ಈ Prepaid planಗಳಲ್ಲಿ ಸಿಗಲಿದೆ ಪ್ರತಿದಿನ 3 GB Data

Vi (Vodafone- Idea) ನ 249 ರೂ ಬೆಲೆಯ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ಕಂಪನಿಯು ಪ್ರಸ್ತುತ ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದೆ. 

Written by - Ranjitha R K | Last Updated : Apr 6, 2021, 12:50 PM IST
  • ಇಂಟರ್ನೆಟ್ ಬಳಕೆದಾರರಿಗಾಗಿ ವಿಶೇಷ ಯೋಜನೆಗಳು
  • ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ
  • ಉತ್ತಮ ಪ್ಲಾನ್ ಯಾವುದು ತಿಳಿಯಿರಿ
ಈ Prepaid planಗಳಲ್ಲಿ ಸಿಗಲಿದೆ ಪ್ರತಿದಿನ 3 GB Data title=
ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ (file photo)

ನವದೆಹಲಿ: ಇದು ಇಂಟರ್ನೆಟ್ ಕಾಲ. ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆ ಮತ್ತು ಮೊಬೈಲ್‌ನಲ್ಲಿ ಮೂವಿಗಳನ್ನು  ನೋಡುವವರು ಹೆಚ್ಚು ಇಂಟರ್ನೆಟ್ ಡೇಟಾವನ್ನು ಬಳಸುತ್ತಾರೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ, ಎಲ್ಲಾ ಟೆಲಿಕಾಂ ಕಂಪನಿ ಗಳು ತಮ್ಮ ಗ್ರಾಹಕರಿಗೆ,  ಸಾಕಷ್ಟು ಇಂಟರ್ನೆಟ್  ಆಫರ್ ಗಳನ್ನೂ ನೀಡುತ್ತಿವೆ.  Airtel, Vi ಮತ್ತು  Jio ಕಂಪನಿಗಳು ತಮ್ಮ ಗ್ರಾಹಕರಿಗೆ ಇಂತಹ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಪ್ರತಿದಿನ 3 GB ಡೇಟಾ ಲಭ್ಯವಿದೆ. 

 349 ರೂ Jio ಪ್ರಿಪೇಯ್ಡ್ ಪ್ಲಾನ್ : 
Jio ತನ್ನ ಗ್ರಾಹಕರಿಗೆ ಇಂತಹ ಪ್ರಿಪೇಯ್ಡ್ ಯೋಜನೆಯನ್ನು (Prepaid plan) ನೀಡುತ್ತದೆ.  349 ರೂಪಾಯಿಯ ಈ ಪ್ಲಾನ್ ನಲ್ಲಿ  ಜಿಯೋದಿಂದ ಜಿಯೋಗೆ (Jio) ಅನಿಯಮಿತ ಕರೆ ಮಾಡಬಹುದು. ಉಳಿದ ನೆಟ್‌ವರ್ಕ್‌ಗಳಿಗೆ  1000  ನಿಮಿಷಗಳ ಉಚಿತ ಕರೆ ಮಾಡಲು ಅವಕಾಶವಿರುತ್ತದೆ. ಅಲ್ಲದೆ ಈ ಪ್ಲಾನ್ ನಲ್ಲಿ ಪ್ರತಿದಿನ 3 ಜಿಬಿ ಡೇಟಾವನ್ನು ಕೂಡಾ ನೀಡಲಾಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳವರೆಗೆ ಇರುತ್ತದೆ.  ಪ್ರತಿದಿನ 100 ಎಸ್‌ಎಂಎಸ್ (SMS) ಜೊತೆಗೆ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ:  ಕೇವಲ ಒಂದು ರೂಪಾಯಿಗೆ ಸಿಗಲಿದೆ Mi Product ; ಈ ದಿನದಿಂದ ಆರಂಭವಾಗಲಿದೆ ಆಫರ್

ಏರ್‌ಟೆಲ್  ನ 398 ರೂ ಪ್ರಿಪೇಯ್ಡ್ ಪ್ಲಾನ್ : 
 ಏರ್‌ಟೆಲ್‌ನ (Airtel) 398 ರೂ ಪ್ಲಾನ್ ನಲ್ಲಿ ಪ್ರತಿದಿನ 3 GB ಹೈಸ್ಪೀಡ್ ಡೇಟಾ ನೀಡಲಾಗುತ್ತಿದೆ.  ಈ ಯೋಜನೆಯಲ್ಲಿ, ಎಲ್ಲಾ ನೆಟ್‌ವರ್ಕ್‌ಗಳಿಗೂ  ಅನಿಯಮಿತ ಕರೆಯ (Unlimited calls) ಸೌಲಭ್ಯವಿರುತ್ತದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಇದರಲ್ಲಿ ಕೂಡಾ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸಿಗುತ್ತದೆ. 

Vi ಯ 249 ಪ್ರಿಪೇಯ್ಡ್ ಪ್ಲಾನ್ : 
Vi (Vodafone- Idea) ನ 249 ರೂ ಬೆಲೆಯ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ಕಂಪನಿಯು ಪ್ರಸ್ತುತ ಡಬಲ್ ಡೇಟಾ (Double data) ಪ್ರಯೋಜನವನ್ನು ನೀಡುತ್ತಿದೆ. ಅಂದರೆ ಈ ಯೋಜನೆಯಲ್ಲಿ ಪ್ರತಿದಿನ 3 ಜಿಬಿ ಡೇಟಾ ಲಭ್ಯವಿರುತ್ತದೆ. ಈ ಪ್ಲಾನ್ ನಲ್ಲಿ ಎಲ್ಲಾ ನೆಟ್‌ವರ್ಕ್‌ಗಳಿಗೂ ಅನಿಯಮಿತ ಕರೆಗಳನ್ನು ಮಾಡಬಹುದು. ಇದಲ್ಲದೆ, ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯ ಕೂಡಾ ಇರಲಿದೆ. 

ಇದನ್ನೂ ಓದಿ:  Google Pay, Paytm, PhonePeಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ OnePlus Payment App

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News