WhatsApp ಹೊಸ ವೈಶಿಷ್ಟ್ಯ: ಮೊಬೈಲ್ ಇಲ್ಲದೆ ಡೆಸ್ಕ್‌ಟಾಪ್‌ನಲ್ಲಿ Login ಆಗಬಹುದು

ಮುಂಬರುವ ಸಮಯದಲ್ಲಿ, ವಾಟ್ಸಾಪ್‌ನಲ್ಲಿ ಹೊಸ ವೈಶಿಷ್ಟ್ಯವು ಬರಲಿದೆ, ಇದರಲ್ಲಿ ನೀವು ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಸಲು ಮೊಬೈಲ್ ಅನ್ನು ಬಳಸಬೇಕಾಗಿಲ್ಲ.  

Written by - Yashaswini V | Last Updated : May 11, 2021, 12:00 PM IST
  • ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ವೈಶಿಷ್ಟ್ಯ
  • ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಕ್‌ಸ್ಟಾಪ್‌ನಲ್ಲಿ ವಾಟ್ಸಾಪ್ ಬಳಕೆಗಾಗಿ ಕ್ಯೂಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಅಗತ್ಯವು ಈಗ ಹಳೇ ವಿಷಯವಾಗಿದೆ
  • ಇದರಲ್ಲಿ ನೀವು ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಸಲು ಮೊಬೈಲ್ ಬಳಸುವ ಅಗತ್ಯವಿರುವುದಿಲ್ಲ
WhatsApp ಹೊಸ ವೈಶಿಷ್ಟ್ಯ: ಮೊಬೈಲ್ ಇಲ್ಲದೆ ಡೆಸ್ಕ್‌ಟಾಪ್‌ನಲ್ಲಿ  Login ಆಗಬಹುದು title=
Whatsapp on Desktop

ನವದೆಹಲಿ: ಮುಂಬರುವ ಸಮಯದಲ್ಲಿ, ವಾಟ್ಸಾಪ್‌ನಲ್ಲಿ ಹೊಸ ವೈಶಿಷ್ಟ್ಯ ಬರಲಿದ್ದು, ಇದರಲ್ಲಿ ನೀವು ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಬಳಸಲು ಮೊಬೈಲ್ ಬಳಸುವ ಅಗತ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಟೆಲಿಗ್ರಾಮ್, ಫೇಸ್‌ಬುಕ್ ಸಿಗ್ನಲ್ ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ಫೋನ್ ಸಹಾಯವಿಲ್ಲದೆ ಬಳಕೆದಾರರನ್ನು ನೇರವಾಗಿ ಡೆಸ್ಕ್‌ಟಾಪ್‌ನಲ್ಲಿ ಬಳಸುವ ಸೌಲಭ್ಯವನ್ನು ನೀಡುತ್ತದೆ.

ಹ್ಯಾಕರಿಡ್‌ನ ವರದಿಯ ಪ್ರಕಾರ, ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಕ್‌ಸ್ಟಾಪ್‌ನಲ್ಲಿ ವಾಟ್ಸಾಪ್ ಬಳಕೆಗಾಗಿ ಕ್ಯೂಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಅಗತ್ಯವು ಈಗ ಹಳೇ ವಿಷಯವಾಗಿದೆ. ವಾಟ್ಸಾಪ್ (Whatsapp) ಹೊಸ ಬೀಟಾ ಪರೀಕ್ಷೆಯ ನಂತರ, ಬಳಕೆದಾರರು ಅದನ್ನು ನೇರವಾಗಿ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಈ ಪರಿಸ್ಥಿತಿಯಲ್ಲಿ ಒಂದು ಸಮಯದಲ್ಲಿ ಕೇವಲ ನಾಲ್ಕು ಸಾಧನಗಳನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ- Oppo ಸ್ಮಾರ್ಟ್‌ಫೋನ್‌ಗಳಿಗೆ 80% ವರೆಗೆ ರಿಯಾಯಿತಿ, 1 ರೂಪಾಯಿ ಡೀಲ್ ಕೂಡ ವಿಶೇಷ

ಬಳಕೆದಾರರು ಈ ವೈಶಿಷ್ಟ್ಯಕ್ಕಾಗಿ ದೀರ್ಘಕಾಲದಿಂದ ನಿರೀಕ್ಷೆ ಹೊಂದಿದ್ದರು. ಈ ವೈಶಿಷ್ಟ್ಯಗಳ ಪರಿಚಯದ ನಂತರ, ವಾಟ್ಸಾಪ್ ತನ್ನ ಪ್ರತಿಸ್ಪರ್ಧಿ ಟೆಲಿಗ್ರಾಮ್, ಫೇಸ್‌ಬುಕ್ (Facebook), ಸಿಗ್ನಲ್, ಸ್ಕೈಪ್ ಗಿಂತ ಬಲವಾಗಿರುತ್ತದೆ. ಆದರೆ, ಫೋನ್ ಇಲ್ಲದೆ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಬಳಸುವುದು ಹೇಗೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದು ಮಾತ್ರವಲ್ಲ, ಮೊಬೈಲ್ ಫೋನ್ ಕಳ್ಳತನದ ಸಂದರ್ಭದಲ್ಲಿಯೂ ಸಹ ನೀವು ವಾಟ್ಸಾಪ್ನ ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಅನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ- ಜೂನ್ ಒಂದರಿಂದ ಗೂಗಲ್ ನ ಈ ಸೇವೆಗೆ ಹಣ ಪಾವತಿಸಬೇಕಾಗುತ್ತದೆ, ಈ ಮುಖ್ಯ ವಿಚಾರಗಳು ತಿಳಿದಿರಲಿ

ಮೇಲೆ ತಿಳಿಸಿದ ವೈಶಿಷ್ಟ್ಯವು ವಾಟ್ಸಾಪ್ನ ಮಲ್ಟಿ-ಡಿವೈಸ್ ಫೀಚರ್ನ ಭಾಗವಾಗಿರುತ್ತದೆ ಎಂದು ನಂಬಲಾಗಿದೆ. ಬಹು-ಸಾಧನ ವೈಶಿಷ್ಟ್ಯದ ಮೂಲಕ, ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳಲ್ಲಿ ಒಂದೇ ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ. ವಿಶೇಷ ವಿಷಯವೆಂದರೆ ಮುಖ್ಯ ಸಾಧನಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವುದಿಲ್ಲ. ಈ ವೈಶಿಷ್ಟ್ಯವನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News