Car Tips: ಸಾಮಾನ್ಯವಾಗಿ ಕಾರಿನಲ್ಲಿ ಕುಳಿತ ಕೂಡಲೇ ಎಸಿ ಆನ್ ಮಾಡುವ ಅಭ್ಯಾಸ ಬಹುತೇಕ ಜನರಿಗಿದೆ. ಆದರೆ, ಬಿಸಿಲಿನಲ್ಲಿ ಪಾರ್ಕ್ ಮಾಡಿರುವ ಕಾರಿನ ಎಸಿಯನ್ನು ನೀವು ಕಾರು ಹತ್ತಿದ ತಕ್ಷಣ ಆನ್ ಮಾಡಬಾರದು. ವಾಸ್ತವವಾಗಿ, ಕಾರ್ ಎಸಿ ಆನ್ ಮಾಡುವ ಸರಿಯಾದ ವಿಧಾನವನ್ನು ತಿಳಿಯುವುದು ಬಹಳ ಮುಖ್ಯ. ಇಲ್ಲದಿದ್ದರೆ, ಇದು ನಿಮ್ಮ ಜೇಬಿನ ಹೊರೆಯನ್ನು ಹೆಚ್ಚಿಸಬಹುದು.
ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದ ಕಾರ್ ಎಸಿ ಅನ್ನು ತಕ್ಷಣ ಆನ್ ಮಾಡಬಾರದೇಕೆ?
ವಾಸ್ತವವಾಗಿ, ಬಿಸಿಲಿನಲ್ಲಿ ನಿಲ್ಲಿಸಿರುವ ಕಾರ್ (Car) ಏರಿದ ಕೂಡಲೇ ಎಸಿಯನ್ನು ಆನ್ ಮಾಡುವುದರಿಂದ ಇದು ಕಾರ್ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು.
ಎಂಜಿನ್‌ನಲ್ಲಿ ಲೋಡ್ ಹೆಚ್ಚಾಗುವ ಅಪಾಯ:
ನೀವು ಬಿಸಿಲಿನಲ್ಲಿ ಕಾರ್ ನಿಲ್ಲಿಸಿದ್ದಾಗ ಕಾರ್ ಒಳಗೂ ಕೂಡ ತಾಪಮಾನ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕಾರ್ ಒಳಗೆ ಹೋದ ಕೂಡಲೇ ಎಸಿ ಆನ್ (Car AC ON) ಮಾಡಿದರೆ ಎಂಜಿನ್‌ನಲ್ಲಿ ಲೋಡ್ ಹೆಚ್ಚಾಗುತ್ತದೆ. ಕಾರ್ ಅನ್ನು ತಂಪಾಗಿಸಲು ಎಂಜಿನ್ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಇದರಿಂದಾಗಿ, ಎಂಜಿನ್ ಜೀವಿತಾವಧಿ ಕಡಿಮೆಯಾಗಬಹುದು.
ಇದನ್ನೂ ಓದಿ- ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards
ಇಂಧನ ಬಳಕೆ:
ನೇರ ಸೂರ್ಯನ ಬೆಳಕಿನಲ್ಲಿ ನಿಲುಗಡೆ ಮಾಡಿರುವ ಕಾರ್ ಒಳಗೆ ಕುಲುಮೆಯಂತೆ ಉರಿಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಎಸಿ ಆನ್ ಮಾಡಿದಾಗ ಎಂಜಿನ್ ಮೇಲೆ ಒತ್ತಡ ಹೆಚ್ಚಾಗಿ ಇದು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಜೇಬಿನ ಹೊರೆಯೂ ಹೆಚ್ಚಾಗುತ್ತದೆ.
ನೀವು ಕಾರ್ ಎಸಿ ಬಳಸುವ ಸರಿಯಾದ ವಿಧಾನವನ್ನು ಅನುಸರಿಸಿದರೆ ಕಾರ್ ಎಂಜಿನ್ ಕಾರ್ಯಕ್ಷಮತೆಯೂ ಹಾಳಾಗುವುದಿಲ್ಲ. ಜೊತೆಗೆ ನಿಮ್ಮ ಜೇಬಿನ ಹೊರೆಯೂ ಹೆಚ್ಚಾಗುವುದಿಲ್ಲ.
ಇದನ್ನೂ ಓದಿ- ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !
ಕಾರಿನಲ್ಲಿ ಎಸಿಯನ್ನು ಯಾವಾಗ ಆನ್ ಮಾಡಬೇಕು?
ಮೊದಲು ಕಾರಿನ ಕಿಟಕಿಗಳನ್ನು ಓಪನ್ ಮಾಡಿಡಿ:
ಯಾವಾಗಲೂ ಕಾರ್ ಹತ್ತಿದ ತಕ್ಷಣ ಎಸಿ ಆನ್ ಮಾಡುವ ಬದಲಿಗೆ ಮೊದಲು ಕಾರಿನ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಕಾರಿನ ಒಳಗೆ ಫ್ರೆಶ್ ಏರ್ ಬರುವುದರಿಂದ ಬಿಸಿಗಾಳಿ ಹೊರಹೋಗುತ್ತದೆ. ಆ ನಂತರದಲ್ಲಿ ಎಸಿ ಆನ್ ಮಾಡುವುದರಿಂದ ಕಾರ್ ಕೂಡಲೇ ತಂಪಾಗುತ್ತದೆ.
ಇದಲ್ಲದೆ, ನೀವು ಬಿಸಿಲಿನಲ್ಲಿ ಕಾರ್ ಪಾರ್ಕ್ ಮಾಡದೆ ನೆರಳಿರುವ ಜಾಗದಲ್ಲಿ ನಿಮ್ಮ ಕಾರ್ ಅನ್ನು ಪಾರ್ಕ್ ಮಾಡಿ. ಇದರಿಂದ ಕಾರ್ ಒಳಗಿನಿಂದ ಹೆಚ್ಚು ಬಿಸಿಯಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.