ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನಿಂದ ಪ್ರೇಮ ನಿವೇದನೆ: ಆದ್ರೆ ಹುಡುಗಿ ಮಾಡಿದ್ದೇನು ಗೊತ್ತಾ? ಶಾಕ್ ಆಗ್ತೀರ

ಇನ್ನು ಇಂತಹ ಮಾತಿಗೆ ಪೂರಕ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಕ್ರೇನ್ ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದಾನೆ. ಆತನ ಸುತ್ತಲೂ ಅನೇಕರು ಸೇರಿದ್ದಾರೆ.

Written by - Bhavishya Shetty | Last Updated : Oct 2, 2022, 09:01 PM IST
    • ಉಕ್ರೇನ್ ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನಿಂದ ಲವ್ ಪ್ರಪೋಸ್
    • ತಕ್ಷಣವೇ ಆತನ ಪ್ರೀತಿಯನ್ನು ಒಪ್ಪಿಕೊಂಡ ಪ್ರೇಯಸಿ
    • ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ವಿಡಿಯೋ
ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನಿಂದ ಪ್ರೇಮ ನಿವೇದನೆ: ಆದ್ರೆ ಹುಡುಗಿ ಮಾಡಿದ್ದೇನು ಗೊತ್ತಾ? ಶಾಕ್ ಆಗ್ತೀರ title=
Love Proposal

ರಷ್ಯಾ ಉಕ್ರೇನ್ ನಡುವೆ ನಡೆದ ಯುದ್ಧ ಅದೆಷ್ಟೋ ಪ್ರಾಣಗಳನ್ನು ಕಿತ್ತುಕೊಂಡಿದೆ. ಇನ್ನೂ ಕೆಲವರು ಜೀವಂತವಾಗಿದ್ದರೂ ಸಹ ಸತ್ತಂತೆ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ. ಏಕೆಂದರೆ ದೇಹದ ಕೆಲ ಭಾಗಗಳು ಯುದ್ಧದಲ್ಲಿ ಬೆಂದು ಹೋಗಿವೆ. ಇಂತಹ ನೋವಿನ ನಡುವೆಯೂ ಅನೇಕರು ಬದುಕುವ ಹುರುಪನ್ನು ಕಳೆದುಕೊಂಡಿಲ್ಲ. ತಮ್ಮ ಪ್ರೀತಿ ಪಾತ್ರರ ಜೊತೆ ಸಂತೋಷದಿಂದ ಕಾಲಕಳೆಯಲು ನಿರ್ಧರಿಸಿದ್ದಾರೆ. 

ಇದನ್ನೂ ಓದಿ: Uttar Pradesh: ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಉರುಳಿ 22 ಸಾವು

ಇನ್ನು ಇಂತಹ ಮಾತಿಗೆ ಪೂರಕ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಕ್ರೇನ್ ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನೋರ್ವ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದಾನೆ. ಆತನ ಸುತ್ತಲೂ ಅನೇಕರು ಸೇರಿದ್ದಾರೆ. ಸ್ನೇಹಿತನ ಸಹಾಯದಿಂದ ಬಂದ ಯುವಕ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ. ಆಕೆಯ ಕಣ್ಣಿಗೆ ಆ ಸಂದರ್ಭದಲ್ಲಿ ಬಟ್ಟೆ ಕಟ್ಟಲಾಗಿತ್ತು. ಅದನ್ನು ತೆರೆದು ನೋಡಿದಾಗ ಪ್ರಿಯತಮ ಕಣ್ಣ ಮುಂದೆ ಪ್ರಪೋಸ್ ಮಾಡುತ್ತಿದ್ದಾನೆ. ತಕ್ಷಣವೇ ಆತನ ಪ್ರೀತಿಯನ್ನು ಒಪ್ಪಿಕೊಂಡು ಆತನನ್ನು ತಬ್ಬಿಕೊಳ್ಳುತ್ತಾಳೆ.  

 

 

ಇದನ್ನೂ ಓದಿ: ಬೆಚ್ಚಗೆ ಮಲಗಿದ್ದ ಹೆಬ್ಬಾವಿನ ಮೇಲೆ ಮೊಸಳೆಯ ಟೆರರ್ ಅಟ್ಯಾಕ್: ಮೈ ಜುಂ ಎನಿಸುವ ಭಯಾನಕ ವಿಡಿಯೋ ನೋಡಿ

ಇದಲ್ಲವೇ ನಿಜವಾದ ಪ್ರೀತಿ ಎಂದರೆ. ಪ್ರೀತಿಸಿದವರು ಎಂತಹದ್ದೇ ಪರಿಸ್ಥಿತಿಯಲ್ಲಿರಲಿ. ನೋವು ನಲಿವು, ಸುಖ ದುಃಖದಲ್ಲಿ ಜೊತೆಯಾಗಿ ಇರುವವರೇ ನಿಜವಾದ ಸಂಗತಿಗಳಾಗುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, WedWorldMagazine ಎಂಬ ಇನ್ಸ್ಟಾಗ್ರಾಂ ಪೇಜ್ ಹಂಚಿಕೊಂಡಿದೆ. ಸದ್ಯ ಈ ವಿಡಿಯೋವನ್ನು 2,712,379 ಮಂದಿ ಲೈಕ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News