WhatsApp ನಲ್ಲಿ ನಿಮಗೂ ಸ್ಟೇಟಸ್ ಬಳಸುವ ಅಥವಾ ನೋಡುವ ಅಭ್ಯಾಸವಿದೆಯಾ? ಹಾಗಾದರೆ ಈ ಸಂತಸದ ಸುದ್ದಿ ನಿಮಗಾಗಿ

WhatsApp New Feature - ವಾಟ್ಸ್ ಆಪ್ ನಲ್ಲಿ ನಿಮಗೂ ಕೂಡ ಸ್ಟೇಟಸ್ ಹಾಕಿಕೊಳ್ಳುವ ಅಭ್ಯಾಸವಿದ್ದರೆ ಈ ಸಂತಸದ ಸುದ್ದಿ ನಿಮಗಾಗಿ. ಹೌದು, ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಕುಟುಂಬ ಹಾಗೂ ಸ್ನೇಹಿತರ ಸ್ಟೇಟಸ್ ನೋಡುವುದು ಹಾಗೂ ಟ್ರ್ಯಾಕ್ ಮಾಡುವುದು ಮತ್ತಷ್ಟು ಸುಲಭವಾಗಲಿದೆ.  

Written by - Nitin Tabib | Last Updated : Aug 20, 2022, 08:47 PM IST
  • ನಿಮಗೂ ಕೂಡ WhatsApp ನಲ್ಲಿ ಸ್ಟೇಟಸ್ ಅನ್ವಯಿಸಲು ಇಷ್ಟವಾಗುತ್ತಿದ್ದರೆ,
  • ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ವಾಸ್ತವದಲ್ಲಿ,
  • WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ.
WhatsApp ನಲ್ಲಿ ನಿಮಗೂ ಸ್ಟೇಟಸ್ ಬಳಸುವ ಅಥವಾ ನೋಡುವ ಅಭ್ಯಾಸವಿದೆಯಾ? ಹಾಗಾದರೆ ಈ ಸಂತಸದ ಸುದ್ದಿ ನಿಮಗಾಗಿ title=
WhatsApp Status Good News

WhatsApp Latest Feature - ನಿಮಗೂ ಕೂಡ  WhatsApp ನಲ್ಲಿ ಸ್ಟೇಟಸ್ ಅನ್ವಯಿಸಲು ಇಷ್ಟವಾಗುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ವಾಸ್ತವದಲ್ಲಿ, WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ.ಈ ವೈಶಿಷ್ಟ್ಯ ಬಳಕೆದಾರರಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರ ಸ್ಥಿತಿಯನ್ನು ವೀಕ್ಷಿಸಲು ಅಥವಾ ಟ್ರ್ಯಾಕ್ ಮಾಡಲು ಮತ್ತಷ್ಟು ಅನುವುಮಾಡಿಕೊಡಲಿದೆ. ವರದಿಯ ಪ್ರಕಾರ, WhatsApp ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ, ಇತು ಚಾಟ್ ಬಾಕ್ಸ್ ನಲ್ಲಿ ಬಳಕೆದಾರರ ಸ್ಥಿತಿ ನವೀಕರಣಗಳನ್ನು ತೋರಿಸಲಿದೆ. ಇದುವರೆಗೆ ಬಳಕೆದಾರರು ಒಂದೇ ಮತ್ತು ಡಬಲ್ ಟಿಕ್‌ಗಳೊಂದಿಗೆ ಸಂದೇಶ ವಿತರಣಾ ಸ್ಥಿತಿಯನ್ನು ಮತ್ತು WhatsApp ಚಾಟ್ ಪಟ್ಟಿಯಲ್ಲಿ ಸಂಪರ್ಕದೊಂದಿಗೆ ಹಂಚಿಕೊಂಡ ಕೊನೆಯ ಸಂದೇಶವನ್ನು ಮಾತ್ರ ನೋಡಲು ಸಾಧ್ಯವಾಗುತ್ತಿತ್ತು.  ಇದಲ್ಲದೇ, ಸ್ವೀಕರಿಸುವವರು ಕಳುಹಿಸಿದ ಸಂದೇಶವನ್ನು ಓದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಮೆಸೇಜಿಂಗ್ ಅಪ್ಲಿಕೇಶನ್ ತೋರಿಸುತ್ತದೆ. ಈ ಎಲ್ಲಾ ಮಾಹಿತಿಯು ಸಂಪರ್ಕ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತವೆ. WhatsApp ನ ಹೊಸ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ  WABetaInfo ತನ್ನ ವರದಿಯಲ್ಲಿ ಕಂಪನಿಯು ಇದನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ವರದಿ ಮಾಡಿದೆ.

ಈ ರೀತಿ ಕಾರ್ಯನಿರ್ವಹಿಸಲಿದೆ ಹೊಸ ವೈಶಿಷ್ಟ್ಯ
ಬ್ಲಾಗ್ ಸೈಟ್ ಹಂಚಿಕೊಂಡಿರುವ ವೈಶಿಷ್ಟ್ಯದ ಸ್ಕ್ರೀನ್ ಶಾಟ್ ಪ್ರಕಾರ, ವೈಶಿಷ್ಟ್ಯವು ಅಪ್ಲಿಕೇಶನ್‌ಗೆ ಬಂದಾಗ, WhatsApp ಬಳಕೆದಾರರು ಕೊನೆಯದಾಗಿ ಹಂಚಿಕೊಂಡ ಸಂದೇಶದ ಬದಲಿಗೆ ಸಂಪರ್ಕದ ಹೆಸರಿನೊಂದಿಗೆ ಸ್ಟೇಟಸ್ ಅಪ್ಡೇಟ್ ಅನ್ನು ಕೂಡ ಗಮನಿಸಬಹುದು. ಬ್ಲಾಗ್ ಸೈಟ್ ಪ್ರಕಾರ "ಯಾವುದೇ ಒಂದು ಸಂಪರ್ಕವು ಹೊಸ ಸ್ಟೇಟಸ್ ಅಪ್ಡೇಟ್  ಅಪ್‌ಲೋಡ್ ಮಾಡಿದಾಗ, ಅದು ಚಾಟ್ ಬಾಕ್ಸ್ ನಲ್ಲಿಯೂ ಸಹ ಗೋಚರಿಸಲಿದೆ. ಸ್ಥಿತಿ ನವೀಕರಣವನ್ನು ವೀಕ್ಷಿಸಲು ನೀವು ಕೇವಲ ಅವರ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ಕಿಸಿ ಅದನ್ನು ವೀಕ್ಷಿಸಬಹುದು" ಎನ್ನಲಾಗಿದೆ. 

ಇದನ್ನೂ ಓದಿ-Smartphone Tips: ನಿಮ್ಮ ಸ್ಮಾರ್ಟ್ ಫೋನಗೂ ವೈರಸ್ ಸೇರಿಕೊಂಡಿದೆಯಾ? ಈ ಸುಲಭ ವಿಧಾನದಿಂದ ಪತ್ತೆಹಚ್ಚಿ

ಹಳೆ ಸೆಟ್ಟಿಂಗ್ ಅನ್ನು ಕೂಡ ನೀವು ಪುನಃ ಅಳವಡಿಸಬಹುದು
ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಅಪ್ಡೇಟ್ ಹಂಚಿಕೊಳ್ಳುವವರಿಗೆ ಈ ಹೊಸ ವೈಶಿಷ್ಟ್ಯ ತುಂಬಾ ಆಕರ್ಷಕವಾಗಿದೆ. ಆದರೆ, ಸ್ಟೇಟಸ್ ಅಪ್ಡೇಟ್ ಮಾಡಲು ಅಥವಾ ನೋಡಲು ಇಷ್ಟಪಡದೆ ಇರುವವರು ತಮ್ಮ ಹಳೆ ಸೆಟ್ಟಿಂಗ್ ಗೆ ಮರಳುವ ಆಯ್ಕೆ ಕೂಡ ಇರಲಿದೆ. ಇದಕ್ಕಾಗಿ ನೀವು ಕೇವಲ 'ಆಲ್ ಸ್ಟೇಟಸ್ ಅಪ್ಡೇಟ್' ಅನ್ನು ಆಫ್ ಮಾಡಬೇಕು. 

ಇದನ್ನೂ ಓದಿ-Amazon ನಲ್ಲಿ ದಿನಕ್ಕೆ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸುವ ಸುವರ್ಣಾವಕಾಶ

ಈ ವೈಶಿಷ್ಟ್ಯ ಅಂಡ್ರಾಯ್ಡ್ ವಾಟ್ಸ್ ಆಪ್ ಬೀಟಾನಲ್ಲಿ ಲಭ್ಯವಿದೆ
ಈ ವೈಶಿಷ್ಟ್ಯವನ್ನು ಮೊಟ್ಟಮೊದಲ ಬಾರಿಗೆ ಈ ವರ್ಷದ ಆರಂಭದಲ್ಲಿ ವರದಿ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ವಾಟ್ಸ್ ಆಪ್ ಇದೀಗ ಕೆಲ ಆಯ್ದ ಬೀಟಾ ಬಳಕೆದಾರರಿಗಾಗಿ ಈ ವೈಶಿಷ್ಟವನ್ನು ರೊಲ್ ಔಟ್ ಮಾಡಲು ಆರಂಭಿಸಿದೆ. ಈ ವೈಶಿಷ್ಟ್ಯ ಅಂಡ್ರಾಯ್ಡ್ ವಾಟ್ಸ್ ಆಪ್ ವರ್ಜನ್ 2.22.18.17 ನಲ್ಲಿ ಲಭ್ಯವಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಐಓಎಸ್ ಬಳಕೆದಾರರಿಗೂ ಕೂಡ ಶೀಘ್ರದಲ್ಲಿಯೇ ಈ ವೈಶಿಷ್ಟ್ಯ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News