ಭಾರತದಲ್ಲಿ ಯಾವಾಗ ಪ್ರಾರಂಭವಾಗಲಿದೆ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ? ಎಲೋನ್ ಮಸ್ಕ್ ಹೇಳಿದ್ದೇನು?

Twitter Blue Tick Subscription: ಪ್ರಸ್ತುತ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ವಿಷಯ ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗಳು ಸಹ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಈ ಪ್ರಶ್ನೆಗೆ ಸ್ವತಃ ಎಲೋನ್ ಮಸ್ಕ್ ಅವರೇ ಉತ್ತರವನ್ನು ನೀಡಿದ್ದಾರೆ.

Written by - Yashaswini V | Last Updated : Nov 7, 2022, 08:08 AM IST
  • ಈ ಹಿಂದೆ, ಟ್ವಿಟರ್ ಈ ಬ್ಲೂ ಟಿಕ್ ಬ್ಯಾಡ್ಜ್ ಅನ್ನು ಉಚಿತವಾಗಿ ನೀಡುತ್ತಿತ್ತು
  • ಆದರೆ ಟ್ವಿಟ್ಟರ್ ಕಂಪನಿಯನ್ನು ಎಲೋನ್ ಮಸ್ಕ್ ಖರೀದಿಸಿದ ನಂತರ, ಬಳಕೆದಾರರು ಈಗ ಪರಿಶೀಲಿಸಿದ ಬ್ಲೂ ಟಿಕ್ ಚಂದಾದಾರಿಕೆಯನ್ನು ಪಡೆಯಲು ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಯಾವಾಗ ಆರಂಭವಾಗಲಿದೆ?
ಭಾರತದಲ್ಲಿ ಯಾವಾಗ ಪ್ರಾರಂಭವಾಗಲಿದೆ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ? ಎಲೋನ್ ಮಸ್ಕ್ ಹೇಳಿದ್ದೇನು? title=
Twitter Blue Tick

Twitter Blue Tick Subscription: ಟ್ವಿಟರ್‌ನ ಬ್ಲೂ ಟಿಕ್ ಚಂದಾದಾರಿಕೆಗಾಗಿ ನೀವು ಕಾಯುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಭಾರತದಲ್ಲಿ ಬ್ಲೂ ಟಿಕ್ ಚಂದಾದಾರಿಕೆ ಸೇವೆ ಯಾವಾಗ ಆರಂಭವಾಗಲಿದೆ ಎಂಬುದಕ್ಕೆ ಸ್ವತಃ ಎಲೋನ್ ಮಸ್ಕ್ ಅವರೇ ಉತ್ತರ ನೀಡಿದ್ದಾರೆ.

ಟ್ವಿಟ್ಟರ್ ಬ್ಲೂ ಟಿಕ್ ಸೇವೆ ಭಾರತದಲ್ಲಿ ಯಾವಾಗ ಆರಂಭವಾಗಲಿದೆ?
ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಸೇವೆ ಶೀಘ್ರದಲ್ಲೇ ಭಾರತದಲ್ಲಿ ಪ್ರಾರಂಭವಾಗಲಿದೆ ಮತ್ತು ಇದು ಒಂದು ತಿಂಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಎಲೋನ್ ಮಸ್ಕ್ ಅವರ ಪ್ರಕಾರ, ನವೆಂಬರ್‌ ಅಂತ್ಯದ ವೇಳೆಗೆ ಭಾರತದಲ್ಲಿ ಈ ಸೇವೆ ಲಭ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ- ಟ್ವಿಟ್ಟರ್ ಗೆ ಪರ್ಯಾಯವಾಗುತ್ತಿರುವ Mastodon ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ಈ ಸೇವೆಯನ್ನು ಪ್ರಾರಂಭಿಸಿದ ನಂತರ, ಬಳಕೆದಾರರು ಇದಕ್ಕೆ ಚಂದಾದಾರರಾಗಬೇಕಾಗುತ್ತದೆ. ಈಗಾಗಲೇ ಪರಿಶೀಲಿಸಲ್ಪಟ್ಟವರು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ- Elon Musk: ಟ್ವಿಟರ್ ಬ್ಲೂ ಟಿಕ್ ಸಂಬಂಧಿಸಿದಂತೆ ಎಲೋನ್ ಮಸ್ಕ್ ಮಹತ್ವದ ಘೋಷಣೆ

ಟ್ವಿಟ್ಟರ್ ಬ್ಲೂ ಟಿಕ್ ಸೇವಾ ಶುಲ್ಕ:
ಈ ಹಿಂದೆ, ಟ್ವಿಟರ್ ಈ ಬ್ಲೂ ಟಿಕ್ ಬ್ಯಾಡ್ಜ್ ಅನ್ನು ಉಚಿತವಾಗಿ ನೀಡುತ್ತಿತ್ತು, ಆದರೆ ಟ್ವಿಟ್ಟರ್ ಕಂಪನಿಯನ್ನು ಎಲೋನ್ ಮಸ್ಕ್ ಖರೀದಿಸಿದ ನಂತರ, ಬಳಕೆದಾರರು ಈಗ ಪರಿಶೀಲಿಸಿದ ಬ್ಲೂ ಟಿಕ್ ಚಂದಾದಾರಿಕೆಯನ್ನು ಪಡೆಯಲು ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸೇವೆಗಾಗಿ, ಬಳಕೆದಾರರು ತಿಂಗಳಿಗೆ $ 8 ಅಂದರೆ 660 ರೂ. ಪಾವತಿಸಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ. ಅದಾಗ್ಯೂ, ಭಾರತದಲ್ಲಿ ಇದರ ಬೆಲೆ ಕಡಿಮೆ ಇರಬಹುದು. ಸುಮಾರು 450 ರೂಪಾಯಿ ಆಗಬಹುದು ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News