ಗೌಡರ ಗದ್ದಲ :ಲೋಕಸಭೆ ನಂತರವೂ ಮುಂದುವರೆಯುತ್ತಾ H D ಕುಟುಂಬ vs D K ಬ್ರದರ್ಸ್ ಕದನ?

DK Brothers vs HD Family: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ  ಡಿಕೆ ಬ್ರದರ್ಸ್ Vs ದೇವೇಗೌಡರ ಕುಟುಂಬ ಎಂಬ ವಾತಾವರಣ ಇದ್ದು ಹಳೆ ಮೈಸೂರು ರಾಜಕೀಯ ಗಮನ ಸೆಳೆದಿತ್ತು. ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಖಚಿತ ಆಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಬಗ್ಗೆ ದೊಡ್ಡ ಚರ್ಚೆ ಪ್ರಾರಂಭ ಆಗಿದೆ. 

Written by - Prashobh Devanahalli | Last Updated : Jun 5, 2024, 11:54 AM IST
  • ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ Vs ದೇವೇಗೌಡರ ಕುಟುಂಬ ಎಂಬ ವಾತಾವರಣ
  • ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಖಚಿತ ಆಗಿದೆ.
  • ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಬಗ್ಗೆ ದೊಡ್ಡ ಚರ್ಚೆ ಪ್ರಾರಂಭ ಆಗಿದೆ.
ಗೌಡರ ಗದ್ದಲ :ಲೋಕಸಭೆ ನಂತರವೂ ಮುಂದುವರೆಯುತ್ತಾ H D ಕುಟುಂಬ vs D K ಬ್ರದರ್ಸ್ ಕದನ? title=

DK Brothers vs HD Family: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಹಾಗೂ ಮಂಡ್ಯ ಸಮರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಗೆಲುವು ಸಾದಿಸಿದXದ್ದಾರೆ. ಆದರೆ, ದೇವೇಗೌಡರ ಕುಟುಂಬ ಹಾಗೂ ಡಿ ಕೆ ಸಹೋದರರ ನಡುವಿನ ಕದನ ಇಲ್ಲಿಗೆ ಮುಗಿಯುವ ಯಾವ ಲಕ್ಷಣ ಕಾಣಿಸುತ್ತಿಲ್ಲ ಯಾಕೆ ಅಂತೀರಾ? 

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ  ಡಿಕೆ ಬ್ರದರ್ಸ್ Vs ದೇವೇಗೌಡರ ಕುಟುಂಬ ಎಂಬ ವಾತಾವರಣ ಇದ್ದು ಹಳೆ ಮೈಸೂರು ರಾಜಕೀಯ ಗಮನ ಸೆಳೆದಿತ್ತು. ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಖಚಿತ ಆಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಬಗ್ಗೆ ದೊಡ್ಡ ಚರ್ಚೆ ಪ್ರಾರಂಭ ಆಗಿದೆ. 

ಇದನ್ನೂ ಓದಿ- ಪ್ರಧಾನಿ ಮೋದಿ ನೇತೃತ್ವದಲ್ಲಿ NDA ಸರ್ಕಾರ ರಚನೆ: ಬಸವರಾಜ್ ಬೊಮ್ಮಾಯಿ

ಈ ಪೈಕಿ ಲೋಕಸಭೆಯಲ್ಲಿ ಪರಾಜಯ ಹೊಂದಿದ ಡಿಕೆ ಸುರೇಶ್ (DK Suresh) ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗುತ್ತಾರಾ ? ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಮತ್ತೊಂದು ಕಡೆ ಜೆಡಿಎಸ್ ಪಾಳಯದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪುತ್ರ ನಿಖಿಲ್ ರನ್ನ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸುವ ಬಗ್ಗೆ  ಚಿಂತನೆ ನಡೆಸಿದ್ದಾರೆ ಎಂದು ಮಾತುಕತೆ ಶುರುವಾಗಿದೆ. ಈ ಕಾರಣ ಲೋಕಸಭೆಯಲ್ಲಿ ಶುರುವಾಗಿದ್ದ ಗೌಡರ ಗದ್ದಲ ಇನ್ನೂ ಮುಂದುವರೆಯುವ ಲಕ್ಷಣ ಕಾಣಿಸುತ್ತಿದೆ.

ಮತ್ತೆ ಹಣಾಹಣಿಗೆ  ದೇವೇಗೌಡರ ಕುಟುಂಬ Vs ಡಿಕೆ ಬ್ರದರ್ಸ್? ಕಾರ್ಯಕರ್ತರ ಜೋಶ್!: 
ಲೋಕಸಭಾ ಚುನಾವಣೆ ನಂತರ ಮತ್ತೆ ಎರಡು ಕುಟುಂಬಗಳ ಪೈಪೋಟಿಗೆ ಸಾಕ್ಷಿಯಾಗುತ್ತಾ ಚನ್ನಪಟ್ಟಣ ಉಪ ಚುನಾವಣೆ ಕಣ? "ಅಭಿಮನ್ಯು" ವಿರುದ್ಧ  ಕಣಕ್ಕೀಳಿಯಲು ಸುರೇಶ್ ಗೆ ಕಾರ್ಯಕರ್ತರ ಸಲಹೆ ನೀಡಿದ್ದು ಸೋತರೂ ವಿಚಲಿತರಾಗದ ಡಿಕೆ ಬ್ರದರ್ಸ್ ಕಣ್ಣು ಚನ್ನಪಟ್ಟಣ ಬೈ ಎಲೆಕ್ಷನ್ ಮೇಲೆ ಎಂಬ ಅಭಯ ಕೈ ಕಾರ್ಯಕರ್ತರಲ್ಲಿದೆ. 

ಇದನ್ನೂ ಓದಿ- ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್ಸಿಗರ ಕನಸು ಭಗ್ನವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಇತ್ತ ಜೆಡಿಎಸ್ ಕಾರ್ಯಕರ್ತರು ಕೋಲಾರ , ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಗೆಲುವು ಪಕ್ಷಕ್ಕೆ ಮರು ಜೀವ ತಂದಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆ. ಮತ್ತೆ ಪಕ್ಷ ಗಟ್ಟಿಯಾಗಿ ಬೆಳೆದಿರುವ ಜೊತೆಗೆ ಒಕ್ಕಲಿಗ ಮತ ದಳಕ್ಕೆ ಗಟ್ಟಿಯಾಗಿದೆ ಎಂದು ಅಂದಾಜಿಸಿದ್ದಾರೆ. ಇದಲ್ಲದೆ ಬಿಜೆಪಿಯ ಸಾಥ್ ಇದ್ದ ಸಂದರ್ಭದಲ್ಲಿ ನಿಖಿಲ್ ಗೆ ಗೆಲುವು ಸುಲಭ ಎಂಬ ಲೆಕ್ಕಾ ಎಷ್ಟು ನಿಜ ಆಗಲಿದೆ?ಚನ್ನಪಟ್ಟಣದಲ್ಲಿ ಮತ್ತೆ  ಮುನ್ನಲೆಗೆ ಬರುತ್ತಾ ಮಹಾನಾಯಕ Vs ಮಣ್ಣಿನ ಮಗ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News