WhatsApp New Feature: ಸೆಂಟ್ ಮೆಸೇಜ್ ಅನ್ನು ಎಡಿಟ್ ಮಾಡಬಹುದು

WhatsApp New Feature: ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ನೀವು ಕಳುಹಿಸಿದ ಸಂದೇಶಗಳನ್ನು ಸಹ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ಆಂಡ್ರಾಯ್ಡ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಕಂಡುಹಿಡಿಯಲಾಗಿದೆ.

Written by - Yashaswini V | Last Updated : Oct 17, 2022, 09:03 AM IST
  • ಐಒಎಸ್ 16 ಆಗಮನದೊಂದಿಗೆ, ಐಫೋನ್ ಬಳಕೆದಾರರು ಸೆಂಟ್ ಮಾಡಲಾದ ಸಂದೇಶಗಳನ್ನು ಸಹ ಎಡಿಟ್ ಮಾಡಬಹುದಾಗಿದೆ.
  • ಇದೀಗ, ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಇದೇ ರೀತಿಯ ವೈಶಿಷ್ಟ್ಯವನ್ನು ತರಲು ಮುಂದಾಗಿದೆ.
  • ಶೀಘ್ರದಲ್ಲೇ ವಾಟ್ಸಾಪ್ ಹೊಸ ವೈಶಿಷ್ಟ್ಯ ಬಿಡುಗಡೆ ಆಗಲಿದೆ
WhatsApp New Feature: ಸೆಂಟ್ ಮೆಸೇಜ್ ಅನ್ನು ಎಡಿಟ್ ಮಾಡಬಹುದು  title=
WhatsApp New Feature

WhatsApp New Feature: ಆಪಲ್ ಇತ್ತೀಚೆಗೆ ತನ್ನ iOS 16 ಆವೃತ್ತಿಯನ್ನು ಎಲ್ಲಾ ಐಫೋನ್ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಇದು ನಿಫ್ಟಿ ವೈಶಿಷ್ಟ್ಯಗಳ ಗುಂಪನ್ನು ರಚಿಸಿದೆ. ಆಗಾಗ್ಗೆ ಟೈಪ್ ಮಾಡುವ ಅಥವಾ ತಪ್ಪಾಗಿ ಸಂದೇಶಗಳನ್ನು ಕಳುಹಿಸುವವರಿಗೆ ಈ ಹೊಸ ವೈಶಿಷ್ಟ್ಯವು ಒಂದು ವರದಾನವಾಗಿದೆ. ಐಒಎಸ್ 16 ಆಗಮನದೊಂದಿಗೆ, ಐಫೋನ್ ಬಳಕೆದಾರರು ಸೆಂಟ್ ಮಾಡಲಾದ ಸಂದೇಶಗಳನ್ನು ಸಹ ಎಡಿಟ್ ಮಾಡಬಹುದಾಗಿದೆ. ಇದೀಗ, ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಇದೇ ರೀತಿಯ ವೈಶಿಷ್ಟ್ಯವನ್ನು ತರಲು ಮುಂದಾಗಿದೆ. 

ವಾಟ್ಸಾಪ್ ನ ಅಪ್‌ಡೇಟ್ ಟ್ರ್ಯಾಕರ್ Wabetainfo, ವಾಟ್ಸಾಪ್ ಇದೀಗ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಭವಿಷ್ಯದ ನವೀಕರಣದಲ್ಲಿ ಸಂದೇಶಗಳನ್ನು ಸಂಪಾದಿಸುವ ಎಂದರೆ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವ ಸಾಮರ್ಥ್ಯವನ್ನು ತರಲು ಕಾರ್ಯನಿರ್ವಹಿಸುತ್ತಿದೆ ಎಂದು ದೃಢಪಡಿಸಿದೆ. ಇತ್ತೀಚಿನ ಆಂಡ್ರಾಯ್ಡ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ಕಂಡುಹಿಡಿಯಲಾಗಿದೆ.

ಇದನ್ನೂ ಓದಿ- Smart LED TV 32 Inch ಕೇವಲ ರೂ.999ಕ್ಕೆ , ತ್ವರೆ ಮಾಡಿ ಖರೀದಿಸಲು ಇಂದೇ ಕೊನೆಯ ದಿನ

WabetaInfo ಮಾಹಿತಿ :
WabetaInfo ಬ್ಲಾಗ್‌ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಯ ಪ್ರಕಾರ, 'ದೀರ್ಘಕಾಲದಿಂದ ಎಡಿಟ್ ವೈಶಿಷ್ಟ್ಯದ ಕುರಿತು ಸುದ್ದಿ ಇತ್ತು, ಆದರೆ ಈಗ ವಾಟ್ಸಾಪ್ ಹೊಸ ವೈಶಿಷ್ಟ್ಯವು ಶೀಘ್ರದಲ್ಲೇ ಲಭ್ಯವಾಗಲಿದೆ. ಹೊಸ ವೈಶಿಷ್ಟ್ಯವು ಕಳುಹಿಸಿರುವ ಸಂದೇಶವನ್ನು ಎಡಿಟ್ ಮಾಡಲು ನಮಗೆ ಅನುಮತಿಸುತ್ತದೆ. ವಾಟ್ಸಾಪ್ ಇನ್ನೂ ಅಪ್ಲಿಕೇಶನ್‌ನ ಭವಿಷ್ಯದ ಬಿಡುಗಡೆಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಒಂದು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ವಾಟ್ಸಾಪ್ ಟ್ರ್ಯಾಕರ್, ಅದು ವಾಟ್ಸಾಪ್ ಹೊಸ ವೀಕ್ಷಣೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅದು iOS 16 ನಂತೆ ಮೂಲ ಕಳುಹಿಸಿದ ಸಂದೇಶವನ್ನು ಬದಲಿಸುವ ಪಠ್ಯವನ್ನು ನಮೂದಿಸಲು ಜನರಿಗೆ ಅನುಮತಿಸುತ್ತದೆ ಎಂದು ತೋರಿಸುತ್ತದೆ. ಇದನ್ನು iMessage ವೈಶಿಷ್ಟ್ಯದೊಂದಿಗೆ ನವೀಕರಿಸಲಾಗಿದೆ. ಆದಾಗ್ಯೂ, ವಾಟ್ಸಾಪ್ ಈ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿರುವುದರಿಂದ ಇದು ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ. 

ಇದನ್ನೂ ಓದಿ- Light Bill Fraud: ನೀವೂ ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೀರಾ? ಈ ಸುದ್ದಿ ಓದಿ

ಈ ಹೊಸ ವೈಶಿಷ್ಟ್ಯದಲ್ಲಿ ಎಡಿಟ್ ಸಂಪಾದನೆ ಇತಿಹಾಸವು ಲಭ್ಯವಿರುವುದಿಲ್ಲ, ಆದರೆ ಈ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿರುವುದರಿಂದ, ಭವಿಷ್ಯದಲ್ಲಿ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಮೊದಲು ಇದನ್ನು ಕಾರ್ಯಗತಗೊಳಿಸಬಹುದು ಎನ್ನಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News