ಕಾರ್ಯಕ್ರಮದಲ್ಲಿ ಕಾಗೆ ಕಥೆ ಹೇಳಿದ ಸಿದ್ದರಾಮಯ್ಯ

  • Zee Media Bureau
  • Jul 4, 2023, 08:42 AM IST

ಡಾ. B.R ಅಂಬೇಡ್ಕರ್ ಸಂವಿಧಾನ ನೀಡದೇ ಇದ್ದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ. ಬದ್ಲಿಗೆ ಕುರಿ, ಎಮ್ಮೆ ಕಾಯ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಘಟನೆಗಳನ್ನ ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಸಿಎಂ ಮಾತನಾಡಿದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗ್ಬೇಕು. ಹೃದಯ ಇದ್ದರೆ ಸಾಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಅಂತೇಳಿದ್ರು... ಇನ್ನೂ ಒಮ್ಮೆ ನನ್ನ ಕಾರಿನ ಮೇಲೆ ಕಾಗೆ ಕೂತಾಗ ಹಲವರು ಊಹಾಪೋಹಾ ವ್ಯಕ್ತಪಡಿಸಿದ್ದರು. ನಾನು ಅಧಿಕಾರ ಕಳ್ದುಕೊಳ್ಳುತ್ತೇನೆ ಎಂದ್ರು ಆದ್ರೆ ಆ ಘಟನೆ ನಂತ್ರ ನಾನು ಎರಡು ಬಜೆಟ್‌ ಮಂಡಿಸಿ ಅಧಿಕಾರ ಪೂರ್ತಿಯಾಗಿ, ಸಮರ್ಥವಾಗಿ ನಿರ್ವಹಿಸಿದೆ. ಮೌಢ್ಯವನ್ನು ನಂಬೇಡಿ ಅಂತ ಸಿಎಂ ಸಿದ್ದರಾಮಯ್ಯ ನೆರೆದಿದ್ದ ಜನರಿಗೆ ಕಿವಿ ಮಾತು ಹೇಳಿದ್ರು.

Trending News