ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಈ ವಿಷಯಗಳ ಬಗ್ಗೆ ಹುಡುಕುತ್ತಾರಂತೆ ! ವರದಿಯಲ್ಲಿ ಬಹಿರಂಗವಾದ ಸತ್ಯ

What Do Girls Search On Google:ಗೂಗಲ್ ತನ್ನ  ಸರ್ಚ್ ರಿಸಲ್ಟ್ ನ  ವರದಿಯನ್ನು ಪ್ರಸ್ತುತಪಡಿಸಿದೆ. ಯುವತಿಯರು ಗೂಗಲ್‌ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕೂಡಾ ಬಯಲಾಗಿದೆ. 

Written by - Ranjitha R K | Last Updated : Oct 4, 2022, 01:01 PM IST
  • 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರೆ
  • 75% ಮಹಿಳೆಯರು 15ರಿಂದ -34 ವರ್ಷ ವಯಸ್ಸಿನವರಾಗಿದ್ದಾರೆ.
  • ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಗೂಗಲ್ ಬಳಿ ಕೇಳುತ್ತಾರೆ
ಒಂಟಿಯಾಗಿರುವಾಗ ಹೆಣ್ಣು ಮಕ್ಕಳು ಗೂಗಲ್ ನಲ್ಲಿ ಈ ವಿಷಯಗಳ ಬಗ್ಗೆ ಹುಡುಕುತ್ತಾರಂತೆ ! ವರದಿಯಲ್ಲಿ ಬಹಿರಂಗವಾದ ಸತ್ಯ   title=
womens search on google

What Do Girls Search On Google: ಗೂಗಲ್ ತನ್ನ  ಸರ್ಚ್ ರಿಸಲ್ಟ್ ನ  ವರದಿಯನ್ನು ಪ್ರಸ್ತುತಪಡಿಸಿದೆ. ಇದರಲ್ಲಿ ಮಹಿಳೆಯರ ಇಂಟರ್ನೆಟ್ ಬಳಕೆಗೆ ಸಂಬಂಧಿಸಿದ ಹಲವು ಆಸಕ್ತಿದಾಯಕ ವಿಷಯಗಳು ಮುನ್ನೆಲೆಗೆ ಬಂದಿವೆ. ಹೊಸ ವರದಿಯ ಪ್ರಕಾರ, ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರೆಯಂತೆ. ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಈ ಮಹಿಳೆಯರು ಇಂಟರ್ನೆಟ್ ಅನ್ನು ಬಳಸುತ್ತಾರೆ ಎಂದು ವರದಿ ಹೇಳಿದೆ. ಮಾಹಿತಿಯ ಪ್ರಕಾರ, ಈ ಪೈಕಿ 75% ಮಹಿಳೆಯರು 15ರಿಂದ -34 ವರ್ಷ ವಯಸ್ಸಿನವರಾಗಿದ್ದಾರೆ. 

ಇನ್ನು ಯುವತಿಯರು ಗೂಗಲ್‌ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕೂಡಾ ಬಯಲಾಗಿದೆ. ಮಹಿಳೆಯರು ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್ ನಲ್ಲಿ ಕಂಡು ಕೊಳ್ಳಲು ಬಯಸುತ್ತಾರೆಯಂತೆ. 

ಇದನ್ನೂ ಓದಿ : ಮನೆಯ ಈ 2 ಸಾಮಾನು ಬದಲಾಯಿಸಿ, 'ವಿದ್ಯುತ್ ಬಿಲ್' ಅರ್ಧದಷ್ಟು ಕಡಿಮೆಯಾಗುತ್ತೆ!

ವೃತ್ತಿ ಮತ್ತು ಶಾಪಿಂಗ್‌ಗೆ ಸಂಬಂಧಿಸಿದ ವಿಷಯಗಳು : 
ಗೂಗಲ್ ವರದಿಯ ಪ್ರಕಾರ, ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯವರಾಗಿರುತ್ತಾರೆ. ಅವರು ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಹುಡುಗಿಯರು ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನೇ ಇಂಟರ್ ನೆಟ್ ನಲ್ಲಿ ಕೂಡಾ ಹುಡುಕುತ್ತಾರೆಯಂತೆ. ಯಾವ ವೃತ್ತಿ ಮಾಡಬೇಕು ಅಥವಾ ಯಾವ ಕೋರ್ಸ್ ಮಾಡಬೇಕು ಎನ್ನುವುದನ್ನು ಗೂಗಲ್ ಸರ್ಚ್ ಮಾಡುತ್ತಾರೆಯಂತೆ. ಅಲ್ಲದೆ, ಕೋರ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. 

ಇದಲ್ಲದೇ ಹುಡುಗಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೆಚ್ಚು ಭೇಟಿ ನೀಡುತ್ತಾರೆ. ಬಟ್ಟೆ ವಿನ್ಯಾಸಗಳು, ಹೊಸ  ಕಲೆಕ್ಷನ್, ಆಫರ್ ಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವುದು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Betting Ads: ಬೆಟ್ಟಿಂಗ್ ಜಾಹೀರಾತುಗಳನ್ನು ಬಿತ್ತರಿಸಿದರೆ ಹುಷಾರ್...! ಓಟಿಟಿ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಿಗೆ ಕೇಂದ್ರದ ಅಡ್ವೈಸರಿ

ಹುಡುಗಿಯರು ಕೂಡ ಫ್ಯಾಷನ್ ಮತ್ತು  ಮೆಹಂದಿ ಡಿಸೈನ್ ಗಳನ್ನೂ ಹುಡುಕುತ್ತಾರೆ : 
ಹುಡುಗಿಯರು ಎಲ್ಲರಿಗಿಂತ ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಇಂಟರ್‌ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳು ಫ್ಯಾಷನ್, ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ  ಸರ್ಚ್ ಮಾಡುತ್ತಿರುತ್ತಾರೆ ಎನ್ನುವುದು ಕೂಡಾ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. 

ಅಷ್ಟು ಮಾತ್ರವಲ್ಲ, ಹುಡುಗಿಯರು ಹೆಚ್ಚಾಗಿ ಗೂಗಲ್‌ನಲ್ಲಿ ಹೊಸ ಹೊಸ ಮೆಹೆಂದಿ ಡಿಸೈನ್ ಗಳನ್ನೂ ಕೂಡಾ ಸರ್ಚ್ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸಂಗೀತ ಕೇಳಲು ಇಷ್ಟಪಡುತ್ತಾರೆ. ಆದರೆ ಹುಡುಗಿಯರು ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು. ಹುಡುಗಿಯರು ರೊಮ್ಯಾಂಟಿಕ್ ಹಾಡುಗಳನ್ನು ಹುಡುಕುತ್ತಾರೆ ಮತ್ತು ಕೇಳುತ್ತಾರೆ. ಇದರೊಂದಿಗೆ ಹುಡುಗಿಯರು ಇಂಟರ್‌ನೆಟ್‌ನಲ್ಲಿ ರೊಮ್ಯಾಂಟಿಕ್ ಕವನವನ್ನೂ ಹುಡುಕುತ್ತಾರೆ ಎನ್ನುವುದು ತಿಳಿದು ಬಂದಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News