Viral Shocking News: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿ!

Brain-Eating Amoeba infection: ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.

Written by - Puttaraj K Alur | Last Updated : Jul 21, 2023, 10:23 PM IST
  • ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿಯಾಗಿರುವ ಘಟನೆ ಅಮೆರಿಕದ ನೆವಾಡದಲ್ಲಿ ನಡೆದಿದೆ
  • ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ‘ನೇಗ್ಲೇರಿಯಾ ಫೌಲೆರಿ’ ಸೋಂಕಿನಿಂದ ಮಗು ಸಾವು
  • ಮಲಿನಯುಕ್ತ ನೀರಿನಲ್ಲಿ ಈಜುವುದು & ಸೋಂಕಿನ ನೀರಿನಲ್ಲಿ ಮೂಗು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ
Viral Shocking News: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿ! title=
ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿ

ನ್ಯೂಯಾರ್ಕ್: ಮೆದುಳು ತಿನ್ನುವ ಅಮೀಬಾಗೆ 2 ವರ್ಷದ ಮಗು ಬಲಿಯಾಗಿರುವ ಆಘಾತಕಾರಿ ಘಟನೆ ಅಮೆರಿಕದ ನೆವಾಡದಲ್ಲಿ ನಡೆದಿದೆ. ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲ್ಪಡುವ ‘ನೇಗ್ಲೇರಿಯಾ ಫೌಲೆರಿ’ ಸೋಂಕಿನಿಂದ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.

ವರದಿಯ ಪ್ರಕಾರ ನೀರಿನಲ್ಲಿ ಆಟವಾಡಿದ್ದ ಈ ಮಗು ಅನಾರೋಗ್ಯಕ್ಕೆ ತುತ್ತಾಗಿತ್ತು. ಬಳಿಕ ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ನಡೆಸಲಾಗಿತ್ತು. ಈ ವೇಳೆ ಮಗುವಿನಲ್ಲಿ ‘ನೇಗ್ಲೇರಿಯಾ ಫೌಲೆರಿ’ ಸೋಂಕು ಇರುವುದು ಕಂಡು ಬಂದಿತ್ತು. ಆದರೆ ಈ ಕಾಯಿಲೆಗೆ ಚಿಕಿತ್ಸೆ ಇಲ್ಲದ ಪರಿಣಾಮ ಮಗು ಸಾವನ್ನಪ್ಪಿದೆ.

ಇದನ್ನೂ ಓದಿ: Global Liveability Index: ಜಗತ್ತಿನಲ್ಲಿ ವಾಸಿಸಲು 5 ಅತ್ಯುತ್ತಮ ನಗರಗಳು ಯಾವುವು ಗೊತ್ತೆ?

ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ಬ್ರಿಯಾನ ಎಂಬಾಕೆ ತನ್ನ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾಳೆ. ‘ನನಗೆ ವಿಶ್ವದ ಅತ್ಯಂತ ಬಲಿಷ್ಠ ಮಗನಿದ್ದಾನೆ ಅಂತಾ ತಿಳಿದಿತ್ತು. ಭೂಮಿಯ ಮೇಲಿನ ಅತ್ಯುತ್ತಮ ಮಗುವನ್ನು ಕರುಣಿಸಿದ್ದಕ್ಕೆ ದೇವರಿಗೆ ನಾನು ಯಾವಾಗಲೂ ಕೃತಜ್ಞನಾಗಿದ್ದೆ. ಆದರೆ ಒಂದು ದಿನ ಆ ಮಗು ನನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತದೆ’ ಅಂತಾ ನಾನು ಭಾವಿಸಿರಲಿಲ್ಲ’ವೆಂದು ಬೇಸರ ತೋಡಿಸಿಕೊಂಡಿದ್ದಾಳೆ.   

ಇತ್ತೀಚೆಗೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಕೂಡ ಮೆದುಳು ತಿನ್ನುವ ಅಮೀಬಾದಿಂದ ಪ್ರಾಣ ಕಳೆದುಕೊಂಡಿದ್ದ. ಭಾರತದಲ್ಲಿ ಇದು ಮೊದಲ ಪ್ರಕರಣವಾದ್ರೆ, ಅಮೆರಿಕದಲ್ಲಿ 2ನೇ ಪ್ರಕರಣ ಬೆಳಕಿಗೆ ಬಂದಿದೆ. ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.

ಇದನ್ನೂ ಓದಿ: ಯುಎಸ್ ನ ಅಲಾಸ್ಕಾ ಬಳಿ 7.4 ತೀವ್ರತೆಯ ಭೂಕಂಪ, ಸುನಾಮಿ ಭೀತಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News