WhatsApp Scam Alert! WhatsApp ಬಳಕೆದಾರರೇ ಈಗಲೇ ಎಚ್ಚೆತ್ತುಕೊಂಡು ಈ ಸುದ್ದಿಯನ್ನೊಮ್ಮೆ ಓದಿ

WhatsApp Scam Alert! ಕರೋನಾ ವೈರಸ್ ವಿಶ್ವದಾದ್ಯಂತ ಹರಡಿದ ನಂತರ ಆನ್‌ಲೈನ್ ಹಗರಣಗಳು ಹೆಚ್ಚುತ್ತಿವೆ. ಸಿಕ್ಯೂರಿಟಿ ರಿಸರ್ಚರ್ ಓರ್ವರು ಹೊಸ ಹಗರಣದ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಗರಣ ಯಾವುದು? ಮತ್ತು ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು  ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Aug 14, 2021, 06:48 PM IST

    ಕೋರೋನಾ ವೈರಸ್ ವಿಶ್ವದಾದ್ಯಂತ ಹರಡಿದ ನಂತರ ಆನ್‌ಲೈನ್ ಹಗರಣಗಳು ಹೆಚ್ಚುತ್ತಿವೆ.

    ಸಿಕ್ಯೂರಿಟಿ ರಿಸರ್ಚರ್ ಓರ್ವರು ಹೊಸ ಹಗರಣದ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಈ ಹಗರಣ ಯಾವುದು? ಮತ್ತು ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

WhatsApp Scam Alert! WhatsApp ಬಳಕೆದಾರರೇ ಈಗಲೇ ಎಚ್ಚೆತ್ತುಕೊಂಡು ಈ ಸುದ್ದಿಯನ್ನೊಮ್ಮೆ ಓದಿ title=

ನವದೆಹಲಿ: WhatsApp Scam Alert! ಕರೋನಾ ವೈರಸ್ ವಿಶ್ವದಾದ್ಯಂತ ಹರಡಿದ ನಂತರ ಆನ್‌ಲೈನ್ ಹಗರಣಗಳು ಹೆಚ್ಚುತ್ತಿವೆ. ಸಿಕ್ಯೂರಿಟಿ ರಿಸರ್ಚರ್ ಓರ್ವರು ಹೊಸ ಹಗರಣದ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಗರಣ ಯಾವುದು? ಮತ್ತು ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು  ತಿಳಿದುಕೊಳ್ಳೋಣ ಬನ್ನಿ.

ವಂಚಕರು ವಾಟ್ಸ್ ಆಪ್ ಮಾಧ್ಯಮದ ಮೂಲಕ ಜನರಿಗೆ ಫೇಕ್ ಲಿಂಕ್ ಕಳುಹಿಸುತ್ತಿದ್ದಾರೆ. ಈ ಲಿಂಕ್ ಗಳಲ್ಲಿ ವಂಚಕರು (Cyber Criminals) ಬಳಕೆದಾರರಿಗೆ ಆನ್ಲೈನ್ ಆರ್ಡರ್ ಮಾಡಲು ಸೂಚನೆ ನೀಡುತ್ತಿದ್ದಾರೆ. ಹೀಗಿರುವಾಗ ಅಮಾಯಕ ಬಳಕೆದಾರರು ಈ ವಂಚನೆಗೆ ಗುರಿಯಾಗುತ್ತಿದ್ದಾರೆ ಹಾಗೂ ಬ್ಯಾಂಕ್ ನಲ್ಲಿಟ್ಟ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವೂ ಕೂಡ ಸ್ವಲ್ಪ ಜಾಣತನ ಮೆರೆದರೆ, ಇಂತಹ ಹಗರಣದಿಂದ ಪಾರಾಗಬಹುದು ಮತ್ತು ವಂಚಕರ (Cyber Fraud) ಕೈಗೆ ಯಾವುದೇ ಲಾಭ ಸಿಗುವುದಿಲ್ಲ. ಆದರೆ, ವಾಟ್ಸ್ ಆಪ್ ನಲ್ಲಿ ಬರುವ ಯಾವುದೇ ಒಂದು ಲಿಂಕ್ ಅನ್ನು ಯೋಚನೆ ಮಾಡದೆ ನೀವು ಕ್ಲಿಕ್ಕಿಸಿದರೆ, ನೀವೂ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ.

ಯಾವ ರೀತಿ ವಂಚನೆ ಎಸಗಲಾಗುತ್ತಿದೆ?
Kaspersky Lab ರಷ್ಯಾದ ಸೆಕ್ಯೂರಿಟಿ ಸಂಶೋಧಕರೊಬ್ಬರು ಈ ರೀತಿಯ ಡಿಲೆವರಿ ಸ್ಕ್ಯಾಮ್ ಕುರಿತು ವಾಟ್ಸ್ ಆಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸೈಬರ್ ದಾಳಿಕೋರರು ಆನ್ಲೈನ್ ಡಿಲೆವರಿ ಕಂಪನಿಗಳ (Online Delivery Companies) ಅಧಿಕಾರಿಯ ರೂಪದಲ್ಲಿ ಮುಂದಕ್ಕೆ ಬರುತ್ತಾರೆ. ಬಳಿಕ ಅವರು ವಾಟ್ಸ್ ಆಪ್ ಬಳಕೆದಾರರಿಗೆ ಪ್ಯಾಕೇಜ್ ವೊಂದರ ಕುರಿತು ಸೂಚನೆ ನೀಡುತ್ತಾರೆ ಮತ್ತು ಅದನ್ನು ಮನೆಯವರೆಗೆ ತಲುಪಿಸುವುದಾಗಿ ಹೇಳುತ್ತಾರೆ. ಆದರೆ, ಈ ಪ್ರಕ್ರಿಯೆ ಅಷ್ಟೊಂದು ಸುಲಭವಾಗಿಲ್ಲ. ಏಕೆಂದರೆ ಇದಕ್ಕಾಗಿ ಸೈಬರ್ ಕಳ್ಳರು ಬಳಕೆದಾರರಿಗೆ ತಾವು ಕಳುಹಿಸುವ ಲಿಂಕ್ ಮೇಲೆ ಕ್ಲಿಕ್ಕಿಸಲು ಸೂಚಿಸುತ್ತಾರೆ. ಹಣ ಪಾವತಿಯನ್ನು ಖಚಿತ ಪಡಿಸಲು ಸಣ್ಣ ಮೊತ್ತದ ಹಣವನ್ನು ವರ್ಗಾಯಿಸಲು ಕೇಳಿಕೊಳ್ಳುತ್ತಾರೆ. ವಾಟ್ಸ್ ಆಪ್ (WhatsApp) ಬಳಕೆದಾರರು ಬಂದ  ಲಿಂಕ್ ಮೇಲೆ ಕ್ಲಿಕ್ಕಿಸುತ್ತಿದ್ದಂತೆ ಅವರನ್ನು ಒಂದು ನಕಲಿ ವೆಬ್ ಸೈಟ್ ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಈ ಸಣ್ಣ ಮೊತ್ತದ ಹಣ ಪಾವತಿಸಲು ಬ್ಯಾಂಕ್ ಮಾಹಿತಿಯನ್ನು ಭರ್ತಿ ಮಾಡಲು ಸೂಚಿಸಲಾಗುತ್ತದೆ. 

ಇದನ್ನೂ ಓದಿ-Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು

ಫ್ರಾಡ್ ನಿಂದ ಬಚಾವಾಗಲು ಈ ತಪ್ಪು ಮಾಡಬೇಡಿ
ಒಂದು ವೇಳೆ ನೀವು Amazon ಅಥವಾ Flipkartನಿಂದ ಯಾವುದೇ ಒಂದು ವಸ್ತುವನ್ನು ಖರೀದಿಸಿದರೆ, ನೀವು ಏನನ್ನು ಆರ್ಡರ್ ಮಾಡಿರುವಿರಿ ಹಾಗೂ ಆ ವಸ್ತು ನಿಮಗೆ ಯಾವಾಗ ತಲುಪಲಿದೆ ಎಂಬುದರ ಮಾಹಿತಿ ನಿಮಗಿರುತ್ತದೆ. ಏಕೆಂದರೆ ನಿಮ್ಮ ಬಳಿ ಇರುವ ಆಪ್ ನಲ್ಲಿ ಅದನ್ನು ನೀವು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಪಾರ್ಸಲ್ ಎಲ್ಲಿಗೆ ತಲುಪಲಿದೆ ಎಂಬುದು ನಿಮಗೆ ತಿಳಿಯುತ್ತದೆ. ಇದಲ್ಲದೆ ನಿಮ್ಮ ಸರಕು ಎಲ್ಲಿಯವರೆಗೆ ತಲುಪಿದೆ ಎಂಬುದರ ನೋಟಿಫಿಕೆಶನ್ ಕೂಡ ನಿಮಗೆ ಸಿಗುತ್ತಿರುತ್ತದೆ. ಯಾವುದೇ ಕಂಪನೀ ಸರಕು ತಲುಪಿಸುವಿಕೆಯನ್ನು ಖಚಿತಪಡಿಸಲು ನಿಮಗೆ ಹಣ ಪಾವತಿ ಮಾಡಲು ಒತ್ತಾಯಿಸುವುದಿಲ್ಲ. ಕ್ಯಾಶ್ ಆನ್ ಡಿಲೆವರಿ ಮೋಡ್ ನಲ್ಲಿ ಮೊದಲು ನಿಮ್ಮ ಬಳಿಗೆ ಸರಕನ್ನು ತಲುಪಿಸಿ ಬಳಿಕ ನಿಮಗೆ ಹಣ ಪಾವತಿ ಮಾಡಲು ಸೂಚಿಸಲಾಗುತ್ತದೆ. ಯಾವುದೇ ಹೆಚ್ಚುವರಿ ಶುಲ್ಕವನ್ನು ನಿಮ್ಮಿಂದ ಪಡೆಯಲಾಗುವುದಿಲ್ಲ. 

ಇದನ್ನೂ ಓದಿ-Jio Cheap and Best Recharge Plans : Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್ : 98 ರೂ.ಗೆ 21GB ಡೇಟಾ, ಅನಿಯಮಿತ ಕರೆಗಳು!

ಇಂತಹ ವಾಟ್ಸ್ ಆಪ್ ಸಂದೇಶ ಹಾಗೂ ನಕಲಿ ಇ-ಮೇಲ್ ಗಳ ಬಗ್ಗೆ ಎಚ್ಚರಿಕೆವಹಿಸಲು ಸೆಕ್ಯೂರಿಟಿ ತಜ್ಞರು ಎಚ್ಚರಿಸಿದ್ದಾರೆ. ವಿಶ್ವಾಸಕ್ಕೆ ಅರ್ಹವಲ್ಲದ ಲಿಂಕ್ ಗಳ ಸೋರ್ಸ್ ಪರಿಶೀಲಿಸಲು ಮರೆಯದಿರಿ. ವೆಬ್ ಸೈಟ್ ಗಳ ಸೂಕ್ತ ವಿಳಾಸ ಇಲ್ಲದ ಲಿಂಕ್ ಗಳ ಮೇಲೆ ಎಂದಿಗೂ ಕ್ಲಿಕ್ಕಿಸಬೇಡಿ. ಇಂತಹ ಅಪಾಯಕಗಳು, ಫಿಶಿಂಗ್ ದಾಳಿಗಳಿಂದ ದೂರ ಉಳಿಯಲು ಚಾಕಚಕ್ಯತೆಯಿಂದ ಕೆಲಸ ಮಾಡಲು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ-Oppo: ಶಕ್ತಿಯುತ ಬ್ಯಾಟರಿ, ಉತ್ತಮ ಕ್ಯಾಮೆರಾದೊಂದಿಗೆ ರಹಸ್ಯವಾಗಿ ಜಬರ್ದಸ್ತ್ Smartphone ಬಿಡುಗಡೆ ಮಾಡಿದ ಒಪ್ಪೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News