WhatsApp Hacks: ವಾಟ್ಸ್ ಆಪ್ ವೇದಿಕೆಯಲ್ಲಿ ಲಾಕ್ ಮಾಡಲಾದ ಚಾಟ್ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು!

WhatsApp Hacks: ಸಾಮಾನ್ಯವಾಗಿ WhatsApp ನಲ್ಲಿ ಲಾಕ್ ಮಾಡಲಾಗಿರುವ ಚಾಟ್‌ ಫೋಲ್ಡರ್ ಗಳನ್ನು ಪತ್ತೆಹಚ್ಚುವುದು ತುಂಬಾ ಸುಲಭವಾಗಿದೆ.  ಇದಕ್ಕಾಗಿ, WhatsApp ನಲ್ಲಿನ ಸ್ಕ್ರೀನ್ ಅನ್ನು ಮೇಲಕ್ಕೆ ಸ್ಕ್ರಾಲ್ ಮಾಡಬೇಕಾಗುತ್ತದೆ ಮತ್ತು ಲಾಕ್ ಆಗಿರುವ ಚಾಟ್ ಫೋಲ್ಡರ್ ಗಳು ಕಾಣಿಸಿಕೊಳ್ಳುತ್ತದೆ. ಈ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ (Technology News In Kannada)  

Written by - Nitin Tabib | Last Updated : Mar 12, 2024, 10:36 PM IST
  • WhatsApp ತನ್ನ ಬಳಕೆದಾರರಿಗೆ ಚಾಟ್ ಗಳನ್ನು ಲಾಕ್ ಮಾಡುವ ವೈಶಿಷ್ಟ್ಯವನ್ನು ಕೂಡ ಒದಗಿಸುತ್ತದೆ.
  • ಇದರ ಸಹಾಯದಿಂದ ಜನರು ತಮ್ಮ ಖಾಸಗಿ ಚಾಟ್‌ಗಳನ್ನು ಲಾಕ್ ಮಾಡಬಹುದು ಮತ್ತು ಮರೆಮಾಚಬಹುದು.
  • ಈ ವೈಶಿಷ್ಟ್ಯದ ಸಹಾಯದಿಂದ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬೇರೆಯವರು ಬಳಸಿದರೆ, ಅವರು ನಿಮ್ಮ ಖಾಸಗಿ ಚಾಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ
WhatsApp Hacks: ವಾಟ್ಸ್ ಆಪ್ ವೇದಿಕೆಯಲ್ಲಿ ಲಾಕ್ ಮಾಡಲಾದ ಚಾಟ್ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು! title=

WhatsApp Tips: ವಿಶ್ವದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ರವಾನಿಸುವ ಆಪ್ ಅಂದರೆ ಅದು ವಾಟ್ಸ್ ಆಪ್. ವಾಟ್ಸ್ ಆಪ್ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ. ಈ ವೇದಿಕೆಯನ್ನು ಬಳಸಿಕೊಂಡು, ಜನರು ತಮ್ಮ ಪ್ರಿಯಪಾತ್ರರು, ಸ್ನೇಹಿತರು, ಬಂಧು ಬಳಗದ ಜನರ ಜೊತೆಗೆ ಸಂವಹನ ನಡೆಸಬಹುದು. ಆಡಿಯೋ-ವಿಡಿಯೋ ಕರೆಗಳನ್ನು ಮಾಡಬಹುದು, ಆಡಿಯೋ-ವೀಡಿಯೋ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ಈ ಅಪ್ಲಿಕೇಶನ್ ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಿಶ್ವದ ಪ್ರತಿಯೊಂದು ದೇಶದಲ್ಲಿ ಇದು ಬಳಕೆದಾರರನ್ನು ಹೊಂದಿದೆ ಎಂಬುದರ ಮೇಲೆ ಇದರ ಜನಪ್ರಿಯತೆಯನ್ನು ನೀವು ಅಳೆಯಬಹುದು. ವಾಟ್ಸಾಪ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಮತ್ತು ಜನರಿಗೂ ಕೂಡ ಅವು ತುಂಬಾ ಉಪಯುಕ್ತ ಸಾಬೀತ್ತಾಗುತ್ತವೆ. (Technology News In Kannada)

WhatsApp ತನ್ನ ಬಳಕೆದಾರರಿಗೆ ಚಾಟ್ ಗಳನ್ನು ಲಾಕ್ ಮಾಡುವ ವೈಶಿಷ್ಟ್ಯವನ್ನು ಕೂಡ ಒದಗಿಸುತ್ತದೆ. ಇದರ ಸಹಾಯದಿಂದ ಜನರು ತಮ್ಮ ಖಾಸಗಿ ಚಾಟ್‌ಗಳನ್ನು ಲಾಕ್ ಮಾಡಬಹುದು ಮತ್ತು ಮರೆಮಾಚಬಹುದು. ಈ ವೈಶಿಷ್ಟ್ಯದ ಸಹಾಯದಿಂದ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬೇರೆಯವರು ಬಳಸಿದರೆ, ಅವರು ನಿಮ್ಮ ಖಾಸಗಿ ಚಾಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ, WhatsApp ನಲ್ಲಿ ಲಾಕ್ ಆಗಿರುವ ಚಾಟ್‌ಗಳ ಫೋಲ್ಡರ್ ಅನ್ನು ಪತ್ತೆಹಚ್ಚುವುದು ತುಂಬಾ ಸುಲಭ. ಇದಕ್ಕಾಗಿ, WhatsApp ನಲ್ಲಿನ ಸ್ಕ್ರೀನ್ ಅನ್ನು  ಮೇಲಕ್ಕೆ ಸ್ಕ್ರಾಲ್ ಮಾಡಬೇಕಾಗುತ್ತದೆ ಮತ್ತು ಲಾಕ್ ಆಗಿರುವ ಚಾಟ್ ಫೋಲ್ಡರ್ ನಿಮಗೆ ಕಾಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸ್ಮಾರ್ಟ್‌ಫೋನ್‌ನಲ್ಲಿ ಚಾಟ್‌ಗಳನ್ನು ಲಾಕ್ ಮಾಡಿದ್ದೀರಿ ಎಂಬುದು ಬೇರೆಯವರಿಗೆ ತಿಳಿದುಹೋಗುತ್ತದೆ.

ಆದರೆ, ನೀವು ಸ್ಮಾರ್ಟ್‌ಫೋನ್‌ನಲ್ಲಿ ಲಾಕ್ ಆಗಿರುವ ಚಾಟ್ ಫೋಲ್ಡರ್ ಅನ್ನು ಪಾಸ್‌ವರ್ಡ್‌ನೊಂದಿಗೆ ಮರೆಮಾಚಬಹುದು. ಇದು ತುಂಬಾ ಸುಲಭ ಮತ್ತು ನೀವು ಚಾಟ್‌ಗಳನ್ನು ಲಾಕ್ ಮಾಡಿದ್ದೀರಿ ಎಂಬುದು  ಯಾರಿಗೂ ಗೊತ್ತಾಗುವುದಿಲ್ಲ. ಬನ್ನಿ ಅದನ್ನು ಹೇಗೆ ಮಾಡಬೇಕು ತಿಳಿದುಕೊಳ್ಳೋಣ, (How to lock WhatsApp chat with password)

ಇದನ್ನೂ ಓದಿ-Aadhaar Card ವಂಚನೆಯಿಂದ ಪಾರಾಗಲು ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಐದು ಸಂಗತಿಗಳು!

ಲಾಕ್ ಮಾಡಲಾದ ಚಾಟ್ ಫೋಲ್ಡರ್ ಅನ್ನು ಮರೆಮಾಚುವುದು ಹೇಗೆ? (How to unlock WhatsApp Chat Lock on Android)
1. ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅನ್ನು ತೆರೆಯಿರಿ.
2. ಇದರ ನಂತರ, ಯಾವುದೇ ಚಾಟ್ ಅನ್ನು ಲಾಕ್ ಮಾಡಿ.
3. ಬಳಿಕ  ಲಾಕ್ ಆಗಿರುವ ಚಾಟ್ ಫೋಲ್ಡರ್ ತೆರೆಯಿರಿ.
4. ಈಗ ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
5. ಇದರ ಬಳಿಕ Chat lock settings ಆಯ್ಕೆಯನ್ನು ಆಯ್ದುಕೊಳ್ಳಿ.
6. ಇಲ್ಲಿ ಸೀಕ್ರೆಟ್ ಕೋಡ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಇದನ್ನೂ ಓದಿ-Xstream Air Fiber ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ Airtel

7. ಇದರ ನಂತರ ನೀವು ರಹಸ್ಯ ಕೋಡ್ ಅನ್ನು ರಚಿಸಬೇಕು.
8. ಈಗ ನೆಕ್ಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಖಚಿತಪಡಿಸಲು ಕೋಡ್ ಅನ್ನು ಮತ್ತೆ ನಮೂದಿಸಿ.
9. ಬಳಿಕ ಪುನಃ ಹೈಡ್ ಲಾಕ್ದ್ ಚಾಟ್ ಆಯ್ಕೆಯನ್ನು ಆನ್ ಮಾಡಿ.
10. ಈಗ ಲಾಕ್ ಆಗಿರುವ ಚಾಟ್ ಫೋಲ್ಡರ್ ಹೈಡ್ ಆಗಿರುತ್ತದೆ.
11. ಲಾಕ್ ಆಗಿರುವ ಚಾಟ್ ಫೋಲ್ಡರ್ ತೆರೆಯಲು ಸರ್ಜ್ ಬಾರ್‌ನಲ್ಲಿ ನಿಮ್ಮ ರಹಸ್ಯ ಕೋಡ್ ಅನ್ನು ನಮೂದಿಸಿ.
12. ಇದರ ನಂತರ ನೀವು ಲಾಕ್ ಮಾಡಿದ ಚಾಟ್ ಫೋಲ್ಡರ್ ಅನ್ನು ನೋಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News