Nubia Z50 Smartphone: ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್

Nubia Z50 Smartphone: ZTE ಕಂಪನಿಯು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ Nubia Z50 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಸೊಗಸಾದ ವಿನ್ಯಾಸದಲ್ಲಿದ್ದು, ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ 5 ರೂಪಾಂತರಗಳಲ್ಲಿ ಬರುತ್ತದೆ. Nubia Z50 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

Written by - Puttaraj K Alur | Last Updated : Dec 20, 2022, 07:09 PM IST
  • ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್‍ ಬಿಡುಗಡೆ ಮಾಡಿದ ZTE
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜೆಟ್ ಬೆಲೆಯ Nubia Z50 ಸ್ಮಾರ್ಟ್‍ಫೋನ್
  • ಬಿಗ್ ಸ್ಕ್ರೀನ್, 64MP ಕ್ಯಾಮೆರಾ, 5000mAh ಬ್ಯಾಟರಿ ಮತ್ತು ಅನೇಕ ವಿಶೇಷತೆ ಹೊಂದಿರುವ ಫೋನ್
Nubia Z50 Smartphone: ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್   title=
ZTE Nubia Smartphone

ನವದೆಹಲಿ: ZTE ಯಾವಾಗಲೂ ಸೊಗಸಾದ ಸ್ಮಾರ್ಟ್‌ಫೋನ್‌ಗಳನ್ನೇ ತಯಾರಿಸುತ್ತದೆ. ಇದೀದ ಚೀನಾದಲ್ಲಿ Nubia Z50 ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್‌ನ ವಿನ್ಯಾಸವು ಸಂಪೂರ್ಣವಾಗಿ ವಿಶಿಷ್ಟವಾಗಿದೆ. ಈ ಫೋನ್ ಬಿಗ್ ಸ್ಕ್ರೀನ್, 64MP ಕ್ಯಾಮೆರಾ ಮತ್ತು 5000mAh ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತದೆ. Nubia Z50 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

Nubia Z50 ವಿಶೇಷಣಗಳು

Nubia Z50 FHD+ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‍ನೊಂದಿಗೆ 6.67-ಇಂಚಿನ ಬಾಗಿದ AMOLED ಡಿಸ್ಪ್ಲೇ ಹೊಂದಿದೆ. 1000 ನಿಟ್‌ಗಳ ಹೊಳಪು( brightness) ಈ ಫೋನ್‌ನಲ್ಲಿ ಲಭ್ಯವಿದೆ. ಫೋನ್ Qualcomm Snapdragon 8 Gen 2 SoCನಿಂದ ಚಾಲಿತವಾಗಲಿದೆ. ಇದರ ಹೊರತಾಗಿ ಫೋನ್ MyOS 13ನ್ನು ಬೂಟ್ ಮಾಡುತ್ತದೆ. ಫೋನ್‌ನಲ್ಲಿ ಗ್ಲಾಸ್ ಸ್ಯಾಂಡ್‌ವಿಚ್ ಬಾಡಿ ಲಭ್ಯವಿದೆ. ಇದಲ್ಲದೇ ಲೆದರ್ ಆವೃತ್ತಿಯೂ ಲಭ್ಯವಾಗಲಿದೆ. ಫೋನ್‌ನಲ್ಲಿ ಡ್ಯುಯಲ್ ಸ್ಪೀಕರ್‌ಗಳು ಸಹ ಲಭ್ಯವಿದೆ.

ಇದನ್ನೂ ಓದಿ: TVS iQube: ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗೆ ತೀವ್ರ ಬೇಡಿಕೆ, 1338% ಹೆಚ್ಚಿದ ಮಾರಾಟ

Nubia Z50 ಕ್ಯಾಮೆರಾ ಮತ್ತು ಬ್ಯಾಟರಿ

ನುಬಿಯಾ Z50ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 64MP OIS ಲೆನ್ಸ್ ಮತ್ತು 50MP ಸೆಕೆಂಡರಿ ಸೆನ್ಸಾರ್ ಲಭ್ಯವಿರುತ್ತದೆ. ಇದಲ್ಲದೆ ಮುಂಭಾಗದಲ್ಲಿ 16MP ಓಮ್ನಿವಿಷನ್ ಮುಂಭಾಗದ ಕ್ಯಾಮೆರಾ ಲಭ್ಯವಿರುತ್ತದೆ. ರಿಂಗ್ ಎಲ್ಇಡಿ ಲೈಟ್ ಸಹ ಲಭ್ಯವಿರುತ್ತದೆ. ಇದಲ್ಲದೆ 5000mAh ಬ್ಯಾಟರಿಯು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿರುತ್ತದೆ.

Nubia Z50 ಬೆಲೆ

Nubia Z50ನ್ನು 5 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. 8GB + 128GBಗೆ $430 (35,600 ರೂ.), 8GB + 256GBಗೆ $487 (40,319 ರೂ.), 12GB + 256GBಗೆ $530 (43,880 ರೂ.), 12GB + 512GBಗೆ $573 (47,439 ರೂ.) ಮತ್ತು 16GB + 1TBಗೆ $859 (71,117 ರೂ.) ಇದೆ.

ಇದನ್ನೂ ಓದಿ: ವಿವೋದ ಬಣ್ಣ ಬದಲಿಸುವ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್‌ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News