರುವ ನದಿಗೆ ಧುಮುಕಿದ 70ರ ಅಜ್ಜಿ, ವಿಡಿಯೋ ನೋಡಿ

ಈ ವೀಡಿಯೊವನ್ನು @BenGoldsmith ಅವರು ಹಂಚಿಕೊಂಡಿದ್ದಾರೆ ಮತ್ತು ಇದುವರೆಗೆ 73 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, 9 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಎರಡೂವರೆ ಸಾವಿರಕ್ಕೂ ಹೆಚ್ಚು ಬಾರಿ ಇದನ್ನು ರೀಟ್ವೀಟ್‌ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News