NCB ಅಧಿಕಾರಿಗಳ ಕಾರ್ಯಾಚರಣೆ, 52 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

  • Zee Media Bureau
  • May 28, 2022, 12:42 PM IST

ಬೆಂಗಳೂರು NCB ಅಧಿಕಾರಿಗಳ ಭಾರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 52 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಸೂಟ್ ಕೇಸ್ ತಳಭಾಗದಲ್ಲಿ ಹೆರಾಯಿನ್ ಇಟ್ಟುಕೊಂಡು ಜಿಂಬಾಬ್ವೆಯಿಂದ ಬೆಂಗಳೂರಿಗೆ ಬರುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ಸಾಗಾಟನೆ ಮಾಡುತ್ತಿದ್ದಳು. ಬೆಂಗಳೂರು ಕೆಐಎಎಲ್ ಏರ್ಪೋರ್ಟ್‌ನಲ್ಲಿ ಮಹಿಳೆಯನ್ನು ವಶಕ್ಕೆ ಪಡೆಯಲಾಯಿತು. ನಂತರ ಮಹಿಳಾ ಡ್ರಗ್ ಪೆಡ್ಲರ್ ಮಾಹಿತಿ ಆಧರಿಸಿ ಮತ್ತಿಬ್ಬರು ಪೆಡ್ಲರ್‌ಗಳ ಬಂಧನ ಮಾಡಲಾಗಿದೆ. ಈ ವೇಳೆ ಮಹಿಳೆಯರು ತಂಗಿದ್ದ ಲಾಡ್ಜ್ ನಲ್ಲಿ NCB ಪರಿಶೀಲನೆ ನಡೆಸಿ 6.890 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಒಟ್ಟು 9 ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.

Trending News