Cars: ಜಗತ್ತಿನ ಅಗ್ಗದ ಬೆಲೆಯ ಕಾರು ದೇಶಕ್ಕೆ ಎಂಟ್ರಿ! 26km ಮೈಲೇಜ್ ಜೊತೆ ಹಿಂದೆಂದೂ ಕಂಡಿರದ ಅದ್ಭುತ ವೈಶಿಷ್ಟ್ಯ!

Affordable SUV in India: ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.

Written by - Bhavishya Shetty | Last Updated : Apr 22, 2023, 03:38 PM IST
    • ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
    • ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ.
    • ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ.
Cars: ಜಗತ್ತಿನ ಅಗ್ಗದ ಬೆಲೆಯ ಕಾರು ದೇಶಕ್ಕೆ ಎಂಟ್ರಿ! 26km ಮೈಲೇಜ್ ಜೊತೆ ಹಿಂದೆಂದೂ ಕಂಡಿರದ ಅದ್ಭುತ ವೈಶಿಷ್ಟ್ಯ!  title=
Maruti S-Presso

Mini Scorpio: ದೇಶದಲ್ಲಿ SUV(Sports Utility Vehicle) ಕಾರುಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ, ಅನೇಕ ಕಂಪನಿಗಳು ತಮ್ಮ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಪುಟ್ಟ ಕಾರುಗಳನ್ನು SUV ಮಾಡೆಲ್’ನಲ್ಲಿ ನೀಡಲು ಪ್ರಯತ್ನಿಸುತ್ತಿವೆ. ಇದೀಗ ಮಹೀಂದ್ರಾ ಸ್ಕಾರ್ಪಿಯೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ SUV ಕಾರುಗಳನ್ನು ಹೊಂದಿದೆ. ಈ ಕಾರುಗಳ ಶಕ್ತಿಯುತ ನೋಟಕ್ಕೆ ಇದು ಹೆಸರುವಾಸಿಯಾಗಿದೆ. ಆದರೆ ಇದರ ಆರಂಭಿಕ ಬೆಲೆ 12 ಲಕ್ಷ ರೂಪಾಯಿ. ಪ್ರತಿಯೊಬ್ಬರೂ ಈ ಕಾರನ್ನು ನಿಭಾಯಿಸುವುದು ಮತ್ತು ಖರೀದಿಸುವುದು ತುಂಬಾ ಕಷ್ಟ. ಆದರೆ ನಾವಿಂದು ದೇಶದಲ್ಲಿ ಅಗ್ಗಕ್ಕೆ ಸಿಗುತ್ತಿರುವ ಅಂದರೆ ಜಸ್ಟ್ 4 ಲಕ್ಷ ರೂಪಾಯಿ ಬೆಲೆಯಲ್ಲಿ ಮಾರಾಟವಾಗಲಿರುವ ಮಹೀಂದ್ರಾ ಸ್ಕಾರ್ಪಿಯೊನಂತೆ ಕಾಣುವಂತೆ ಮತ್ತೊಂದು ವಾಹನದ ಬಗ್ಗೆ ಸಂಕ್ಷಿಪ್ತ ವರದಿಯನ್ನು ನೀಡಲಿದ್ದೇವೆ.

ಇದನ್ನೂ ಓದಿ: ನಿಮ್ಮ Twitter Blue Tick ಕಾಣೆಯಾಗಿದೆಯೇ? ಅದನ್ನು ವಾಪಸ್ ಪಡೆಯಲು ಹೀಗೆ ಮಾಡಿ..!

ನಾವು ಮಾತನಾಡುತ್ತಿರುವ ಕಾರಿನ ಹೆಸರು ಮಾರುತಿ S-Presso. ವಿಶೇಷ ಸಂಗತಿಯೆಂದರೆ ಕಂಪನಿಯು ಇತ್ತೀಚೆಗೆ ಈ ವಾಹನವನ್ನು ಬ್ಲ್ಯಾಕ್ ಕಲರ್ ಆವೃತ್ತಿಯಲ್ಲಿ ಪರಿಚಯಿಸಿದೆ. ಇದರ ಮುಂಭಾಗದ ನೋಟದಿಂದ ಚಕ್ರದ ವಿನ್ಯಾಸದವರೆಗೆ, ಸ್ಕಾರ್ಪಿಯೋ ಕ್ಲಾಸಿಕ್‌’ಗೆ ಹೊಂದಿಕೆಯಾಗುವ ಅನೇಕ ವಿಷಯಗಳಿವೆ. ಕಾರು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಕಂಪನಿಯು ಅದನ್ನು ಬಾಕ್ಸೀ ಮತ್ತು ಸ್ಪೋರ್ಟಿ ನೋಟವನ್ನು ನೀಡಲು ಪ್ರಯತ್ನಿಸಿದೆ. ಹೀಗಾಗಿ ಇದನ್ನು ಮಿನಿ ಸ್ಕಾರ್ಪಿಯೊ ಎನ್ನಬಹುದು.

ಎಂಜಿನ್ ಮತ್ತು ವೈಶಿಷ್ಟ್ಯಗಳು:

ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು ಸೆಂಟ್ರಲಿ ಮೌಂಟೆಡ್ ಇನ್’ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಗೇರ್ ಶಿಫ್ಟ್, ಸಿ ಆಕಾರದ ಟೈಲ್ ಲ್ಯಾಂಪ್‌, 14-ಇಂಚಿನ ಸ್ಟೀಲ್ ವೀಲ್, ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್ ಒಆರ್‌’ವಿಎಂಎಸ್ ಹೊಂದಿದೆ. S-Pressoದ ಎಲ್ಲಾ ವೇರಿಯೆಂಟ್’ಗಳು ಇಸ್’ಪಿ ಮತ್ತು ಹಿಲ್ -ಹೋಲ್ಡ್ ಅಸಿಸ್ಟ್ ಸ್ಟ್ಯಾಂಡರ್ಡ್’ನಲ್ಲಿ ಬರುತ್ತವೆ.

ಇದನ್ನೂ ಓದಿ: ಎಸಿಯಂತಹ ತಂಪಾದ ಹವಾ ಪಡೆಯಲು ಇಂದೇ ಮನೆಗೆ ತನ್ನಿ ವಾಟರ್ ಸ್ಪ್ರಿಂಕ್ಲರ್ ಫ್ಯಾನ್

ಮಾರುತಿ ಸುಜುಕಿ ಎಸ್-ಪ್ರೆಸ್ಸೊವನ್ನು ಸ್ಟಾರ್ ಬ್ಲೂ, ಗ್ರಾನೈಟ್ ಗ್ರೇ, ಸಿಲ್ಕ್ ಸಿಲ್ವರ್, ಫೈರ್ ರೆಡ್, ಸಿಜಲ್ ಆರೆಂಜ್ ಮತ್ತು ಸಾಲಿಡ್ ವೈಟ್ ಎಕ್ಸ್’ಟೀರಿಯರ್ ಬಣ್ಣದಲ್ಲಿ ಪರಿಚಯಿಸಲಾಗಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಒನಲ್ಲಿ ಐದು ಜನರು ಆರಾಮದಾಯಕವಾಗಿ ಕುಳಿತುಕೊಳ್ಳಬಹುದು. ಮಾರುತಿ ಸುಜುಕಿಯ ಎಸ್-ಪ್ರೆಸ್ಒ ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಜೊತೆ ಪೈಪೋಟಿ ನೀಡಬಲ್ಲದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News