Viral News: ಈ ನಟಿಗೆ ಹೆಂಡತಿಯಾಗಲು ತಿಂಗಳಿಗೆ 25 ಲಕ್ಷ ಸಂಬಳದ ಆಫರ್ ನೀಡಿದ್ದ ಉದ್ಯಮಿ..!

ಆಡಿಷನ್ ಬಗ್ಗೆಯೂ ಮಾತನಾಡಿರುವ ನೀತು ಚಂದ್ರ ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರು ಕೇವಲ ಒಂದೇ ಗಂಟೆಯೊಳಗೆ ತಮ್ಮನ್ನು ತಿರಸ್ಕರಿಸಿದ ಕಹಿಘಟನೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

Written by - Puttaraj K Alur | Last Updated : Jul 14, 2022, 02:47 PM IST
  • ಬಾಲಿವುಡ್ ನಟಿಗೆ ಹೆಂಡತಿಯಾಗಿ 25 ಲಕ್ಷ ರೂ. ಸಂಬಳದ ಆಫರ್ ನೀಡಿದ್ದ ಉದ್ಯಮಿ
  • ಚಿತ್ರರಂಗದಲ್ಲಿನ ಕಹಿಘಟನೆಗಳನ್ನು ಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ ನೀತು ಚಂದ್ರ
  • ಕಾಸ್ಟಿಂಗ್ ಕೌಚ್ & ಕೆಲಸವಿಲ್ಲದೆ ಪರದಾಡಿದ ಬಗ್ಗೆಯೂ ಮಾತನಾಡಿರುವ ನಟಿ
Viral News: ಈ ನಟಿಗೆ ಹೆಂಡತಿಯಾಗಲು ತಿಂಗಳಿಗೆ 25 ಲಕ್ಷ ಸಂಬಳದ ಆಫರ್ ನೀಡಿದ್ದ ಉದ್ಯಮಿ..! title=
ಕಹಿ ಘಟನೆ ಹಂಚಿಕೊಂಡ ಬಾಲಿವುಡ್ ನಟಿ ನೀತು ಚಂದ್ರ

ನವದೆಹಲಿ: ಸಾಮಾನ್ಯವಾಗಿ ನಟಿಯರು ಸ್ವಲ್ಪ ಸಮಯ ಚಿತ್ರರಂಗದಲ್ಲಿದ್ದು ಬಳಿಕ ಮದುವೆಯಾಗಿ ಸಂಸಾರದ ಭಾಗವಾಗುತ್ತಾರೆ. ಆದರೆ, ಮದುವೆಗಿಂತಲೂ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕೆಲವು ಸುಂದರಿಯರಿದ್ದಾರೆ. ಈ ಪೈಕಿ ನಟಿ ನೀತು ಚಂದ್ರ ಒಬ್ಬರು. ಈ ನಟಿಗೆ ಮದುವೆಯಾಗುವ ಅವಕಾಶ ಸಿಕ್ಕಿದೆ, ಅದಕ್ಕೆ ಪ್ರತಿಯಾಗಿ ಸಿಕ್ಕ ಆಫರ್ ಗೊತ್ತಾದ್ರೆ ನೀವು ಬೆಚ್ಚಿ ಬೀಳುತ್ತೀರಿ.

ಹೌದು, ಉದ್ಯಮಿಯೊಬ್ಬರು ನೀತು ಚಂದ್ರ ಅವರಿಗೆ ಪತ್ನಿಯಾಗಲು ಆಫರ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಭಾರೀ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುದ್ದಿ ಮುನ್ನೆಲೆಗೆ ಬಂದ ನಂತರ ಜನರೇ ಶಾಕ್ ಆಗಿದ್ದಾರೆ. ತನ್ನನ್ನು ಮದುವೆಯಾಗಲು ಉದ್ಯಮಿ ನಟಿಗೆ ಈ ರೀತಿ ಆಫರ್ ನೀಡಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡಾ.ಪುನೀತ್ ರಾಜಕುಮಾರ್ ಗೆ ಟ್ವಿಟ್ಟರ್ ನಿಂದ ಅವಮಾನ, ರೊಚ್ಚಿಗೆದ್ದ ಕನ್ನಡಿಗರು

ಹೆಂಡತಿಯಾಗಲು 25 ಲಕ್ಷ ರೂ. ಸಂಬಳದ ಆಫರ್!

ಬಾಲಿವುಡ್ ನಟಿ ನೀತು ಚಂದ್ರು ಇತ್ತೀಚೆಗೆ ಉದ್ಯಮಿಯೊಬ್ಬರು ತಮಗೆ ಸಂಬಳದ ಹೆಂಡತಿಯಾಗಲು ಕೇಳಿಕೊಂಡಿರುವ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಆ ಉದ್ಯಮಿ ಹೆಂಡತಿಯಾದರೆ ಪ್ರತಿಯಾಗಿ ತಮಗೆ ತಿಂಗಳಿಗೆ 25 ಲಕ್ಷ ರೂ. ನೀಡುತ್ತೇನೆಂದು ಹೇಳಿದ್ದರು. ಆದರೆ, ಈ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೇನೆಂದು ನೀತು ಹೇಳಿದ್ದಾರೆ. ಇದಲ್ಲದೆ ಆಡಿಷನ್ ಬಗ್ಗೆಯೂ ಮಾತನಾಡಿರುವ ನೀತು ಚಂದ್ರ ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರು ಕೇವಲ ಒಂದೇ ಗಂಟೆಯೊಳಗೆ ತಮ್ಮನ್ನು ತಿರಸ್ಕರಿಸಿದ ಕಹಿಘಟನೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ನೀತು ಚಂದ್ರ ಅದ್ಭುತ ನಟಿಯಾಗಿದ್ದು, ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರಿಗೆ ಸರಿಯಾದ ರೀತಿಯ ಕೆಲಸವೇ ಸಿಕ್ಕಿಲ್ಲ.

ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ

ನೀತು ಚಂದ್ರು 2005ರಲ್ಲಿ ‘ಗರಂ ಮಸಾಲಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಗಗನಸಖಿ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಇದರ ನಂತರ ಅವರು 'ಟ್ರಾಫಿಕ್ ಸಿಗ್ನಲ್', 'ಒನ್ ಟು ಥ್ರೀ', 'ಓಯ್ ಲಕ್ಕಿ ಲಕ್ಕಿ ಓಯೆ', '13 ಬಿ' ಮತ್ತು 'ಅಪಾರ್ಟ್ಮೆಂಟ್' ನಂತಹ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೀತು ಚಂದ್ರು ಕೊನೆಯದಾಗಿ 'ಕುಚ್ ಲವ್ ಜೈಸಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಶೆಫಾಲಿ ಶಾ ಮತ್ತು ರಾಹುಲ್ ಬೋಸ್ ಅವರ ಜೊತೆ ನಟಿಸಿದ್ದರು.

ಇದನ್ನೂ ಓದಿ: IMDb 2022: ಕೆಜಿಎಫ್ 2 ಗಿಂತಲೂ ಪಾಪುಲರ್ ಅಂತೆ ಈ ಸಿನಿಮಾ..!

ಹಾಲಿವುಡ್‍ ಚಿತ್ರಗಳಲ್ಲಿಯೂ ನಟಿಸಿರುವ ನಟಿ

ನೀತು ಚಂದ್ರ ಹಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. 2020ರಲ್ಲಿ ಅವರ ‘ಗೌನ್ ಅಂಡ್ ಔಟ್ ಇನ್ ಬೆವರ್ಲಿ ಹಿಲ್ಸ್’ ಇಂಗ್ಲಿಷ್ ಟಿವಿ ಸಿರೀಸ್ ತೆರೆಕಂಡಿತ್ತು. ಇದಲ್ಲದೇ ಅವರು ‘ನೆವರ್ ಬ್ಯಾಕ್ ಡೌನ್: ರಿವೋಲ್ಟ್’ ಹಾಲಿವುಡ್ ಚಿತ್ರದಲ್ಲಿಯೂ ಮಿಂಚಿದ್ದಾರೆ. ಇದಲ್ಲದೇ 2016ರಲ್ಲಿ ನೀತು ಚಂದ್ರ ಗ್ರೀಕ್ ಚಿತ್ರ ‘ಬ್ಲಾಕ್ 12’ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ನಟಿ ಗ್ರೀಕ್ ಭಾಷೆಯನ್ನು ಸಹ ಕಲಿತಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News