ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards

WhatsApp Context Cards: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದು, ಇದರ ಸಹಾಯದಿಂದ ಗ್ರಾಹಕರು ವಂಚಕರಿಂದ ದೂರ ಉಳಿಯಬಹುದು ಎನ್ನಲಾಗಿದೆ. ಯಾವುದೀ ವೈಶಿಷ್ಟ್ಯ? ಇದರ ಪ್ರಯೋಜನವೇನು ಎಂದು ತಿಳಿಯೋಣ... 

Written by - Yashaswini V | Last Updated : Jul 15, 2024, 01:35 PM IST
  • ಮೆಟಾದ ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ತನ್ನ ಅಧಿಕೃತ ವಾಟ್ಸಾಪ್ ಚಾನೆಲ್ ಮೂಲಕ ಈ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
  • ಇದರಲ್ಲಿ ವಾಟ್ಸಾಪ್ ಬಳಕೆದಾರರ್ಗಾಗಿ ಹೊಸ ಗ್ರೂಪ್ ಸೇಫ್ಟಿ ಫೀಚರ್ ಅನ್ನು ಪರಿಚಯಿಸಲಾಗಿದೆ.
  • ಈ ವೈಶಿಷ್ಟ್ಯವು ಬಳಕೆದಾರರಿಗೆ ಇದ್ದಕ್ಕಿದ್ದಂತೆ ಆಹ್ವಾನವನ್ನು ಸ್ವೀಕರಿಸಿದ ಗುಂಪಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards title=

WhatsApp Context Cards:  ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ  ಹೊಸ ಕಾಂಟೆಕ್ಸ್ಟ್ ಕಾರ್ಡ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಬಳಕೆದಾರರಿಗೆ ಅಜ್ಞಾತ ವಾಟ್ಸಾಪ್ ಗುಂಪುಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಈ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ಅಪರಿಚಿತ  ವಾಟ್ಸಾಪ್ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ಸಹ ನೀಡುತ್ತದೆ. ಹಾಗಿದ್ದರೆ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ (WhatsApp Context Cards) ಹೇಗೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಏನು ಪ್ರಯೋಜನ ಎಂದು ತಿಳಿಯಿರಿ. 

ಏನಿದು ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್: 
ವಾಟ್ಸಾಪ್ ಬಳಕೆದಾರರಿಗೆ ಆಗಾಗ್ಗೆ, ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಂದ (WhatsApp Group) ಚಾಟ್ ಆಮಂತ್ರಣ ಬರುವುದನ್ನು ಗಮನಿಸಿರಬಹುದು. ಈ ವಾಟ್ಸಾಪ್ ಗ್ರೂಪ್‌ಗಳನ್ನು ಯಾರು ರಚಿಸಿರಬಹುದು? ಈ ಗ್ರೂಪ್ ವಂಚನೆಗೆ ಸಂಬಂಧಿಸಿದ್ದೇ? ಇಲ್ಲವೇ? ಎಂಬ ಬಗ್ಗೆ ಈವರೆಗೆ ಯಾವುದೇ ನಿಖರ ಮಾಹಿತಿಗಳು ಲಭ್ಯವಿಟುತ್ತಿರಲಿಲ್ಲ. ಇದೀಗ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ನಿಮಗೆ ಈ ಬಗ್ಗೆ ಎಚ್ಚರಿಕೆ ನೀಡುತ್ತದೆ. 

ಇದನ್ನೂ ಓದಿ- Online Fraud ಆದರೆ ಸಿಗುವುದು 10 ಸಾವಿರ ರೂಪಾಯಿ ! ಏನು ಹೇಳುತ್ತದೆ ಈ ಯೋಜನೆ ?

ಮೆಟಾದ  ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ತನ್ನ ಅಧಿಕೃತ ವಾಟ್ಸಾಪ್ ಚಾನೆಲ್ ಮೂಲಕ ಈ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ (WhatsApp Context Card) ವೈಶಿಷ್ಟ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಾಟ್ಸಾಪ್ ಬಳಕೆದಾರರ್ಗಾಗಿ ಹೊಸ ಗ್ರೂಪ್ ಸೇಫ್ಟಿ ಫೀಚರ್ ಅನ್ನು ಪರಿಚಯಿಸಲಾಗಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಇದ್ದಕ್ಕಿದ್ದಂತೆ ಆಹ್ವಾನವನ್ನು ಸ್ವೀಕರಿಸಿದ ಗುಂಪಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯದ ಮೂಲಕ ಬಳಕೆದಾರರು ತಾವು ಗುಂಪಿಗೆ ಸೇರಲು ಬಯಸುವಿರೋ ಅಥವಾ ನಿರ್ಗಮಿಸಲು ಬಯಸುತ್ತಾರೆಯೇ ಎಂಬುದನ್ನೂ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- WhatsApp: ಗ್ರೂಪ್ ಚಾಟ್‌ಗಳಿಗಾಗಿ ಹೊಸ ಈವೆಂಟ್‌ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್

ಇದರ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಇದರಲ್ಲಿ ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನೂ ತೋರಿಸಲಾಗಿದೆ. ಇದರಲ್ಲಿ ವಾಟ್ಸಾಪ್ ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯವು ನಿಮಗೆ ಗ್ರೂಪ್ ಆಹ್ವಾನವನ್ನು ನೀಡಿದ ವ್ಯಕ್ತಿ ನಿಮ್ಮ ಸಂಪರ್ಕದ ಪಟ್ಟಿಯಲ್ಲಿರುವ ವ್ಯಕ್ತಿಯೇ ಅಥವಾ ಬೇರೆ ವ್ಯಕ್ತಿಯೇ ಎಂಬುದನ್ನೂ ಸಹ ಬಳಕೆದಾರರಿಗೆ ತಿಳಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News