WhatsApp Updates: WhatsAppನಿಂದ ಶೀಘ್ರದಲ್ಲಿಯೇ ಈ ಅದ್ಭುತ ಹೊಸ ವಿಶಿಷ್ಟ ಬಿಡುಗಡೆ, ಬಳಕೆದಾರರು ಹೇಳಿದ್ದೇನು ?

WhatsApp Features - ವಾಟ್ಸಾಪ್ ತನ್ನ ಬಳಕೆದಾರರಿಗೆ ದೀರ್ಘಕಾಲದಿಂದ ತನ್ನ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ವರದಿಯೊಂದರ ಪ್ರಕಾರ,  WhatsApp ನ ಮುಂದಿನ ವೈಶಿಷ್ಟ್ಯವು ಬಳಕೆದಾರರಿಗೆ ಗ್ರೂಪ್ ಚಾಟ್‌ನ ಡಿಸ್ಪ್ಲೇ ಇಮೇಜ್ ನಲ್ಲಿ ಎಮೋಜಿ ಅಥವಾ ಸ್ಟಿಕ್ಕರ್ ಹಾಕುವ ಆಯ್ಕೆಯನ್ನು ನೀಡಬಹುದು. ಇದರ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ .

Written by - Nitin Tabib | Last Updated : Sep 20, 2021, 12:33 PM IST
  • ವಾಟ್ಸ್ ಆಪ್ ಆರಂಭಿಸಿದೆ ಹೊಸ ವೈಶಿಷ್ಟ್ಯದ ಪರೀಕ್ಷೆ.
  • ಇನ್ಮುಂದೆ ನೀವೂ ಕೂಡ ಇಮೊಜಿ ಹಾಗೂ ಸ್ಟಿಕರ್ ಗಳನ್ನು ಗ್ರೂಪ್ ಡಿಸ್ಪ್ಲೇ ಇಮೇಜ್ ಆಗಿ ಬಳಸಬಹುದು
  • ಪ್ರಸ್ತುತ ಈ ವೈಶಿಷ್ಟ್ಯವನ್ನು iOS ಬಳಕೆದಾರರ ಮೇಲೆ ಮಾತ್ರ ಪರೀಕ್ಷಿಸಲಾಗುತ್ತಿದೆ.
WhatsApp Updates: WhatsAppನಿಂದ ಶೀಘ್ರದಲ್ಲಿಯೇ ಈ ಅದ್ಭುತ ಹೊಸ ವಿಶಿಷ್ಟ ಬಿಡುಗಡೆ, ಬಳಕೆದಾರರು ಹೇಳಿದ್ದೇನು ? title=
WhatsApp Features (File Photo)

ನವದೆಹಲಿ: WhatsApp Testing - WhatsApp ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವಾದ್ಯಂತ ಬಳಕೆದಾರರನ್ನು ಹೊಂದಿರುವ ವೇದಿಕೆಯಾಗಿದೆ. ವಾಟ್ಸಾಪ್ ವಿಶ್ವದಲ್ಲಿಯೇ ಅತ್ಯಂತ ಪ್ರಚಲಿತ ಮತ್ತು ಜನಪ್ರಿಯ ಸಂದೇಶ ಅಪ್ಲಿಕೇಶನ್ ಆಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲಿಯ. . ಜನರ ಈ ಜನಪ್ರಿಯತೆ ಕಡಿಮೆಯಾಗದಂತೆ ವಾಟ್ಸಾಪ್ ತುಂಬಾ ಶ್ರಮಿಸುತ್ತಿದೆ. ಕಾಲಕಾಲಕ್ಕೆ, ಅದು ಹಲವು ಹೊಸ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ಅಪ್‌ಡೇಟ್‌ಗಳ ಮೂಲಕ ನೀಡುತ್ತಿದೆ. ಇದರಿಂದ ಜನರ ಸಂತೋಷಕ್ಕೆ ಯಾವುದೇ ಮಿತಿಯಿಲ್ಲ. ಹೊಸ ವರದಿಯ ಪ್ರಕಾರ, ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ಗ್ರೂಪ್ ಚಾಟ್‌ಗಳ ಡಿಸ್ಪ್ಲೇ ಇಮೇಜ್ ನಲ್ಲಿ  ಎಮೋಜಿ ಮತ್ತು ಸ್ಟಿಕ್ಕರ್‌ಗಳನ್ನು ಬಳಸಲು ಅನುಮತಿಸುವ ವೈಶಿಷ್ಟ್ಯವನ್ನು ಪರೀಕ್ಷಿಸಲು ವಾಟ್ಸ್ ಆಪ್ (WhatsApp Features Testing) ಆರಂಭಿಸಿದೆ. ಈ ಕುರಿತು ಇತರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಾಟ್ಸ್ ಆಪ್ ನಲ್ಲಿ ಸ್ಟಿಕರ್ ಹಾಗೂ ಇಮೊಜಿಗಳು ಡಿಸ್ಪ್ಲೇ ಇಮೇಜ್ ಆಗಲಿವೆ
WABetaInfo ನಲ್ಲಿ ಪ್ರಕಟಗೊಂಡ ಹೊಸ ವರದಿಯ ಪ್ರಕಾರ ಇತ್ತೀಚಿನ ಅಪ್‌ಡೇಟ್‌ನಲ್ಲಿ ವಾಟ್ಸಾಪ್  (WhatsApp) ಗ್ರೂಪ್ ಐಕಾನ್ ಎಡಿಟರ್ ಎಂಬ ವೈಶಿಷ್ಟ್ಯವನ್ನು ತರುತ್ತಿದೆ ಅದು ನಿಮ್ಮ ಗ್ರೂಪ್ ಚಾಟ್‌ ಗೆ ಸ್ಟಿಕ್ಕರ್ ಅಥವಾ ಎಮೋಜಿಯನ್ನು ಡಿಸ್‌ಪ್ಲೇ ಪಿಕ್ಚರ್ (ಡಿಪಿ) ಆಗಿ ಬಳಸಲು ಅನುವು ಮಾಡಿಕೊಡಲಿದೆ ಎಂದಿದೆ. ಎಮೋಜಿ ಅಥವಾ ಸ್ಟಿಕ್ಕರ್‌ಗಳೊಂದಿಗೆ ಅಂದರೆ ಬ್ಯಾಕ್ ಗ್ರೌಂಡ್ ಬಣ್ಣವನ್ನು  ಬಳಸಲು ಬಳಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತಿದೆ. ಬಳಕೆದಾರರು ಯಾವುದೇ ಆಯ್ಕೆಯನ್ನು ಆರಿಸಿದರೂ, ವಾಟ್ಸಾಪ್ ಅದಕ್ಕೆ ಅನುಗುಣವಾಗಿ ಸೂಕ್ತವಾದ ಗುಂಪಿನ ಚಿತ್ರವನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಡಿಪಿಯಾಗಿ ಅನ್ವಯಿಸಲಿದೆ.

ಈ ವೈಶಿಷ್ಟ್ಯವನ್ನು ಬಳಸುವ ವಿಧಾನ
ನೀವೂ ಕೂಡ ಒಂದು ವೇಳೆ ನಿಮ್ಮ ಗ್ರೂಪ್ ನ ಡಿಸ್ಪ್ಲೇ ಇಮೇಜ್ ಅನ್ನು ಬದಲಾಯಿಸಲು ಹೋದಾಗ, ವಾಟ್ಸಾಪ್ ನಿಮಗೆ ಮೆನುವಿನಲ್ಲಿ ಹೊಸ "ಎಮೋಜಿ ಮತ್ತು ಸ್ಟಿಕರ್" ನೀಡಲಿದೆ ಮತ್ತು ಬಳಕೆದಾರರು ಯಾವುದಾದರೊಂದನ್ನು ಆಯ್ಕೆ ಮಾಡಿ  ಅದನ್ನು ಹಿನ್ನೆಲೆ ಬಣ್ಣದೊಂದಿಗೆ ಡಿಪಿಯಾಗಿ ಹೊಂದಿಸಲು ಸೂಚನೆ ನೀಡುವ ಆಯ್ಕೆ ಸಿಗಲಿದೆ. ಪ್ರಿವ್ಯೂ ಬಳಿಕ  ನಂತರ, ಬಳಕೆದಾರರು 'Done' ಕ್ಲಿಕ್ ಮಾಡುವ ಮೂಲಕ ಗುಂಪಿನ ಡಿಪಿಯನ್ನು ಬದಲಾಯಿಸಬಹುದು.

ಇದನ್ನೂ ಓದಿ-Amazon Deal of the Day: ಇಂದು 5G Smartphones ಮೇಲೆ ಪಡೆಯಿರಿ ಬಂಪರ್ ರಿಯಾಯಿತಿ

ಯಾರಿಗೆ ಸಿಗಲಿದೆ ಈ ವೈಶಿಷ್ಟ್ಯ?
ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಪ್ರಸ್ತುತ iOS ವಾಟ್ಸಾಪ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗುವುದು ಮತ್ತು ಆಂಡ್ರಾಯ್ಡ್ ಬಳಕೆದಾರರು ಕೆಲವು ವಾರಗಳ ನಂತರ ಈ ವೈಶಿಷ್ಟ್ಯವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ  ಈ ವೈಶಿಷ್ಟ್ಯದ ಪರೀಕ್ಷೆ ಐಒಎಸ್‌ನಲ್ಲಿ ನಡೆಯುತ್ತಿದೆ ಮತ್ತು ಈ ವೈಶಿಷ್ಟ್ಯದ ಬೀಟಾ ಆವೃತ್ತಿಯ ಪರೀಕ್ಷಾ ಸ್ಲಾಟ್‌ಗಳನ್ನು ಸಹ ಭರ್ತಿ ಮಾಡಲಾಗಿದೆ.

ಇದನ್ನೂ ಓದಿ-Jio ಈ ಪ್ಲಾನ್ ರಿಚಾರ್ಜ್ ಮಾಡಿಸಿ ಪ್ರತಿದಿನ ಪಡೆಯಿರಿ 3GB ಡೇಟಾ ಜೊತೆಗೆ ಹೆಚ್ಚುವರಿ ಇಂಟರ್ನೆಟ್!

ಕಳೆದ ಕೆಲವು ದಿನಗಳಲ್ಲಿ, ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ ಮತ್ತು ಹೆಚ್ಚಿನ ಅಪ್‌ಡೇಟ್‌ಗಳನ್ನು ಬಳಕೆದಾರರು ಸ್ವಾಗತಿಸಿದ್ದಾರೆ. ಈ ಅಪ್‌ಡೇಟ್ ಮಾಡಲಾದ ವೈಶಿಷ್ಟ್ಯಗಳಲ್ಲಿ ವಾಟ್ಸ್‌ಆ್ಯಪ್ ಪಾವತಿಗಳು, ವೀಡಿಯೋ ಕರೆಗಳಿಗೆ ಸೇರುವ ಸಾಮರ್ಥ್ಯ ಮತ್ತು ವೀಕ್ಷಣೆಗಳನ್ನು ನೋಡುವಂತಹ ಹಲವು ವೈಶಿಷ್ಟ್ಯಗಳು ಶಾಮೀಲಾಗಿವೆ.

ಇದನ್ನೂ ಓದಿ-Jio Cheapest Recharge Plan: Jio ಕಂಪನಿಯ ಅತ್ಯಂತ ಅಗ್ಗದ ಬೆಲೆಯ ಈ ಪ್ಲಾನ್ ನಲ್ಲಿ Netflix-Amazon Prime ಉಚಿತ ಚಂದಾದಾರಿಕೆ ಕೂಡ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News